ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಮಾನದಲ್ಲಿ ವಿಂಡೋ ಪ್ಯಾನಲ್ ಸಡಿಲ: ಪ್ರಶ್ನೆ ಮಾಡಿದ್ದಕ್ಕೆ ಇಷ್ಟವಿಲ್ಲದಿದ್ರೆ ಇಳಿರಿ ಎಂದ ಸಿಬ್ಬಂದಿ

Viral News: ವಿಮಾನದ ಕಿಟಕಿಯ ಪಕ್ಕದಲ್ಲಿದ್ದ ಪ್ಯಾನಲ್ ಸಡಿಲವಾಗಿರುವುದನ್ನು ಗಮನಿಸಿದ ಪ್ರಯಾಣಿಕರು ಪ್ರಶ್ನಿಸಿದಾಗ ಸ್ಪೈಸ್‌ಜೆಟ್ ಸಿಬ್ಬಂದಿಯ ನಡುವೆ ವಾಗ್ವಾದ ನಡೆಯಿತು. ವಿಮಾನವು ಪ್ರಯಾಣಕ್ಕೆ ಸುರಕ್ಷಿತವಾಗಿದೆಯೇ ಎಂದು ಪ್ರಯಾಣಿಕರು ಪ್ರಶ್ನಿಸಿದರೆ, ಯಾವುದೇ ಸುರಕ್ಷತಾ ಸಮಸ್ಯೆ ಇಲ್ಲ, ಅಸಮಾಧಾನವಿದ್ದರೆ ಹೊರಗೆ ಹೋಗಬಹುದು ಎಂದು ಸಿಬ್ಬಂದಿ ಹೇಳಿದ್ದಾರೆ.

ವಿಮಾನದ ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಬ್ಬಂದಿಯಿಂದ ನಿರ್ಲಕ್ಷ್ಯ

ವಿಮಾನದ ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದಕ್ಕೆ ದರ್ಪ ತೋರಿದ ಸಿಬ್ಬಂದಿ -

Profile
Pushpa Kumari Oct 29, 2026 6:08 PM

ನವದೆಹಲಿ, ಅ. 29: ಸಾಮಾನ್ಯವಾಗಿ ಬಸ್ ಆಗಿರಲಿ ಅಥವಾ ಫ್ಲೈಟ್ ಆಗಿರಲಿ ವಿಂಡೋ ಸೀಟ್ ಬೇಕೆಂಬ ಹಂಬಲ ಹೆಚ್ಚಿನ ಪ್ರಯಾಣಿಕರಿಗೆ ಇರುತ್ತದೆ. ಹೀಗೆ ಇಷ್ಟಪಟ್ಟು ವಿಮಾನದ ವಿಂಡೋ ಸೀಟ್‌ ಬುಕ್‌ ಮಾಡಿಯ ಪ್ರಯಾಣಿಕರೊಬ್ಬರಿಗೆ ಭಯಾನಕ ಅನುಭವವಾಗಿದೆ. ವಿಮಾನದ ಕಿಟಕಿ ಭಾಗದ ಪ್ಯಾನಲ್ ಸಡಿಲವಾಗಿರುವುದನ್ನು ಕಂಡು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ  ಪ್ರಶ್ನೆ ಮಾಡಿದ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಇಷ್ಟವಿಲ್ಲದಿದ್ದರೆ ವಿಮಾನದಿಂದ ಕೆಳಗಿಳಿಯಿರಿ ಎಂದು ಗದರಿದ್ದಾರೆ. ಪ್ರಸ್ತುತ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ (Viral News) ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಮಾನದ ಕಿಟಕಿಯ ಪಕ್ಕದಲ್ಲಿದ್ದ ಪ್ಯಾನಲ್ ಸಡಿಲವಾಗಿರುವುದನ್ನು ಗಮನಿಸಿದ ಪ್ರಯಾಣಿಕರು ಪ್ರಶ್ನಿಸಿದಾಗ ಸ್ಪೈಸ್‌ಜೆಟ್ ಸಿಬ್ಬಂದಿಯ ನಡುವೆ ವಾಗ್ವಾದ ನಡೆಯಿತು. ವಿಮಾನವು ಪ್ರಯಾಣಕ್ಕೆ ಸುರಕ್ಷಿತವಾಗಿದೆಯೇ ಎಂದು ಪ್ರಯಾಣಿಕರು ಪ್ರಶ್ನಿಸಿದರೆ, ಯಾವುದೇ ಸುರಕ್ಷತಾ ಸಮಸ್ಯೆ ಇಲ್ಲ, ಅಸಮಾಧಾನ ವಿದ್ದರೆ ಹೊರಗೆ ಹೋಗಬಹುದು ಎಂದು ಹೇಳಿದ್ದಾರೆ.

ವಿಡಿಯೊ ನೋಡಿ:

​ವಿಮಾನವೇರಿದ ಪ್ರಯಾಣಿಕರೊಬ್ಬರು ಕಿಟಕಿ ಪಕ್ಕದ ಕವರಿಂಗ್ ಸಡಿಲವಾಗಿದೆ ಎಂದು ಭದ್ರತೆ ಮತ್ತು ಸುರಕ್ಷತೆಯ ಕುರಿತು ವಿಮಾನ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆದರೆ ಪ್ರಯಾಣಿಕರ ಪ್ರಶ್ನೆಗೆ ಸರಿಯಾದ ವಿವರಣೆ ನೀಡುವ ಬದಲು ಅಸಮಾಧಾನವಿದ್ದರೆ ವಿಮಾನದಿಂದ ಹೊರಟುಹೋಗಬಹುದು ಎಂದು ಸಿಬ್ಬಂದಿ ಉತ್ತರ ನೀಡಿದ್ದಾರೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಕಿಡಿಕಾರಿದ್ದು, ತಾವು ಪ್ರಯಾಣಿಸಲು ಹಣ ಕೊಟ್ಟಿದ್ದೇವೆ. ಸುರಕ್ಷತೆಯ ಬಗ್ಗೆ ಕೇಳಿದರೆ ಬೆದರಿಸುವ ಅಥವಾ ಇಳಿದು ಹೋಗಿ ಎಂದು ಹೇಳುವ ಹಕ್ಕು ನಿಮಗಿಲ್ಲ. ಸುರಕ್ಷತೆಗೆ ಏನು ಗ್ಯಾರಂಟಿ ನೀಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು

ವಿಡಿಯೊದಲ್ಲಿ, ಪ್ರಯಾಣಿಕರು ಸಡಿಲವಾಗಿರುವ ಕಿಟಕಿಯ ಕವರ್ ಅನ್ನು ತೋರಿಸುತ್ತಾ, ಅದರ ಸ್ಥಿತಿಯ ಬಗ್ಗೆ ವಿವರಿಸುತ್ತ ವಿಮಾನಯಾನ ಸಿಬ್ಬಂದಿಯನ್ನು ಪ್ರಶ್ನಿಸುತ್ತಿರುವುದು ಕಂಡುಬಂದಿದೆ.  ವಿಮಾನವು ಪ್ರಯಾಣಕ್ಕೆ ಯೋಗ್ಯವಾಗಿದೆಯೇ ಎಂಬ ಬಗ್ಗೆ ಅವರು ಕಳವಳ ವ್ಯಕ್ತಪಡಿಸುತ್ತಾರೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ತಮ್ಮ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಕೇಳುವ ಸಂಪೂರ್ಣ ಹಕ್ಕು ಪ್ರಯಾಣಿಕರಿಗೆ ಇದೆ ಎಂದಿದ್ದಾರೆ. ಒಬ್ಬರು, ʼʼಸಿಬ್ಬಂದಿ ಆ ಸಮಸ್ಯೆಯ ಬಗ್ಗೆ ಸ್ಪಷ್ಟವಾಗಿ ವಿವರಿಸಬೇಕಿತ್ತುʼʼ ಎಂದು ಹೇಳಿದ್ದಾರೆ.