ನಿತೀಶ್ ಅನುಪಸ್ಥಿತಿಯಲ್ಲಿ ಜೆಡಿಯು ಭವಿಷ್ಯ ಬಿಗಿಯಾಗಿರುವುದೇ ?
ಪ್ರಾದೇಶಿಕ ಪಕ್ಷಗಳನ್ನು ವ್ಯವಸ್ಥಿತವಾಗಿ ಕುಗ್ಗಿಸುವ ಬಿಜೆಪಿಯ ತಂತ್ರಗಾರಿಕೆಗಳನ್ನು ಬೇರೆ ರಾಜ್ಯಗಳಲ್ಲಿ ನೋಡಿರುವುದರಿಂದ ಜೆಡಿಯು ಭವಿಷ್ಯದ ಬಗ್ಗೆ ಚರ್ಚೆಗಳು ಶುರುವಾಗಿವೆ. “ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಸದಸ್ಯನಾಗಿದ್ದ ನಾನು ರಾಜ್ಯಸಭೆ ಸದಸ್ಯ ನಾಗಿಯೂ ಅನುಭವ ಪಡೆಯಬೇಕು ಎಂದು ಮತ್ತೆ ಸಂಸತ್ತಿಗೆ ತೆರಳುತ್ತಿದ್ದೇನೆ" ಎಂದು ನಿತೀಶ್ ಕುಮಾರ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ದಿನದಂದು ಟ್ವೀಟ್ ಮಾಡಿದ್ದರು.