ಬಿಗ್ ಬಾಸ್ ತೆಲುಗು ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಂಜನಾ
ಬಿಗ್ ಬಾಸ್ ತೆಲುಗು ಸೀಸನ್ 9ರ 10ನೇ ಸ್ಪರ್ಧಿಯಾಗಿ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಮದುವೆ, ಮಗು ಆದ ಮೇಲೆ ಸಂಜನಾ ತೆರೆ ಮರೆಗೆ ಸರಿದಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಆಕ್ಟಿವ್ ಆಗಿದ್ದ ಈ ನಟಿ ದಿಢೀರನೇ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.