ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಪದ ಮಹತ್ವ; ವಿಜ್ಞಾನ ಹೇಳುವುದೇನು?

ಜಪವನ್ನು ಎಲ್ಲಾ ಧರ್ಮದವರು ಕೂಡ ಮಾಡುತ್ತಾರೆ. ಇದನ್ನು ಪ್ರತಿನಿತ್ಯ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ. ಆದರೆ ಮೊಬೈಲ್ ಬಂದ ಮೇಲೆ ಜನರಿಗೆ ಇದರ ಅವಶ್ಯಕತೆ ಇಲ್ಲವಾಗಿದೆ. ಯಾಕೆಂದರೆ ಎಲ್ಲವೂ ಮೊಬೈಲ್ ನೆನಪಿಟ್ಟುಕೊಳ್ಳುತ್ತದೆ. ಆದರೂ ನಮಗೆ ಇವತ್ತು ಜಪ ಅತ್ಯವಶ್ಯಕವಾಗಿದೆ. ಈ ಬಗ್ಗೆ ವಿಜ್ಞಾನ ಹೇಳುವುದೇನು? ಈ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಜಪದ ಮಹತ್ವವೇನು ?

ಡಾ. ಸುತ್ತೂರು ಮಾಲಿನಿ -

ಬೆಂಗಳೂರು: ಜಪದ (mantra jaap) ಮುಖ್ಯ ಉದ್ದೇಶ ನೆನಪು ಮತ್ತು ಕಲಿಕೆ. ಜಪ, ಪ್ರಾರ್ಥನೆ ಎನ್ನುವುದು ಎಲ್ಲಾ ಜನಾಂಗ, ಧರ್ಮದಲ್ಲೂ ಇದೆ. ಇದು ಸಾಕಷ್ಟು ಮಂದಿಗೆ ಕಷ್ಟದಿಂದ ಹೊರಬರಲು ಸಹಾಯ ಮಾಡಿದೆ ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ (University of Mysore) ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini). ʼವಿಶ್ವವಾಣಿ ಹೆಲ್ತ್ʼ (Vishwavani Health) ಯುಟ್ಯೂಬ್‌ ಚಾನಲ್‌ನಲ್ಲಿ ಕೇಶವ್ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.



ಮೆದುಳಿನ ಮೂರು ಭಾಗಗಳಿವೆ. ಒತ್ತಡ ಉಂಟಾದ ಪರಿಸ್ಥಿತಿಯಲ್ಲಿ ಹಿಂಭಾಗದ ಮೆದುಳು ಆಕ್ಟಿವೇಟ್ ಆಗಿ ಮುಂಭಾಗದ ಮೆದುಳು ಸಂಪೂರ್ಣ. ಮುಚ್ಚುತ್ತದೆ. ಜಪವೆನ್ನುವುದು ಹಿಂಭಾಗದ ಮೆದುಳನ್ನು ಶಾಂತಗೊಳಿಸಿ ಮುಂಭಾಗದ ಮೆದುಳು ಕಾರ್ಯನಿರ್ವಹಿಸುವಂತೆ ಮಾಡಲು ಸಹಾಯ ಮಾಡುತ್ತದೆ ಎಂದರು.

Vishwavani Health: ಜೆನ್‌ ಝೀಗಳು ಇಷ್ಟಪಟ್ಟು ಸೇವಿಸುವ ಸಂಸ್ಕರಿಸಿದ ಮಾಂಸಾಹಾರದಿಂದ ಕ್ಯಾನ್ಸರ್ ಅಪಾಯ ಹೆಚ್ಚು; ಯಾಕೆ?

ಯಾವುದೇ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಲ್ಪಿಸಲು ಮುಂಭಾಗದ ಮೆದುಳು ಕಾರ್ಯನಿರ್ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಭಯ, ಒತ್ತಡ ಹೆಚ್ಚಾಗಿದ್ದಾಗ ಹಿಂಭಾಗದ ಮೆದುಳು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ. ಇದರಿಂದ ಮಂಕು ಕವಿದ ಹಾಗೆ ಆಗುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಹೃದಯದ ಬಡಿತ ಹೆಚ್ಚಾಗುತ್ತದೆ. ಆಗ ನಾವು ಜಪ ಮಾಡಿದರೆ ಹಿಂಭಾಗದ ಮೆದುಳು ಶಾಂತವಾಗಿ ಮುಂಭಾಗದ ಮೆದುಳು ಆಕ್ಟಿವೇಟ್ ಆಗಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.

ನಮ್ಮಲ್ಲಿ ಹಲವಾರು ಜಪ ನಾಮಾವಳಿಗಳು ಇವೆ. ಒಂದೊಂದು ಜಪ ಮಾಡಿದಾಗಲೂ ಬೇರೆ ಬೇರೆ ರೀತಿಯ ಪರಿಣಾಮಗಳು ಉಂಟಾಗುತ್ತದೆ. ಕೆಲವೊಂದು ಜಪಗಳು ಮೆದುಳನ್ನು ಆಕ್ಟಿವೇಟ್ ಮಾಡುತ್ತದೆ. ಇನ್ನು ಕೆಲವೊಂದು ಮೆದುಳನ್ನು ಶಾಂತಗೊಳಿಸುತ್ತದೆ. ಮಂತ್ರಗಳನ್ನು ಜೋರಾಗಿ ಹೇಳಿಕೊಂಡು ಆರಂಭದಲ್ಲಿ ಜಪ ಮಾಡಲು ಪ್ರಾರಂಭಿಸಲಾಗುತ್ತದೆ. ಬಳಿಕ ಮೆಲ್ಲಗೆ, ಅನಂತರ ಮನಸ್ಸಿನಲ್ಲೇ ಜಪ ಮಾಡಲಾಗುತ್ತದೆ. ಮನಸ್ಸಿನಲ್ಲೇ ಜಪ ಮಾಡುವುದು ಸಾಕಷ್ಟು ಒಳ್ಳೆಯದು ಎಂದು ಅವರು ಹೇಳಿದರು.

ಜಪ ಮಾಡುವುದರಿಂದ ಒತ್ತಡ ನಿರ್ವಹಣೆಯನ್ನು ಮಾಡಬಹುದು. ಮೆದುಳಿನಲ್ಲಿ ಬಳಕೆಯಾಗದೆ ಅಥವಾ ಕಡಿಮೆ ಬಳಕೆ ಮಾಡಿಕೊಳ್ಳುವ ಕಲಿಕೆ ಮತ್ತು ನೆನಪಿನ ಭಾಗವಾದ ಹಿಪೋ ಕ್ಯಾಂಪಸ್ ನಾಶವಾಗುವುದನ್ನು ಕೂಡ ಇದು ತಡೆಯುತ್ತದೆ ಎಂದರು.

ಜಪವನ್ನು ಕೇವಲ ೧೦೮ ಬಾರಿ ಮಾಡಿದಾಗ ಯಾವುದೇ ಮ್ಯಾಜಿಕ್ ಆಗೋಲ್ಲ. ಪದೇ ಪದೇ ಮಾಡುತ್ತಾ ಹೋದಂತೆ ಹೊಸ ದಾರಿಗಳು ಕಾಣಿಸಿಕೊಳ್ಳತೊಡಗುತ್ತದೆ. ಆದರೆ ಅದಕ್ಕೆ ನಿರ್ದಿಷ್ಟ ಸಮಯ ಬೇಕಾಗುತ್ತದೆ. ಜಪ ಮಾಡಿಲ್ಲದಿದ್ದರೆ ಏನೂ ತೊಂದರೆ ಆಗುವುದಿಲ್ಲ. ಆದರೆ ಫಲ ಸಿಗುವುದಿಲ್ಲ. ಜಪವನ್ನು ಮಾಡಿದಾಗ ನಾವು ಧ್ಯಾನಾವಸ್ಥೆಗೆ ಹೋಗುತ್ತೇವೆ. ಆಗ ನಮ್ಮ ಸುಪ್ತ ಮನಸ್ಸು ಆಕ್ಟಿವೇಟ್ ಆಗುತ್ತದೆ. ಅದು ಜೀವನಕ್ಕೆ ಮಾರ್ಗದರ್ಶನ ಮಾಡುತ್ತದೆ ಎಂದು ತಿಳಿಸಿದರು.

ಜಪದಿಂದ ಕಾಯಿಲೆ ವಾಸಿಯಾಗುತ್ತದೆ ಎನ್ನಲಾಗುವುದಿಲ್ಲ. ಆದರೆ ಮಾನಸಿಕ ಆರೋಗ್ಯವನ್ನು ವೃದ್ಧಿಪಡಿಸುತ್ತದೆ. ಹೊಸ ಶಕ್ತಿಯನ್ನು ನೀಡುತ್ತದೆ. ಕಷ್ಟ ಕಾಲದಲ್ಲಿ ಧೈರ್ಯಗೆಡದ ಹಾಗೆ ನಮ್ಮನ್ನು ರಕ್ಷಿಸುತ್ತದೆ. ಮನುಷ್ಯನ ಮೆದುಳು ಯಾವಾಗಲು ನಕಾರಾತ್ಮಕತೆಯನ್ನು ಬಹಳ ಬೇಗ ಆಕರ್ಷಿಸುತ್ತದೆ. ಆಗ ನಮ್ಮಲ್ಲಿ ಭಯ ತುಂಬಿಕೊಳ್ಳುತ್ತದೆ.ಜಪ ನಮ್ಮಲ್ಲಿ ನಂಬಿಕೆಯನ್ನು ಹೆಚ್ಚಿಸುತ್ತದೆ. ನಂಬಿಕೆ ಮತ್ತು ಭಯ ಒಟ್ಟಿಗೆ ಇರುವುದಿಲ್ಲ. ಹೀಗಾಗಿ ಜಪ ಮಾಡಿದವರಿಗೆ ಭಯ ಇರುವುದಿಲ್ಲ ಎಂದು ಅವರು ಹೇಳಿದರು.

Vishwavani health: ಗರ್ಭಿಣಿಯರು ಫೋಲಿಕ್ ಆ್ಯಸಿಡ್, ಐರನ್, ಕ್ಯಾಲ್ಸಿಯಂ ಮಾತ್ರೆಗಳನ್ನೇಕೆ ತೆಗೆದುಕೊಳ್ಳಬೇಕು?

ಅಚಲವಾದ ನಂಬಿಕೆಯೇ ನಮ್ಮ ಶಕ್ತಿಯನ್ನು ಬಳಕೆ ಮಾಡಿಕೊಳ್ಳಲು ಧೈರ್ಯವಾಗಿ ಮುನ್ನುಗ್ಗಲು ಸಹಾಯ ಮಾಡುತ್ತದೆ. ಇದರಿಂದ ಮನುಷ್ಯ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಬದುಕಿನಲ್ಲಿ ಉತ್ತಮ ದಾರಿಯಲ್ಲಿ ಸಾಗಲು ಇದು ಸಹಾಯ ಮಾಡುತ್ತದೆ ಎಂದರು.