ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KMC Hospital Mangaluru: ಹಲವು ತೊಡಕುಗಳ ನಡುವೆಯೂ ಗಾಯಿಟರ್ ಗಡ್ಡೆ ಯಶಸ್ವಿಯಾಗಿ ಹೊರತೆಗೆದ ಕೆಎಂಸಿ ವೈದ್ಯರ ತಂಡ

ದೀರ್ಘಕಾಲದಿಂದ ಬಹುಗಂಟುಗಳ ಗಾಯಿಟರ್ (ಥೈರಾಯ್ಡ್‌ ಗಡ್ಡೆ) ಸಮಸ್ಯೆಯಿಂದ ಬಳಲುತ್ತಿದ್ದ 72 ವರ್ಷದ ವೃದ್ಧನಿಗೆ ಹಲವು ಆರೋಗ್ಯ ತೊಡಕುಗಳ ನಡುವೆಯೂ ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಿಟರ್ ಗಡ್ಡೆಯು 18x12 ಸೆ.ಮೀಟರ್ ದೊಡ್ಡದಾಗಿತ್ತು. ರೋಗಿಯ ವಯಸ್ಸು, ವಿವಿಧ ಆರೋಗ್ಯ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆಯ ಅಪಾಯಗಳ ನಡುವೆಯೂ ಈ ಕ್ಲಿಷ್ಟವಾದ ಶಸ್ತ್ರಚಿಕಿತ್ಸೆಯನ್ನ ವಿವಿಧ ತಜ್ಞರ ತಂಡವು ಯಶಸ್ವಿಗೊಳಿಸಿದೆ.

ಗಾಯಿಟರ್ ಗಡ್ಡೆ ಯಶಸ್ವಿಯಾಗಿ ಹೊರತೆಗೆದ ಕೆಎಂಸಿ ವೈದ್ಯರ ತಂಡ

ಕೆಎಂಸಿ ವೈದ್ಯರ ತಂಡ -

Profile Pushpa Kumari Oct 31, 2025 7:27 PM

ಮಂಗಳೂರು: ದೀರ್ಘಕಾಲದಿಂದ ಬಹುಗಂಟುಗಳ ಗಾಯಿಟರ್ (ಥೈರಾಯ್ಡ್‌ ಗಡ್ಡೆ)ಯಿಂದ ಬಳಲುತ್ತಿದ್ದ 72 ವರ್ಷದ ವೃದ್ಧನಿಗೆ ಹಲವು ಆರೋಗ್ಯ ತೊಡಕುಗಳ ನಡುವೆಯೂ ಮಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ (KMC Hospital Mangaluru) ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ರೋಗಿಯ ವಯಸ್ಸು, ವಿವಿಧ ಆರೋಗ್ಯ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆಯ ಅಪಾಯಗಳ ನಡುವೆಯೂ ಈ ಕ್ಲಿಷ್ಟವಾದ ಶಸ್ತ್ರ ಚಿಕಿತ್ಸೆಯನ್ನ ಡಾ. ಅವಿನಾಶ್ ಕೆ. (ಲ್ಯಾಪರೊಸ್ಕೋಪಿಕ್ ಮತ್ತು ಜನರಲ್‌ ಸರ್ಜನ್), ಡಾ. ಮನೋಹರ್ ಪೈ (ಜನರಲ್ ಸರ್ಜನ್) ಮತ್ತು ಅರಿವಳಿಕೆ ತಜ್ಞರಾದ ಡಾ. ಸುನಿಲ್ ಮತ್ತು ಡಾ. ಫ್ರೀಡಾ ಸೇರಿದಂತೆ ವಿವಿಧ ತಜ್ಞರ ತಂಡವು ಯಶಸ್ವಿಗೊಳಿಸಿದೆ.

ಏನಿದು ಪ್ರಕರಣ?

ರೋಗಿಯು ಆಸ್ಪತ್ರೆಗೆ ಬಂದಾಗ ಎದ್ದು ಕಾಣುವಂತಹ ಗಾಯಿಟರ್ ಗಂಟು ಉಂಟಾಗಿತ್ತು. ಆದರೆ ಅದೃಷ್ಟವಶಾತ್ ಲಿಂಫಾಡೆನೊಪತಿಯ ಲಕ್ಷಣಗಳು ಇರಲಿಲ್ಲ. ಶಸ್ತ್ರಚಿಕಿತ್ಸೆ ನಡೆಸಲು ರೋಗಿಯ ಗಾಯಿಟರ್ ಗಡ್ಡೆಯ ಗಾತ್ರ ಮಾತ್ರವಲ್ಲ ದೇಹದಲ್ಲಿದ್ದ ವಿವಿಧ ಆರೋಗ್ಯ ಸಮಸ್ಯೆಯೂ ತಡೆ ಯೊಡ್ಡುವಂತಿತ್ತು. ಉಸಿರಾಟದ ಸಮಸ್ಯೆ, ಸೆರೆಬ್ರೊವ್ಯಾಸ್ಕ್ಯೂಲರ್ ರೋಗ, ಹೈಪರ್‍ಟೆನ್ಷನ್‌, ಬೆನಿಗ್ನ್‌ ಪ್ರೊಸ್ಟಾಟಿಕ್‌ ಹೈಪರ್‍ಟ್ರೊಫಿ (ಬಿಪಿಎಚ್‌) ಮತ್ತು ಮಧುಮೇಹ, ಅರವಳಿಕೆ ಮತ್ತು ಶಸ್ತ್ರಚಿಕಿತ್ಸೆಯ ಅಪಾಯವನ್ನು ಹೆಚ್ಚಿಸಿತ್ತು. ಶಸ್ತ್ರಚಿಕಿತ್ಸೆ ಸಮಯದಲ್ಲಿ ರೋಗಿಯಲ್ಲಿನ ಗಾಯಿಟರ್ ಗಡ್ಡೆಯು 18x12 ಸೆ.ಮೀಟರ್ ದೊಡ್ಡದಾಗಿತ್ತು.

ಈ ಕುರಿತು ಮಾತನಾಡಿದ, ಲ್ಯಾಪರೊಸ್ಕೋಪಿಕ್ ಮತ್ತು ಜನರಲ್‌ ಸರ್ಜನ್‌ ಡಾ. ಅವಿನಾಶ್ ಕೆ., "ಈ ಪ್ರಕರಣವು ವಿವಿಧ ದೀರ್ಘಕಾಲದ ಆರೋಗ್ಯ ಸಮಸ್ಯೆಯ ಜತೆ ಹೆಚ್ಚಿನ ಅಪಾಯ ಹೊಂದಿರುವ ಹಿರಿಯ ವಯಸ್ಸಿನ ರೋಗಿಗಳಲ್ಲಿ ಕೂಡ ದೊಡ್ಡದಾದ ಬಹು ಗಂಟುಗಳ ಗಾಯಿಟರ್ ಗಡ್ಡೆಯನ್ನು ಸುರಕ್ಷಿತವಾಗಿ ಹೊರತೆಗೆಯಬಹುದು ಎಂಬುದಕ್ಕೆ ಉದಾಹರಣೆ. ಸಂಯೋಜಿತ ಕಾರ್ಯ, ಪೆರಿಆಪರೇಟಿವ್‌ ಕೇರ್ ಮತ್ತು ಎಚ್ಚರಿಕೆಯ ಶಸ್ತ್ರಚಿಕಿತ್ಸಾ ಕ್ರಮಗಳು ಚಿಕಿತ್ಸೆಯಲ್ಲಿನ ತೊಡಕು ಗಳನ್ನು ನಿವಾರಿಸಲು ನೆರವಾಗುತ್ತದೆ” ಎಂದರು.

ಇದನ್ನು ಓದಿ:Spinal health: ಬೆನ್ನು ಮೂಳೆಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಗಾಯಿಟರ್‌ನ ಗಾತ್ರ, ವಿಕೃತ ಅಂಗರಚನಾ ಶಾಸ್ತ್ರ, ದಟ್ಟವಾದ ಅಂಟಿಕೊಳ್ಳುವಿಕೆಗಳು ಮತ್ತು ಪ್ರಮುಖ ನರನಾಳೀಯ ರಚನೆಗಳಿಗೆ ಗಡ್ಡೆಯು ಹತ್ತಿರವಾಗಿದ್ದರಿಂದ ಶಸ್ತ್ರಚಿಕಿತ್ಸೆ ತಾಂತ್ರಿಕವಾಗಿ ಕಷ್ಟವಾಗಿತ್ತು. ಸೀಮಿತ ಕುತ್ತಿಗೆ ವಿಸ್ತರಣೆಯು ಮತ್ತಷ್ಟು ಸಂಕೀರ್ಣಗೊಳಿಸಿತ್ತು. ಆದಾಗ್ಯೂ, ನಿಖರವಾದ ಯೋಜನೆ ಮೂಲಕ, ಚಿಕಿತ್ಸಾ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಡೆಸ ಲಾಯಿತು. ಶಸ್ತ್ರಚಿಕಿತ್ಸೆಯ ನಂತರದ ಐದನೇ ದಿನ ರೋಗಿಯನ್ನು ಸುರಕ್ಷಿತವಾಗಿ ಡಿಸ್ಚಾರ್ಜ್‌ ಮಾಡಲಾಗಿದೆ.

ಕೆಎಂಸಿ ಆಸ್ಪತ್ರೆ ಮತ್ತೊಮ್ಮೆ ಹೆಚ್ಚಿನ ಅಪಾಯದ ಸಂದರ್ಭಗಳಲ್ಲಿಯೂ ಸಹ ಸುಧಾರಿತ ಶಸ್ತ್ರಚಿಕಿತ್ಸಾ ಆರೈಕೆ ನೀಡುವ ತನ್ನ ಬದ್ಧತೆಗೆ ಈ ಪ್ರಕರಣ ಸಾಕ್ಷಿಯಾಗಿದೆ. ಈ ಹಂತದಲ್ಲಿ ತಜ್ಞರ ತಂಡಗಳು ಮತ್ತು ಆಧುನಿಕ ಮೂಲ ಸೌಕರ್ಯಗಳ ಬೆಂಬಲದೊಂದಿಗೆ ವಿಶೇಷ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ.