ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಸಕಲಕಲಾ ವಲ್ಲಭ, ಎಲ್ಲಾ ಆಟ ಬಲ್ಲವ ಎಂದ ಗಿಲ್ಲಿ! ಸ್ಪರ್ಧಿಗಳಿಗೆ ನೀವು ಕೊಡಲು ಬಯಸೋ ಬಿರುದು ಏನು?

Gilli Nata: ಬಿಗ್‌ ಬಾಸ್‌ ಸೀಸನ್‌ 12ರ ಫಿನಾಲೆ ಸಮೀಪಿಸುತ್ತಿದ್ದು, ಮನೆಯೊಳಗಿನ ಪೈಪೋಟಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈಗಾಗಲೇ ರಾಶಿಕಾ ಎಲಿಮಿನೇಟ್‌ ಆಗಿದ್ದು, ಉಳಿದ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಬಿಗ್‌ ಬಾಸ್‌ ಒಂದು ಚಟುವಟಿಕೆ ನೀಡಿದ್ದಾರೆ. ಇದರಲ್ಲಿ ಅಭಿಮಾನಿಗಳು ನಿಮಗೆ ಯಾವ ಬಿರುದು ನೀಡಬೇಕು ಎಂದು ಬಯಸುವಿರಿ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕೇಳಿದ್ದಾರೆ. ಗಿಲ್ಲಿ ಅವರು ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದು ಬರೆದಿದ್ದಾರೆ.

ಸಕಲಕಲಾ ವಲ್ಲಭ, ಎಲ್ಲಾ ಆಟ ಬಲ್ಲವ ಎಂದ ಗಿಲ್ಲಿ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 12, 2026 7:08 PM

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಫಿನಾಲೆ ಸಮೀಪಿಸುತ್ತಿದ್ದು, ಮನೆಯೊಳಗಿನ ಪೈಪೋಟಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈಗಾಗಲೇ ರಾಶಿಕಾ ಎಲಿಮಿನೇಟ್‌ (Eliminate) ಆಗಿದ್ದು, ಉಳಿದ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಬಿಗ್‌ ಬಾಸ್‌ ಒಂದು ಚಟುವಟಿಕೆ ನೀಡಿದ್ದಾರೆ. ಇದರಲ್ಲಿ ಅಭಿಮಾನಿಗಳು ನಿಮಗೆ ಯಾವ ಬಿರುದು (Title) ನೀಡಬೇಕು ಎಂದು ಬಯಸುವಿರಿ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕೇಳಿದ್ದಾರೆ. ಗಿಲ್ಲಿ (Gilli Nata) ಅವರು ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದು ಬರೆದಿದ್ದಾರೆ.

ಧ್ರುವಂತ್‌ ಕೊಟ್ಟ ಬಿರುದು ಏನು?

ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದಾರೆ. ಅಭಿಮಾನಿಗಳು ಯಾವ ಬಿರುದುಯಿಂದ ಗುರುತಿಸಬೇಕು ಅಂತ ಹೇಳಿದ್ದಾರೆ. ಆಗ ಗಿಲ್ಲಿ ಅವರು ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದು ಬರೆದಿದ್ದಾರೆ. ಇನ್ನು ಧ್ರುವಂತ್‌ ಅವರು ಡ್ಯಾಶಿಂಗ್‌ ಧ್ರುವಂತ್‌ ಅಂತ ಬರೆದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟ ಕಾವ್ಯ! ಗಿಲ್ಲಿ ನಟ ಕೊಟ್ಟ ಗಿಫ್ಟ್‌ ಏನು?

ಆಗ ಅಶ್ವಿನಿ ಅವರು ಸೀಕ್ರೆಟ್‌ ರೂಂ ಹೀರೋ ಅಂತ ಸಲಹೆ ಕೊಟ್ಟರು. ಆಗ ರಕ್ಷಿತಾ ಇದ್ದವರು, ಧನುಷ್‌ ಅವರ ಬಳಿ ಸೀಕ್ರೆಟ್‌ ರೂಂ ಜೀರೋ ಎಂದಿದ್ದಾರೆ. ಆಗ ಧನುಷ್‌ ಅವರು, ಟಾರ್ಗೆಟ್‌ ಮಾಡ್ತಾರೆ ಅನ್ನಿಸಿದಾಗ ದೊಡ್ಡ ಘರ್ಜನೆಯೊಂದಿಗೆ ಬಂದಿದ್ದೀನಿ ಎಂದರು.

ಸೀಸನ್‌ ಬ್ರ್ಯಾಂಡ್‌

ಅಶ್ವಿನಿ ಅವರು, ಛಲಗಾರ್ತಿ ಅಶ್ವಿನಿ ಎಂದು ಕೊಡುವೆ. ಅನೇಕ ಟೈಟಲ್‌ ಕೊಡ್ತಾ ಇರ್ತಾರೆ. ಅದು ಯಾವುದೂ ತೆಗೆದುಕೊಳ್ಳದೇ ನಮ್ಮ ಒಳಗೆ ಒಂದು ಫೈರ್‌ ಇದ್ದರೆ ನಾವು ಏನಾದದೂ ಒಂದು ಮಾಡಲು ಸಾಧ್ಯ. ನಾನು ಬಿಗ್‌ ಬಾಸ್‌ ಬ್ರ್ಯಾಂಡ್‌ ಸೀಸನ್‌ 12 ಎಂದು ಅಶ್ವಿನಿ ಹೇಳಿದರು.

ಇದು ಫಿನಾಲೆ ವಾರ ಆಗಿರುವುದರಿಂದ ಎರಡು ಸಲ ವೋಟಿಂಗ್‌ ಲೈನ್ಸ್‌ ತೆರೆದುಕೊಳ್ಳಲಿದೆ. ಮೊದಲು ಮಿಡ್‌ ವೀಕ್‌ ಎಲಿಮಿನೇಷನ್‌ಗೆಂದು ಒಂದು ವೋಟಿಂಗ್‌ ಇರಲಿದೆ. ಅದು ಮಂಗಳವಾರ ಸಂಜೆವರೆಗೂ ನಡೆಯಲಿದೆ. ಮಿಡ್‌ ವೀಕ್‌ ಎಲಿಮಿನೇಷನ್‌ ಆದಮೇಲೆ ಉಳಿಯುವ ಆರು ಮಂದಿ ಫಿನಾಲೆಗೆ ಎಂಟ್ರಿ ಆಗಲಿದ್ದು, ಆನಂತರ ವಿನ್ನರ್‌ ಯಾರಾಗಬೇಕೆಂದು ವೋಟಿಂಗ್‌ ನಡೆಯಲಿದೆ. ಭಾನುವಾರ (ಜ.18) ರಾತ್ರಿ ವಿನ್ನರ್‌ ಯಾರು ಎಂಬುದು ಗೊತ್ತಾಗಲಿದೆ.

ಇದನ್ನೂ ಓದಿ: Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ರಜತ್ ಕಿಶನ್ ಹೇಳಿದ್ದೇನು?

ಸದ್ಯ ಗಿಲ್ಲಿ ನಟ ಅವರ ಬಗ್ಗೆ ದೊಡ್ಡಮಟ್ಟದ ಕ್ರೇಜ್‌ ಶುರುವಾಗಿದೆ. ಈಗಾಗಲೇ ಗಿಲ್ಲಿಗೆ ವೋಟ್‌ ಮಾಡಿ ಎಂದು ಫ್ಯಾನ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಕ್ಯಾಂಪೇನ್‌ ಮಾಡುತ್ತಿದ್ದಾರೆ.