ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ವಿದೇಶಕ್ಕಿಂತ ಹಳ್ಳಿಯೇ ಸುಂದರ, ‌ತಪ್ಪಿತಸ್ಥ ಭಾವನೆ ಕಾಡುತ್ತಿದೆʼʼ ಎಂದು ಕೇರಳಂ ಯುವಕ ಹೇಳಿದ್ದೇಕೆ?

Viral Video: ಹಳ್ಳಿಯ ಸರಳ ಜೀವನ, ಸ್ವಚ್ಛ ಪರಿಸರ ಇದನ್ನೆಲ್ಲ ಮಿಸ್ ಮಾಡಿಕೊಳ್ಳುವವರು ಬಹುತೇಕ ಮಂದಿ ಇದ್ದಾರೆ. ಪ್ರಸ್ತುತ ಲಂಡನ್‌ನಲ್ಲಿ ಉದ್ಯೋಗ ಮಾಡುತ್ತಿರುವ ಕೇರಳಂ ಕಂಟೆಂಟ್ ಕ್ರಿಯೇಟರ್‌ ಒಬ್ಬರು ಹಳ್ಳಿಯನ್ನು ತೊರೆದು ಬಂದ ಬಗ್ಗೆ ಬೇಸರ ಹೊರ ಹಾಕಿದ್ದಾರೆ‌. ಕೆಲವೊಮ್ಮೆ ವಿದೇಶದಲ್ಲಿ ಕೆಲಸ ಮಾಡಲು ಹಳ್ಳಿ ಬಿಟ್ಟು ಬಂದಿದ್ದಕ್ಕಾಗಿ ತಪ್ಪಿತಸ್ಥ ಭಾವನೆ ಕಾಡುತ್ತದೆ ಎಂದು ಸೋಷಿಯಲ್ ಮೀಡಿಯಾ ಪೋಸ್‌ನಲ್ಲಿ ಬರೆದಿದ್ದಾರೆ.

ಹಳ್ಳಿ ಬದುಕು ತ್ಯಜಿಸಿದ ಬಗ್ಗೆ ಬೇಸರ ಹೊರಹಾಕಿದ ಕೇರಳಂ ಯುವಕ

ಹಳ್ಳಿ ಬದುಕು ತ್ಯಜಿಸಿದ ಬಗ್ಗೆ ಬೇಸರ ಹೊರ ಹಾಕಿದ ಕೇರಳಂ ಯುವಕ -

Profile
Pushpa Kumari May 18, 2026 7:32 PM

ತಿರುವನಂತಪುರಂ, ಮೇ 18: ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ ಬಹುತೇಕರಿಗೆ ತಮ್ಮ ತಾಯ್ನಾಡಿನ ನೆನಪು ಮರುಕಳಿಸುತ್ತದೆ. ಹಳ್ಳಿಯ ಸರಳ ಜೀವನ, ಸ್ವಚ್ಛ ಪರಿಸರ ಇದನ್ನೆಲ್ಲ ಮಿಸ್ ಮಾಡಿಕೊಳ್ಳುವವರು ಬಹುತೇಕ ಮಂದಿ ಇದ್ದಾರೆ. ಪ್ರಸ್ತುತ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಉದ್ಯೋಗ ಮಾಡುತ್ತಿರುವ ಕೇರಳಂನ ಕಂಟೆಂಟ್ ಕ್ರಿಯೇಟರ್ ಒಬ್ಬರು ಹಳ್ಳಿಯನ್ನು ತೊರೆದು ಬಂದ ಬಗ್ಗೆ ಬೇಸರ ಹೊರ ಹಾಕಿದ್ದಾರೆ‌. ಕೆಲವೊಮ್ಮೆ ವಿದೇಶದಲ್ಲಿ ಕೆಲಸ ಮಾಡಲು ಹಳ್ಳಿ ಬಿಟ್ಟು ಬಂದಿದ್ದಕ್ಕಾಗಿ ತಪ್ಪಿತಸ್ಥ ಭಾವನೆ ಕಾಡುತ್ತದೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ (Viral Video) ಬರೆದಿದ್ದಾರೆ.

ಇಂಗ್ಲೆಂಡ್‌ನಲ್ಲಿ ನೆಲೆಸಿರುವ 25 ವರ್ಷದ ಯುವಕ ವಿಷ್ಣು ವಿಜಯಧರನ್ ಮೇ 2ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಗ್ರಾಮೀಣ ಕೇರಳದಲ್ಲಿ ಕಳೆದ ಸಮಯವನ್ನು ತೋರಿಸುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಕ್ಲಿಪ್ ಮೂಲಕ, ಅವರು ಪ್ರಕೃತಿ, ಕುಟುಂಬ ಮತ್ತು ಮನೆಯಲ್ಲಿ ತಯಾರಿಸಿದ ಆಹಾರದಿಂದ ಸುತ್ತುವರಿದಿರುವ ತಮ್ಮ ಶಾಂತಿಯುತ ಹಳ್ಳಿ ಜೀವನದ ಒಂದು ಭಾಗವನ್ನು ವೀಕ್ಷಕರಿಗೆ ತೋರಿಸಿದ್ದಾರೆ

ವಿಡಿಯೊ ನೋಡಿ:

ತಮ್ಮ ಕುಟುಂಬದ ಮನೆಯ ಸಮೀಪವಿರುವ ಹಸಿರು ಭತ್ತದ ಗದ್ದೆಗಳ ಸುಂದರ ಚಿತ್ರಗಳೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಮನೆಯ ಸುತ್ತಲೂ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುವ ಮೂಲಕ ವಿಷ್ಣುವಿನ ಪೋಷಕರು ಸ್ವಾವಲಂಬಿ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ಬಾಳೆ ಹಣ್ಣು, ಆವಕಾಡೊ, ಹಲಸಿನ ಹಣ್ಣು, ವಿವಿಧ ತಳಿಯ ಮಾವಿನ ಹಣ್ಣುಗಳು ಅವರ ಸುತ್ತ ಕಂಡು ಬಂದಿದೆ. ವಿಡಿಯೊದ ಒಂದು ದೃಶ್ಯದಲ್ಲಿ ಕುಚ್ಚಿಲಕ್ಕಿ ಗಂಜಿ ಮತ್ತು ಹೆಸರುಕಾಳಿನೊಂದಿಗೆ ಮಾಡಿದ ಸರಳ ಸಾಂಪ್ರದಾಯಿಕ ಕೇರಳ ಉಪಹಾರವಾದ ಕಂಜಿ ಮತ್ತು ಪಯರ್ ಆನಂದಿಸುತ್ತಿರುವುದನ್ನು ತೋರಿಸಿದೆ.

ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ನಂತರ, ಸ್ಥಳೀಯವಾಗಿ ಹಿಡಿದ ತಾಜಾ ಸಿಂಪಿ (Oysters) ಮತ್ತು ಏಡಿಗಳನ್ನು ಮನೆಗೆ ತಂದು, ಅವರ ತಾಯಿ ಕೇರಳಂ ಶೈಲಿಯ ಭರ್ಜರಿ ಊಟವನ್ನು ತಯಾರಿಸಿದ್ದಾರೆ. ಕೇವಲ ಪ್ರಕೃತಿ ಮಾತ್ರವಲ್ಲದೆ, ಭಾವನಾತ್ಮಕ ಕ್ಷಣಗಳನ್ನೂ ಈ ವಿಡಿಯೊ ಸೆರೆಹಿಡಿದಿದೆ. ವಿಷ್ಣು ತಮ್ಮ ಬಾಲ್ಯದ ಸ್ನೇಹಿತರೊಂದಿಗೆ ಕಳೆದ ಸ್ಥಳ, ತಲೆಮಾರುಗಳ ಇತಿಹಾಸವಿರುವ ಹಳೆಯ ಪಾರಂಪರಿಕ ಮನೆಗಳನ್ನು ಅನ್ವೇಷಿಸುವುದು ಮತ್ತು ಕೆಲವು ಸಾಂಪ್ರದಾಯಿಕ ಮನೆಗಳ ವಿಡಿಯೊ ಹಂಚಿಕೊಂಡಿದ್ದಾರೆ.

ʼʼಇಂತಹ ಸುಂದರ ಜೀವನವನ್ನು ಬಿಟ್ಟು ವಿದೇಶದಲ್ಲಿ ನೆಲೆಸಲು ನೀವು ಸಿದ್ಧರಿದ್ದೀರಾ?" ಎಂದು ಅವರು ಪ್ರಶ್ನಿಸಿದ್ದಾರೆ. ಇಂತಹ ಸುಂದರ ಗ್ರಾಮ ಬಿಟ್ಟು ವಿದೇಶಕ್ಕೆ ತೆರಳಿದ್ದು ತಮ್ಮ ತಪ್ಪೆಂದು ಅವರು ಒಪ್ಪಿಕೊಂಡಿದ್ದಾರೆ. ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿ, "ದೇವರ ಸ್ವಂತ ದೇಶದಲ್ಲಿ ವಾಸಿಸುತ್ತಿದ್ದೇನೆ. ಅಮ್ಮ ಮತ್ತು ಅಪ್ಪನೊಂದಿಗೆ ಚಿಲ್ ಮಾಡುತ್ತಿದ್ದೇನೆ...ಇದು ನಿಜವಾದ ಜೀವನ, ಸಹೋದರ" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಇಂತಹ ಅದ್ಭುತ ಜಾಗವನ್ನು ಬಿಟ್ಟು ಹೋಗಲು ಹೇಗೆ ಮನಸ್ಸು ಮಾಡಿದ್ದೀರಿ?ʼʼ ಎಂದು ಪ್ರಶ್ನಿಸಿದ್ದಾರೆ.