Vaishnavi Gowda: ಮನಾಲಿಯಲ್ಲಿ ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್ ಮಸ್ತಿ: ವೈರಲ್ ಆಗ್ತಿದೆ ಫೋಟೋಸ್
ಮೊನ್ನೆಯಷ್ಟೆ ವೈಷ್ಣವಿ ಗೌಡ ಉತ್ತರಾಖಂಡ ಋಷಿಕೇಶ್ ಬಳಿ ಇರುವ ಶಿವಪುರಿಯಲ್ಲಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದರು. ಇದೀಗ ಈ ಜೋಡಿ ಮನಾಲಿಗೆ ಶಿಫ್ಟ್ ಆಗಿದೆ. ಇದರ ಸುಂದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ವೈಶು ಕ್ಯೂಟ್ ಆಗಿ ಕಾಣುತ್ತಿದ್ದಾರೆ.

Vaishnavi Gowda

ಅಗ್ನಿಸಾಕ್ಷಿ, ಸೀತಾ ರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗಷ್ಟೆ ಹಸೆಮಣೆ ಏರಿದ್ದರು. ಏಪ್ರಿಲ್ 14ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಶು, ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ಜೋಡಿ ಹನುಮೂನ್ ಮೂಡ್ನಲ್ಲಿದೆ. ಇಬ್ಬರೂ ಪ್ರವಾಸದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಮೊನ್ನೆಯಷ್ಟೆ ವೈಷ್ಣವಿ ಗೌಡ ಉತ್ತರಾಖಂಡ ಋಷಿಕೇಶ್ ಬಳಿ ಇರುವ ಶಿವಪುರಿಯಲ್ಲಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದರು. ಬರೋಬ್ಬರಿ 117 ಅಡಿ ಎತ್ತರದಿಂದ ನಟಿ ವೈಷ್ಣವಿ ಗೌಡ ಹಾಗೂ ಪತಿ ಅನಕೂಲ್ ಮಿಶ್ರಾ ಕೆಳಗೆ ಜಿಗಿದಿದ್ದರು. ಇದೀಗ ಈ ಜೋಡಿ ಮನಾಲಿಗೆ ಶಿಫ್ಟ್ ಆಗಿದೆ. ಇದರ ಸುಂದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ವೈಶು ಕ್ಯೂಟ್ ಆಗಿ ಕಾಣುತ್ತಿದ್ದಾರೆ.
ಮನಾಲಿಯಲ್ಲಿ ತಾವು ಕ್ಲಿಕ್ಕಿಸಿಕೊಂಡ ಸಖತ್ ಬ್ಯೂಟಿಫುಲ್ ಆಗಿರುವ ಫೋಟೋಗಳನ್ನ ನಟಿ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮನಾಲಿಯ ಸುಂದರ ಕಣಿವೆಯಲ್ಲಿ ತಾವೂ ಕೂಡ ಕಾಶ್ಮೀರಿ ಬೆಡಗಿಯಂತೆ ಡ್ರೆಸ್ ಮಾಡಿ ಫೋಟೊ ಶೂಟ್ ಮಾಡಿಕೊಂಡಿದ್ದಾರೆ. ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ್ದಾರೆ.
ವೈಷ್ಣವಿ ಗೌಡ ಒಂದು ಫೋಟೊದಲ್ಲಿ ಕೆಂಪು ಬಣ್ಣದ ಕಾಶ್ಮೀರಿ ಡ್ರೆಸ್ ಧರಿಸಿ, ಅವರಂತೆ ಸರ, ಜ್ಯುವೆಲ್ಲರಿಗಳನ್ನು ಧರಿಸಿ, ಕೆಂಪು ಸುಂದರ ಹೂವಿನ ಬುಟ್ಟಿ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಲ್ಲದೇ ಹಿಮಪರ್ವತಗಳ ಮುಂದೆ ಸ್ಟೈಲಿಶ್ ಆಗಿ ನಿಂತು ಪೋಸ್ ಕೊಟ್ಟಿದ್ದಾರೆ. ಮನಾಲಿಯ ಮಂಜು, ಹಿಮ, ಚುಮು ಚುಮು ಚಳಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ ವೈಷ್ಣವಿ.
ವೈಷ್ಣವಿ ಅವರು ಶೀಘ್ರದಲ್ಲೇ ಅದ್ಭುತವಾದ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ. ಸೀತಾ ರಾಮ ಸೀರಿಯಲ್ ಮುಗಿಯುತ್ತಿದ್ದಂತೆ ವೈಷ್ಣವಿ ಮತ್ತೆ ತೆರೆ ಮೇಲೆ ಬರೋದಕ್ಕೆ ಸಜ್ಜಾಗಿರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ವೈಷ್ಣವಿ ಅವರು ನಾನು ಕರ್ನಾಟಕ, ಕನ್ನಡ ಭಾಷೆ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ ಎಂದೂ ಹೇಳಿದ್ದರು.