ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಅರಶಿನ ಪುಡಿ ಟ್ರೆಂಡಿಂಗ್‌ ಮಾಡೋ ಮುನ್ನ ಎಚ್ಚರ... ಎಚ್ಚರ! ಇದು ದುಷ್ಟಶಕ್ತಿಗಳಿಗೆ ಆಹ್ವಾನ ನೀಡುತ್ತಂತೆ

ಇತ್ತೀಚಿನ ದಿನಗಳಲ್ಲಿ, ನೀರಿನ ಗ್ಲಾಸ್‌ಗೆ ಅರಿಶಿನ ಹಾಕುವ ಹೊಸ ಟ್ರೆಂಡ್ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇದರ ಕ್ರೇಜ್‌ಗೆ ಬಿದ್ದಿದ್ದಾರೆ. ಅನೇಕರು ಇದು ನೋಡುವುದಕ್ಕೆ ತುಂಬಾ ಚೆನ್ನಾಗಿದೆ ಎಂದರೆ, ಇನ್ನು ಕೆಲವರು ಇದನ್ನು ದುಷ್ಟಶಕ್ತಿಯನ್ನು ಆಕರ್ಷಿಸುವ ಗುಪ್ತ ತಂತ್ರ ಎಂದು ಕರೆಯುತ್ತಿದ್ದಾರೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಅರಶಿನ ಪುಡಿ ಟ್ರೆಂಡಿಂಗ್‌ ಮಾಡೋ ಮುನ್ನ ಎಚ್ಚರ... ಎಚ್ಚರ!

Profile pavithra Jun 28, 2025 10:45 AM

ಸೋಶಿಯಲ್ ಮೀಡಿಯದಲ್ಲಿ ಯಾವುದಾದರೂ ಒಂದು ಟ್ರೆಂಡ್(Trend) ಜನರ ಗಮನಸೆಳೆದು ವೈರಲ್ ಆಗುತ್ತಿರುತ್ತದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಫೋನ್ ಫ್ಲ್ಯಾಷ್‍ಲೈಟ್ ಮೇಲೆ ಇಟ್ಟ ನೀರಿನ ಗ್ಲಾಸ್‌ಗೆ ಅರಿಶಿನ(Turmeric) ಹಾಕುವ ಹೊಸ ಟ್ರೆಂಡ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನು ಇದು ಮಾಡುವುದು ಕೂಡ ತುಂಬಾ ಸುಲಭ! ಮೊಬೈಲ್ ಫ್ಲ್ಯಾಷ್‌ಲೈಟ್‌ ಆನ್ ಮಾಡಿ ಅದರ ಮೇಲೆ ನೀರು ತುಂಬಿದ ಗಾಜಿನ ಲೋಟ ಇಟ್ಟು ಆ ನೀರಿಗೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕುವುದು. ಅರಿಶಿನ ಪುಡಿ ನೀರಿನೊಂದಿಗೆ ಬೆರೆತು ನಿಧಾನಕ್ಕೆ ಕೆಳಗೆ ಇಳಿಯುವುದನ್ನು ನೋಡುವುದೇ ಕಣ್ಣಿಗೆ ಸೊಗಸು.

ಹಾಗಾಗಿ ಸೋಶಿಯಲ್‌ ಮೀಡಿಯಾ ತೆರೆದರೆ ದಿನಕ್ಕೆ ನೂರಾರು ಇದರ ವಿಡಿಯೊಗಳೇ ತುಂಬಿರುತ್ತಿತ್ತು. ಆದರೆ ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿದ ಹಾಗೇ ಆಗುತ್ತದೆ ಎಂಬ ಮಾತೊಂದು ಕೇಳಿಬರುತ್ತಿದೆ.ವೈರಲ್‌(Viral Video) ಆಗಿರುವ ಈ ವಿಡಿಯೊದ ಕುರಿತು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.ಇದು ಪ್ರಾಚೀನ ಕಾಲದಲ್ಲಿ ಮಾಡುತ್ತಿದ್ದ ನಿಗೂಢ ಆಚರಣೆಯಾಗಿದ್ದರಿಂದ ಹೀಗಾಗಿ ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಿದ್ದಾರೆ.

ಅರಿಶಿನ–ನೀರಿನ ಟ್ರೆಂಡ್ ಅಸುರಕ್ಷಿತವೇ?

ಕೆಲವರು ಇದನ್ನು ಸತ್ತ ಆತ್ಮಗಳನ್ನು ಕರೆಯುವ ಮಾಟಮಂತ್ರದ ತಂತ್ರ ಎಂದು ಕರೆದರೆ, ಕೆಲವರು ಇದು ಜನರ ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ,ಇನ್ನೊಂದಿಷ್ಟು ಜನರು ಲೈಕ್‌ಗಳು ಮತ್ತು ವೈರಲ್ ಟ್ರೆಂಡ್‌ಗಾಗಿ ನೀರನ್ನು ವೇಸ್ಟ್‌ ಮಾಡುವುದನ್ನು ಖಂಡಿಸಿದ್ದಾರೆ. ಆದರೆ ಅದೇನೇ ಇದ್ದರೂ, ಈ ಸೋಶಿಯಲ್ ಮಿಡಿಯಾ ನೆಟ್ಟಿಗರು ಮಾತ್ರ ಇದನ್ನು ಮಾಡುವುದನ್ನು ನಿಲ್ಲಿಸಿಲ್ಲ.

ಈ ಮಧ್ಯೆ, ಕಾನ್ಪುರಿಯ ಒಂದು ವಿಡಿಯೊ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಸೋಶಿಯಲ್ ಮೀಡಿಯಾ ವ್ಲಾಗರ್ ನಫಿಯಾ ಅನಸ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಈ ಟ್ರಿಕ್‌ಗೆ ಕಾನ್ಪುರಿಯ ಟ್ವಿಸ್ಟ್ ನೀಡಿದ್ದಾಳೆ. ನಫಿಯಾ ಮೊಬೈಲ್ ಟಾರ್ಚ್ ಆನ್ ಮಾಡಿ ಅದರ ಮೇಲೆ ಒಂದು ಗ್ಲಾಸ್ ನೀರು ಇಟ್ಟು, ಅದಕ್ಕೆ ಅರಿಶಿನ ಪುಡಿಯನ್ನು ಹಾಕುವ ಬದಲು ಗುಟ್ಕಾ (ಪಾನ್ ಮಸಾಲಾ) ಹಾಕಿದ್ದಾಳೆ.ವಿಡಿಯೊ ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕಚ್ಚಿದ ಹಾವನ್ನೇ ಜೀವಂತವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಓಡೋಡಿ ಬಂದ ವ್ಯಕ್ತಿ

ಈ ವಿಡಿಯೊಗೆ ಒಬ್ಬರು ಒಬ್ಬರು ತಮಾಷೆಯಾಗಿ, "ಈ ಟ್ರೆಂಡ್‍ನ ವಿನ್ನರ್" ಎಂದು ಹೇಳಿದ್ದಾರೆ. " ಅರಿಶಿನ ನೀರಿಗಿಂತ ಇದು ತುಂಬಾ ಉತ್ತಮವಾಗಿದೆ!!! ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನು ಕೆಲವರು ಅವಳು ವಿಡಿಯೊಗಾಗಿ ಇಡೀ ಪ್ಯಾಕೆಟ್ ಅನ್ನು ವ್ಯರ್ಥ ಮಾಡಿದ್ದಾಳೆ ಎಂದು ಗೇಲಿ ಮಾಡಿದ್ದಾರೆ. ಕಳೆದ ವಾರ ಹಂಚಿಕೊಳ್ಳಲಾದ ಈ ವಿಡಿಯೊ ಮೂರು ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.