ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

pavithra

Sub editor

pavitra@vishwavani.news

Articles
‌Viral Video: ಐಫೋನ್ ಬಳಸುವವರೇ... ಎಚ್ಚರ! ನಿಮಗೂ ಹೀಗಾಗ್ಬೋದು; ಈ ವಿಡಿಯೊ ನೋಡಿ

ಯುವಕನ ಜೇಬಿನಲ್ಲಿದ್ದ ಐಫೋನ್ ಬ್ಲಾಸ್ಟ್‌; ವಿಡಿಯೊ ಇದೆ

ಉತ್ತರ ಪ್ರದೇಶದ ಅಲಿಗಢದಲ್ಲಿ ವ್ಯಕ್ತಿಯೊಬ್ಬನ ಜೇಬಿನಲ್ಲಿ ಆಪಲ್ ಐಫೋನ್ 13 ಸ್ಫೋಟಗೊಂಡಿದೆ. ಪ್ರಬಲ ಸ್ಫೋಟದ ನಂತರ ಫೋನ್ ತೀವ್ರವಾಗಿ ಸುಟ್ಟುಹೋಗಿರುವುದು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಈಗ ವೈರಲ್(Viral Video) ಆಗಿದೆ.

‌Viral Video: ಒಂದಲ್ಲ... ಎರಡಲ್ಲ ಬರೋಬ್ಬರಿ 12ಕಾರುಗಳು! ಈ ಕಿಡಿಗೇಡಿ ಮಾಡಿದ್ದೇನು ಗೊತ್ತಾ? ಬೆಚ್ಚಿಬೀಳಿಸುವ ವಿಡಿಯೊ ವೈರಲ್

12ಕಾರುಗಳನ್ನು ಪುಡಿಗಟ್ಟಿದ ಕಿಡಿಗೇಡಿ- ವಿಡಿಯೊ ಇದೆ

ಜಬಲ್ಪುರದ ಪಾಂಡೆ ಚೌಕ್‍ನಲ್ಲಿ ವ್ಯಕ್ತಿಯೊಬ್ಬ ಯಾವುದೇ ಕಾರಣವಿಲ್ಲದೇ ನಿಲ್ಲಿಸಿದ್ದ 12ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಕಿಟಕಿಗಳನ್ನು ಒಡೆದು ಹಾಕಿದ್ದಾನೆ. ಈ ಘಟನೆಯ ದೃಶ್ಯ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದನ್ನು ಗಮನಿಸಿದ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Viral Video: ಬಾಯಲ್ಲಿ ನೀರೂರಿಸುವ 'ಫ್ರೂಟ್ ಐಸ್ ಗೋಲಾ'; ಕ್ಯಾನ್ಸರ್‌ಗೆ ಆಹ್ವಾನ  ಎಂದ  ನೆಟ್ಟಿಗರು!

ಸಿಕ್ಕಾಪಟ್ಟೆ ವೈರಲ್‌ ಆದ ʼಫ್ರೂಟ್ ಐಸ್ ಗೋಲಾʼ; ನೆಟ್ಟಿಗರು ಹೇಳಿದ್ದೇನು?

ರಸ್ತೆ ಬದಿಯ ಮಾರಾಟಗಾರನೊಬ್ಬ ಬಣ್ಣಗಳನ್ನು ಮಿಕ್ಸ್ ಮಾಡಿದ ಹಣ್ಣುಗಳನ್ನು ತಯಾರಿಸಿದ 'ಗೋಲಾ'ದ ವಿಡಿಯೊ ವೈರಲ್(Viral Video) ಆಗಿದೆ. ಗುಜರಾತ್‍ನ ಅಹ್ಮದಾಬಾದ್‍ನ ಫುಡ್ ಸ್ಟ್ರೀಟ್‍ನಲ್ಲಿ ಈ ಖಾದ್ಯವನ್ನು ನೀಡಲಾಗುತ್ತದೆಯಂತೆ. ಇದನ್ನು ಕಂಡು ಕೆಲವು ನೆಟ್ಟಿಗರು ಬಾಯಲ್ಲಿ ನೀರು ಸುರಿಸಿದ್ದಾರೆ.ಆದರೆ ಈ ಬಣ್ಣಗಳಿಂದ ತಯಾರಿಸಿದ ಗೋಲಾ ತಿಂದ್ರೆ ಆರೋಗ್ಯದ ಗತಿಯೇನು ಎಂಬ ಚಿಂತೆ ಕೂಡ ಕಾಡ್ತಿದೆಯಂತೆ!

Viral Video: ಓಲ್ಡ್‌ ಈಸ್‌ ಗೋಲ್ಡ್‌.... ಅಜ್ಜ-ಅಜ್ಜಿಯ ಕ್ಯೂಟ್‌ ಡಾನ್ಸ್‌ ನೋಡಿ ನೆಟ್ಟಿಗರು ಫುಲ್‌ ಫಿದಾ!

ಪಾರ್ಕ್‌ನಲ್ಲಿ ಹೆಜ್ಜೆ ಹಾಕಿದ ಅಜ್ಜ-ಅಜ್ಜಿ- ನೆಟ್ಟಿಗರು ಹೇಳಿದ್ದೇನು?

ಆತಿಫ್ ಅಸ್ಲಂ ಅವರ ರೊಮ್ಯಾಂಟಿಕ್ ಕ್ಲಾಸಿಕ್ 'ಹೋನಾ ಥಾ ಪ್ಯಾರ್' ಹಾಡಿಗೆ ವೃದ್ಧ ದಂಪತಿಗಳಿಬ್ಬರು ಸಖತ್‌ ಆಗಿ ಹೆಜ್ಜೆ ಹಾಕಿದ್ದಾರೆ.ಈ ಹೃದಯಸ್ಪರ್ಶಿ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅವರ ಕೆಮಿಸ್ಟ್ರಿ, ಮುಗ್ಧತೆ ನೋಡಿ ಸೋಶಿಯಲ್ ಮೀಡಿಯಾ ನೆಟ್ಟಿಗರು ಫಿದಾ ಆಗಿದ್ದಾರೆ.

Viral News: ಹಳೆಯ ಬಸ್ಸುಗಳಿಗೆ ಮಾರ್ಡನ್‌ ಟಚ್! ಅಂಗಡಿ, ರೆಸ್ಟೋರೆಂಟ್‍ಗಳಾಗಿ ಪರಿವರ್ತನೆ

ಹಳೆಯ ಬಸ್ಸುಗಳಿಗೆ ಮಾರ್ಡನ್‌ ಟಚ್! ಏನಿದು ಸಂಗತಿ?

ಸ್ಥಳೀಯ ವ್ಯವಹಾರವನ್ನು ಹೆಚ್ಚಿಸುವ ಉದ್ದೇಶದಿಂದ ದೆಹಲಿ ಸರ್ಕಾರವು ಹಳೆಯದಾದ ಹಾಗೂ ಹಾಳಾಗಿ ಕೆಟ್ಟು ನಿಂತ ಬಸ್ಸುಗಳನ್ನು ಕಾಂಪ್ಯಾಕ್ಟ್ ಚಿಲ್ಲರೆ ಅಂಗಡಿಗಳಾಗಿ ಮರುಬಳಕೆ ಮಾಡುವ ಹೊಸ ಯೋಜನೆಯನ್ನು ಅನಾವರಣಗೊಳಿಸಿದೆ. ದೆಹಲಿ ಸರ್ಕಾರವು ಕಾಶ್ಮೀರಿ ಗೇಟ್, ಆನಂದ್ ವಿಹಾರ್ ಮತ್ತು ಸರೈ ಕಾಲೆ ಖಾನ್‍ನಲ್ಲಿರುವ ಐಎಸ್ಬಿಟಿಗಳಲ್ಲಿ ಹಳೆಯ ಬಸ್ಸುಗಳನ್ನು ಚಿಲ್ಲರೆ ಅಂಗಡಿಗಳಾಗಿ ಪರಿವರ್ತಿಸಲಿದೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

Viral Video: ಅಂಗಡಿಯಲ್ಲಿ ನಿಂತಿದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ; ಏನಿದು ಘಟನೆ?

ಕ್ಯೂನಲ್ಲಿ ನಿಂತಿದ್ದವನಿಗೆ ಕಾರಣವಿಲ್ಲದೇ ಹೊಡೆದ ವ್ಯಕ್ತಿ; ವಿಡಿಯೊ ನೋಡಿ

ವ್ಯಕ್ತಿಯೊಬ್ಬ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗೆ ಹೋಗಿ ಯಾವುದೇ ಕಾರಣವಿಲ್ಲದೆ ಇನ್ನೊಬ್ಬ ವ್ಯಕ್ತಿಗೆ ಹೊಡೆದಿದ್ದಾನೆ.ಹಲ್ಲೆಗೊಳಗಾದ ವ್ಯಕ್ತಿ ಅಲ್ಲಿಯೇ ಕುಸಿದು ಬಿದ್ದಿದ್ದಾನೆ ಈ ದೃಶ್ಯ ಸ್ಟೋರ್‌ನೊಳಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Video Viral) ಆಗಿದೆ.

‌Viral Video: ಕ್ರಿಕೆಟ್‌ ಪಂದ್ಯ ನೋಡ್ತಾನೆ ಉತ್ತರ ಪತ್ರಿಕೆ ತಿದ್ದಿದ  ಶಿಕ್ಷಕಿ; ಕ್ಯಾಮೆರಾ ಕಣ್ಣಿಗೆ ಬಿದ್ದಾಗ ಮಾಡಿದ್ದೇನು? ವಿಡಿಯೊ ವೈರಲ್!

ಒಂದೆಡೆ ಕ್ರಿಕೆಟ್‌ ಕ್ರೇಜ್‌ ಮತ್ತೊಂದೆಡೆ ಕರ್ತವ್ಯ ನಿಷ್ಠೆ! ಈ ವಿಡಿಯೊ ನೋಡಿ

ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯದ ಸಮಯದಲ್ಲಿ, ಶಾಲಾ ಶಿಕ್ಷಕಿಯೊಬ್ಬಳು ಕ್ರೀಡಾಂಗಣದಲ್ಲಿ ಕುಳಿತು ತನ್ನ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ಪರಿಶೀಲಿಸಿದ್ದಾಳೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

Viral Video: ನಿರೂಪಕಿ ಸುದ್ದಿ ಓದುತ್ತಿರುವಾಗಲೇ ರಣಭೀಕರ ಭೂಕಂಪ; ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಭೂಕಂಪದ ನಡುವೆಯೂ ಸುದ್ದಿ ಓದಿದ ನಿರೂಪಕಿ; ವಿಡಿಯೊ ಇದೆ

ಟರ್ಕಿಯ ಇಸ್ತಾಂಬುಲ್ ನಗರದ ಬಳಿಯ ಸಿಲಿವ್ರಿ ಪ್ರದೇಶದಲ್ಲಿ ಸಂಭವಿಸಿದ ತೀವ್ರ ಭೂಕಂಪ ಬಗ್ಗೆ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದೆ. ಆ ವೇಳೆ ಸಿಎನ್ಎನ್ ಟರ್ಕಿಶ್ ಸುದ್ದಿ ನಿರೂಪಕಿ ಮೆಲ್ಟೆಮ್ ಬೊಜ್ಬೆಯೋಸ್ಲು ಸುದ್ದಿ ಓದುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲ ನಡುಗಲು ಶುರುವಾಗಿತ್ತು. ಇದರಿಂದ ಆಕೆ ಭಯಗೊಳ್ಳದೆ ಸುದ್ದಿ ಓದುವುದನ್ನು ಮುಂದುವರಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

Viral Video: ಮಗು ಉಸಿರಾಡೋಕೆ ಒದ್ದಾಡ್ತಿದ್ರೆ ಪಾಪಿ ತಾಯಿ ಮಾಡಿದ್ದೇನು ಗೊತ್ತಾ? ಇಲ್ಲಿದೆ ಶಾಕಿಂಗ್‌ ವಿಡಿಯೊ

ಛೇ.. ಇವಳೆಂಥಾ ತಾಯಿ! ಈ ಮಾಡಿದ ಹೀನ ಕೃತ್ಯವನ್ನೊಮ್ಮೆ ನೋಡಿ

ಇನ್‌ಸ್ಟಾಗ್ರಾಂ ರೀಲ್ ಕ್ರಿಯೇಟರ್ ಸಲೋನಿ ಅಗರ್ವಾಲ್ ತನ್ನ ಕಿರಿಯ ಮಗ ಉಸಿರಾಟದ ತೊಂದರೆಯ ಬಗ್ಗೆ ದೂರು ನೀಡುವುದನ್ನು ಅಪಹಾಸ್ಯ ಮಾಡಿ ವಿಡಿಯೊ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದು ವೈರಲ್(Viral News) ಆಗಿದ್ದು, ಈ ಬಗ್ಗೆ ಮನಶಾಸ್ತ್ರಜ್ಞರು, ಪೋಷಕರು ಮತ್ತು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Viral Video: ವರನ ಸ್ನೇಹಿತರ ಅವಾಂತರಕ್ಕೆ ಮದ್ವೆನೇ ಕ್ಯಾನ್ಸಲ್‌! ಅಷ್ಟಕ್ಕೂ ಆಗಿದ್ದೇನು?

ವರನ ಸ್ನೇಹಿತರ ಅವಾಂತರಕ್ಕೆ ಮದ್ವೆನೇ ಕ್ಯಾನ್ಸಲ್‌! ಅಷ್ಟಕ್ಕೂ ಆಗಿದ್ದೇನು?

ಉತ್ತರಾಖಂಡದ ಹರಿದ್ವಾರದಲ್ಲಿ ವರನ ಸ್ನೇಹಿತರು ವಧುವಿನ ಮಹಿಳಾ ಸಂಬಂಧಿಕರ ಬಗ್ಗೆ ಅಸಭ್ಯವಾದ ಕಾಮೆಂಟ್‍ಗಳನ್ನು ಮಾಡಿದ್ದಾರೆ. ಇದರಿಂದ ಮದುವೆ ಮನೆಯಲ್ಲಿ ಹೊಡೆದಾಟ ಶುರುವಾಗಿ ಕೊನೆಗೆ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ. ಈ ಜಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video)ಆಗಿದೆ.

Viral Video: ಆನೆಯ ಲದ್ದಿಯಿಂದಲೂ ತಯಾರಿಸಲಾಗುತ್ತೆ ಸಿಹಿ ಖಾದ್ಯ! ಏನಿದು ವಿಚಿತ್ರ ರೆಸ್ಟೊರೆಂಟ್‌?

ಆನೆಯ ಲದ್ದಿಯಿಂದಲೂ ತಯಾರಿಸಲಾಗುತ್ತೆ ಸಿಹಿ ಖಾದ್ಯ!

ಶಾಂಘೈನ ಹೊಸ ರೆಸ್ಟೋರೆಂಟ್‍ನಲ್ಲಿ ಒಣಗಿದ ಆನೆ ಸಗಣಿಯಿಂದ ಸಿಹಿತಿಂಡಿಯಲ್ಲಿ ತಯಾರಿಸಲಾಗುತ್ತದೆಯಂತೆ. ಈ ಖಾದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿ ವಿವಾದವನ್ನು ಹುಟ್ಟುಹಾಕಿದೆ. ಇದನ್ನು ನೋಡಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಅಂದ ಹಾಗೇ ಅದರ ರುಚಿ ಹೇಗಿದೆ, ಏನಿದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Viral Video: ಮೈಕೆಲ್ ಜಾಕ್ಸನ್‌ನಂತೆ ಡ್ಯಾನ್ಸ್‌ ಮಾಡಲು ಹೋಗಿ ಟ್ರೋಲ್‌ ಆದ ಯುವಕ!‌ ವಿಡಿಯೊ ವೈರಲ್

ಮೈಕೆಲ್ ಜಾಕ್ಸನ್‌ನಂತೆ ಡ್ಯಾನ್ಸ್‌ ಮಾಡಲು ಹೋಗಿ ಟ್ರೋಲ್‌ ಆದ ಯುವಕ!

ಅಮಿಟಿ ಯೂನಿವರ್ಸಿಟಿ ಜಾರ್ಖಂಡ್‍ನ ಅಮಿಫೋರಿಯಾ 2025 ಕಾರ್ಯಕ್ರಮದ ಸಮಯದಲ್ಲಿ, ಡ್ಯಾನ್ಸರ್‌ ಒಬ್ಬ ಮೈಕಲ್ ಜಾಕ್ಸನ್‌ನ ಫೇಮಸ್‌ ಡ್ಯಾನ್ಸ್‌ ಸ್ಟೆಪ್‍ ಆದ ಮೂನ್‌ವಾಕ್‌ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾನೆ. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಆದರೆ ಇದು ನೆಟ್ಟಿಗರಿಗೆ ಇಷ್ಟವಾಗದ ಕಾರಣ ಅವನನ್ನು ಟ್ರೋಲ್ ಮಾಡಿದ್ದಾರೆ.

Viral Video: ಸಾವಿನ ಜೊತೆ ಸೆಣಸಾಟ ಅಂದ್ರೆ ಇದಪ್ಪಾ! ವಿಡಿಯೊ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಸಾವಿನ ಜೊತೆ ಸೆಣಸಾಟ ಅಂದ್ರೆ ಇದಪ್ಪಾ! ವಿಡಿಯೊ ನೋಡಿ ನೆಟ್ಟಿಗರು ಶಾಕ್‌

ವೃತ್ತಿಪರ ಜೇನು ಸಾಕಣೆದಾರ ರಾಜು ಪಟೇಲ್ ಬರಿಗೈಯಿಂದ ಬೃಹತ್ ಜೇನುಗೂಡನ್ನು ಹಿಡಿದುಕೊಂಡಿದ್ದಾನೆ. ಆತ ಜೇನುಗೂಡನ್ನೇ ಬರಿಗೈಯಲ್ಲಿ ಹಿಡಿದುಕೊಂಡಿದ್ದು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

Viral Video: ಸರ್ಜಿಕಲ್ ಸೂಜಿ ಮತ್ತು ದಾರ ಬಳಸಿ ಚಪ್ಪಲಿ ಹೊಲಿದ ಭೂಪ! ನೆಟ್ಟಿಗರು ಹೇಳಿದ್ದೇನು?

ಸರ್ಜಿಕಲ್ ಸೂಜಿ ಮತ್ತು ದಾರ ಬಳಸಿ ಚಪ್ಪಲಿ ಹೊಲಿದ ಭೂಪ!

ಕರ್ತವ್ಯದಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಹರಿದ ಚಪ್ಪಲಿಯನ್ನು ಹೊಲಿಯಲು ಶಸ್ತ್ರಚಿಕಿತ್ಸೆಗೆ ಬಳಸುವ ಸರ್ಜಿಕಲ್ ಸೂಜಿ ಮತ್ತು ದಾರವನ್ನು ಬಳಸಿದ್ದಾನೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.ನೆಟ್ಟಿಗರು ಕೂಡ ಇದನ್ನು ನೋಡಿ ತಮಾಷೆ ಮಾಡಿದ್ದಾರೆ.

Viral News: ಅಪ್ಪ-ಅಮ್ಮನನ್ನು ಧಿಕ್ಕರಿಸಿ  ಪ್ರೀತಿಸಿದವನನ್ನು ಮದ್ವೆ ಆದ ಯುವತಿ; ಆಮೇಲೆ ನಡೆದಿದ್ದು ಯಾರೂ ಊಹಿಸದ ಸಂಗತಿ!

ಪ್ರೀತಿಸಿ ಮದುವೆಯಾದ ಯುವತಿಗೆ ಕುಟುಂಬಸ್ಥರು ಮಾಡಿದ್ದೇನು ಗೊತ್ತಾ?

ಮನೆಯವರಿಗೆ ಇಷ್ಟವಿಲ್ಲದೆ ಲವ್ ಮ್ಯಾರೇಜ್ ಮಾಡಿಕೊಂಡ ಕಾರಣ ಯುವತಿಯನ್ನು ಆಕೆಯ ಕುಟುಂಬ ಸದಸ್ಯರು ಬಲವಂತವಾಗಿ ಗಂಡನ ಮನೆಯಿಂದ ಕರೆದೊಯ್ದಿದ್ದಾರೆ. ಇಡೀ ಘಟನೆ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral News) ಆಗಿದೆ.

Viral News: 10 ವರ್ಷ ಸೇವಿಂಗ್‌ ಮಾಡಿ ಕಾರು ಖರೀದಿಸಿದವನಿಗೆ ಬಿಗ್‌ ಶಾಕ್‌; ಬೆಚ್ಚಿಬೀಳಿಸುವ ವಿಡಿಯೊ ವೈರಲ್‌

10 ವರ್ಷ ದುಡ್ಡು ಉಳಿಸಿ ಖರೀದಿ ಮಾಡಿದ ಕಾರು ಕೊನೆಗೆ ಆಗಿದ್ದೇನು?

33 ವರ್ಷದ ಸಂಗೀತ ನಿರ್ಮಾಪಕ ಹೊಂಕಾನ್ ಫೆರಾರಿ 458 ಸ್ಪೈಡರ್ ಐಷಾರಾಮಿ ಕಾರನ್ನು ಖರೀದಿಸಲು 10 ವರ್ಷಗಳ ಕಾಲ ಹಣ ಉಳಿಸಿದ್ದಾನೆ. ದುರದೃಷ್ಟವಶಾತ್, ಅದನ್ನು ಖರೀದಿಸಿದ ಒಂದು ಗಂಟೆಯ ನಂತರ ಅದರ ಎಂಜಿನ್‍ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral News) ಆಗಿದೆ.

‌Viral Video: ಇದೇನು ಮದುವೆ ಮನೆಯೋ...ರಣರಂಗವೋ..? ಶಾಕಿಂಗ್‌ ವಿಡಿಯೊ ವೈರಲ್!

ಕ್ಷುಲಕ ಕಾರಣಕ್ಕೆ ರಣರಂಗವಾದ ಮದುವೆ ಮನೆ; ವಿಡಿಯೊ ನೋಡಿ!

ಉತ್ತರ ಪ್ರದೇಶದ ಮಿರ್ಜಾಪುರದ ಭಿಖಾರಿಪುರ ಗ್ರಾಮದಲ್ಲಿ ಮದುವೆಗೆ ಅಡ್ಡಿಪಡಿಸಿದ್ದಕ್ಕೆ ವಧು ಮತ್ತು ವರನ ಕಡೆಯವರು ಮದುವೆಯ ಮಂಟಪದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಇದರಿಂದ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

Viral Video: ಇಂಡಿಗೋ ವಿಮಾನದಲ್ಲಿ ಸೊಳ್ಳೆ ಕಾಟ- ಪ್ರಯಾಣಿಕರು ಮಾಡಿದ್ದೇನು ನೋಡಿ; ವಿಡಿಯೊ ವೈರಲ್

ವಿಮಾನದಲ್ಲಿ ಸೊಳ್ಳೆ‌ ಕಾಟ; ಬೇಸತ್ತ ಪ್ರಯಾಣಿಕರು ಮಾಡಿದ್ದೇನು?

ಲಖನೌದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಸೊಳ್ಳೆಗಳ ಹಿಂಡು ಕ್ಯಾಬಿನ್‍ಗೆ ನುಗ್ಗಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಸೊಳ್ಳೆಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ವಿಮಾನ ಪ್ರಯಾಣದುದ್ದಕ್ಕೂ ಪ್ರಯಾಣಿಕರು ಸೊಳ್ಳೆಗಳನ್ನು ಹೊಡೆಯುವುದರಲ್ಲೇ ತಲ್ಲೀನರಾಗಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

Viral Video: ರೀಲ್ಸ್‌ಗಾಗಿ ವಾಷಿಂಗ್ ಮೆಷಿನ್‍ನೊಳಗೆ ಕಲ್ಲು ಹಾಕಿದ ಭೂಪ! ಇದೆಂಥಾ ಹುಚ್ಚಾಟ ನೋಡಿ

ರೀಲ್ಸ್‌ಗಾಗಿ ಈತ ಮಾಡಿದ ಕಿತಾಪತಿ ನೋಡಿ!

ವ್ಯಕ್ತಿಯೊಬ್ಬ ವಾಷಿಂಗ್ ಮೆಷಿನ್‍ನೊಳಗೆ ಕಲ್ಲು ಹಾಕಿದ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಕೂಡ ಶಾಕ್‌ ಆಗಿದ್ದಾರೆ. ಕೆಲವರಂತೂ ಇವನ ಕೆಲಸ ನೋಡಿ ಟೀಕೆಯ ಸುರಿಮಳೆ ಹರಿಸಿದ್ದಾರೆ.

Viral News: ಒಂದೇ ಮಂಟಪದಲ್ಲಿ ಒಂದೇ ಕುಟುಂಬದ 6 ಜೋಡಿಗಳ ಮದ್ವೆ- ಅರೇ... ಇದೇನಿದು ಸಾಮೂಹಿಕ ವಿವಾಹವೇ?

ಒಂದೇ ಮಂಟಪದಲ್ಲಿ 6 ಜೋಡಿಗಳ ಮದುವೆ; ನೆಟ್ಟಿಗರು ಹೇಳಿದ್ದೇನು?

ಹರಿಯಾಣದ ಹಿಸಾರ್ ಜಿಲ್ಲೆಯ ಪುನಿಯಾ ಕುಟುಂಬದ ರೈತ ಸಹೋದರರಿಬ್ಬರು ಮದುವೆಯ ಖರ್ಚನ್ನು ಉಳಿಸಲು ಒಂದೇ ಮಂಟಪದಲ್ಲಿ ತಮ್ಮ 6ಮಂದಿ ಮಕ್ಕಳಿಗೆ ಒಟ್ಟಿಗೆ ಮದುವೆ ಮಾಡಿಸಿದ್ದಾರೆ.ಈ ಮದುವೆ ಬಹಳ ಅದ್ದೂರಿಯಾಗಿ ನಡೆದಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral News) ಆಗಿದೆ.

Viral Video: ಪತಿಯ ತೊಡೆಯ ಮೇಲೆ ಮಲಗಿದ ಮಹಿಳೆಗೆ ಬಿತ್ತು ಭಾರೀ ದಂಡ; ಏನಿದು ವೈರಲ್‌ ವಿಡಿಯೊ?

ಕಾರಿನ ಮೇಲೆ ಮಹಿಳೆಯ ಸರ್ಕಸ್‌;ಕೊನೆಗೆ ಆಗಿದ್ದೇನು?

ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಮಹಿಳೆಯೊಬ್ಬಳು ಹೈಸ್ಪೀಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಾಯಕಾರಿ ಸ್ಟಂಟ್‍ಗಳನ್ನು ಮಾಡಿದ್ದು, ಇದು ಸೋಶಿಯ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊ ನೋಡಿ ಆರ್‌ಟಿಒ ಅಧಿಕಾರಿಗಳು ಮಹಿಳೆಯ ವಿರುದ್ಧ 22,500 ರೂ.ಗಳ ದಂಡವನ್ನು ವಿಧಿಸಿದ್ದಾರೆ.

Viral Video: ಬಸ್‌, ಕಾರ್‌, ಬೈಕ್‌ ಅಲ್ಲ... ಕಾಲೇಜಿಗೆ ಓಡಾಡೋಕೆ ದಿನಾ ಫ್ಲೈಟ್‌ ಬೇಕು; ಈಕೆಯ ದಿನ ಖರ್ಚು ಕೇಳಿದ್ರೆ ಶಾಕ್‌ ಆಗುತ್ತೆ!

ಕಾಲೇಜಿಗೆ ಫ್ಲೈಟ್‌ನಲ್ಲಿಯೇ ಓಡಾಡುವ ವಿದ್ಯಾರ್ಥಿನಿ; ಖರ್ಚೆಷ್ಟು ಗೊತ್ತೇ?

22 ವರ್ಷದ ವಿದ್ಯಾರ್ಥಿನಿ ಯುಜುಕಿ ನಕಾಶಿಮಾ ತನ್ನ ಪದವಿಗಾಗಿ ಫುಕುವೊಕಾದಲ್ಲಿನ ಯೂನಿವರ್ಸಿಟಿಗೆ ಹೋಗಲು ಟೋಕಿಯೊ ಮತ್ತು ಫುಕುವೊಕಾ ನಡುವೆ ಪ್ರತಿದಿನ ವಿಮಾನ ಪ್ರಯಾಣ ಮಾಡುತ್ತಾಳಂತೆ. ಇದಕ್ಕಾಗಿ ಆಕೆ ಪ್ರತಿದಿನ ಸುಮಾರು 20,000 ರೂ.ಗಳನ್ನು ಖರ್ಚು ಮಾಡುತ್ತಾಳಂತೆ. ಈ ವಿಚಾರವನ್ನುಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್(Viral Video) ಆಗಿದೆ.

‌Viral Video: ತಾಯಿಯೇ ಪ್ರಯಾಣಿಕಳಾಗಿರುವಾಗ ಪೈಲಟ್‌ ಮಗನ ಖುಷಿಗೆ ಪಾರವೇ ಇಲ್ಲ; ಹೃದಯಸ್ಪರ್ಶಿ ವಿಡಿಯೊ ವೈರಲ್

ತಾಯಿಯೇ ಪ್ರಯಾಣಿಕಳಾಗಿರುವಾಗ ಪೈಲಟ್‌ ಮಗನ ಖುಷಿಗೆ ಪಾರವೇ ಇಲ್ಲ

ಪೈಲಟ್ ಅಶ್ವಥ್ ಪುಷ್ಪನ್ ತನ್ನ ತಾಯಿಯನ್ನು ಮೊದಲ ಬಾರಿಗೆ ಬೇರೆ ದೇಶಕ್ಕೆ ವಿಮಾನದಲ್ಲಿ ಕರೆದೊಯ್ಯುವಾಗ ತಾಯಿಯ ಬಗ್ಗೆ ಹೇಳಿದ ಭಾವನಾತ್ಮಕ ಕ್ಷಣದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.ಈ ಹೃದಯಸ್ಪರ್ಶಿ ವಿಡಿಯೊ ನೋಡಿ ನೆಟ್ಟಿಗರ ಕಣ್ಣಂಚು ಕೂಡ ಒದ್ದೆಯಾಗಿದೆ.

Viral News: ಮದುವೆ ಮನೆಯಲ್ಲಿ ಜಗಳ; ತಪ್ಪಿಸಲು ಹೋಗಿ ದಾರುಣ ಅಂತ್ಯ ಕಂಡ ಯುವಕ

ಮದುವೆಗೆ ಬಂದವ ಮಸಣ ಸೇರಿದ; ಕಾರಣವೇನು?

ಮದುವೆ ಮೆರವಣಿಗೆ ವೇಳೆ ಯುವಕರ ನಡುವೆ ಡಿಜೆ ಸಾಂಗ್ ಆಯ್ಕೆ ಮಾಡುವ ವಿಚಾರಕ್ಕೆ ಜಗಳ ನಡೆದಿದ್ದು, ಆ ವೇಳೆ ಇಬ್ಬರು ಯುವಕರು ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಈ ಘಟನೆಯಲ್ಲಿ ಮೋಹಿತ್ ಯಾದವ್ (17)ಯುವಕ ಸಾವನಪ್ಪಿದ್ದು, ಇನ್ನೊಬ್ಬನಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಇದೀಗ ವೈರಲ್‌(Viral News) ಆಗಿದೆ.