Star Summer Fashion: ನಟಿ ಕೃತಿ ಸನೋನ್ ಸಮ್ಮರ್ ಫ್ಯಾಷನ್ ಲವ್
Star Summer Fashion: ಬೇಸಿಗೆ ಸೀಸನ್ ಆಕರ್ಷಕ ಪ್ರಯೋಗಾತ್ಮಕ ಫ್ಯಾಷನ್‌ವೇರ್ಸ್ ಧರಿಸಲು ಅವಕಾಶ ನೀಡುತ್ತದೆ. ಹಾಗಾಗಿ ನನಗೆ ಈ ಸೀಸನ್ ಇಷ್ಟ ಎನ್ನುವ ಬಾಲಿವುಡ್ ನಟಿ ಕೃತಿ ಸನೂನ್, ಮಾಧ್ಯಮದ ಸಂದರ್ಶನವೊಂದರಲ್ಲಿ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸೀಸನ್ ಟಿಪ್ಸ್ ಕೂಡ ನೀಡಿದ್ದಾರೆ.

ಚಿತ್ರಗಳು: ಕೃತಿ ಸನೂನ್, ಬಾಲಿವುಡ್ ನಟಿ

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಕೃತಿ ಸನೂನ್ ಹೇಳುವಂತೆ, ಸಮ್ಮರ್ ಸೀಸನನ್ನು (Star Summer Fashion) ಕೂಲಾಗಿ ಕಳೆಯಬಹುದಂತೆ. ಹೌದು, ಅವರು ಈ ಸೀಸನ್‌ನನ್ನು ತಮ್ಮ ಲೈಫ್‌ಸ್ಟೈಲ್ ಬದಲಾವಣೆಯಿಂದಾಗಿ ಎಂಜಾಯ್ ಮಾಡಬಹುದು ಎನ್ನುತ್ತಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಸಮ್ಮರ್ ಲೈಫ್‌ಸ್ಟೈಲ್ ಕುರಿತಂತೆ ಮಾತನಾಡಿದ್ದಾರೆ. ಸಮ್ಮರ್ ಆಕರ್ಷಕ ಪ್ರಯೋಗಾತ್ಮಕ ಫ್ಯಾಷನ್‌ವೇರ್ಸ್ ಚೂಸ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ನಾನಂತೂ ಎಲ್ಲಾ ಬಗೆಯ ಪ್ರಯೋಗಾತ್ಮಕವೇರ್‌ಗಳನ್ನು ಪ್ರಯೋಗಿಸುತ್ತೇನೆ ಎಂದಿದ್ದಾರೆ ಕೃತಿ ಸನೂನ್. ತ್ವಚೆಯ ಮೇಲೆ ಸನ್ ರೇಸ್ ಬೀಳದಂತೆ ನೋಡಿಕೊಂಡಲ್ಲಿ, ತ್ವಚೆಯಲ್ಲಾಗುವ ಸನ್ ಬರ್ನ್ ತಡೆಯಬಹುದು. ಆದಷ್ಟು ಸ್ಕಿನ್ ಒಣಗದಂತೆ ಕಾಪಾಡುವಲ್ಲಿ ಹೆಚ್ಚು ನೀರು ಸೇವನೆ, ಸನ್ ಸ್ಕ್ರೀನ್ ಬಳಕೆ ಸಹಕಾರಿಯಾಗುತ್ತದೆ ಎನ್ನುತ್ತಾರೆ ಕೃತಿ.

ಸಮ್ಮರ್ ಎಂಜಾಯ್‌ಮೆಂಟ್
ಸಮ್ಮರ್‌ನಲ್ಲಿ ಆದಷ್ಟೂ ವಾಟರ್ ಔಟಿಂಗ್ ಸ್ಪಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದು ಮನೋಲ್ಲಾಸ ಹೆಚ್ಚಿಸುತ್ತದೆ ಎನ್ನುತ್ತಾರೆ ನಟಿ ಕೃತಿ ಸನೂನ್. ಅವರ ಪ್ರಕಾರ, ಹೊರಗೆ ಹೋಗುವಾಗ ಸಮ್ಮರ್‌ಗೆ ಅಗತ್ಯವಿರುವ ಕಿಟ್ ಹೊಂದಿರುವುದು ಉತ್ತಮ. ಒಂದು ಬಾಟಲ್ ನೀರು, ಟಿಶ್ಯೂಸ್, ಸನ್‌ಸ್ಕ್ರೀನ್, ಸನ್ ಗ್ಲಾಸ್, ಚಾಕೋಲೇಟ್ಸ್, ಟಾಲ್ಕಂ ಪೌಡರ್, ಕಾಟನ್ ಹ್ಯಾಂಕಿ, ಹ್ಯಾಂಡ್ ಫ್ಯಾನ್ ಇವು ಬೇಸಿಗೆಯ ಬಿಸಿಯಿಂದ ಪರಿಹಾರ ಪಡೆಯಲು ಸಹಕಾರಿಯಾಗುತ್ತವೆ ಎನ್ನುತ್ತಾರೆ.

ಸಮ್ಮರ್‌ಗೆ ಹಣ್ಣಿನ ಸೇವನೆ
ಆಯಾ ಸೀಸನ್‌ನಲ್ಲಿ ದೊರಕುವ ನೈಸರ್ಗಿಕ ಹಣ್ಣುಗಳು ದೇಹದ ಫಿಟ್‌ನೆಸ್ ಹಾಗೂ ತ್ವಚೆಯ ಸೌಂದರ್ಯವನ್ನು ಕಾಪಾಡುತ್ತವೆ. ವಿವಿಧ ರೀತಿಯ ಹಣ್ಣುಗಳು ನಾನಾ ಪೌಷ್ಠಿಕಾಂಶಗಳನ್ನು ಹೊಂದಿದ್ದು, ಅವುಗಳ ಬಳಕೆಯಿಂದ ಬೇಸಿಗೆಯಲ್ಲಿ ದೇಹದ ಫಿಟ್‌ನೆಸ್ ಕಾಪಾಡಬಹುದು. ಇವುಗಳನ್ನು ಸೇವಿಸುವುದರಿಂದ ತ್ವಚೆಯ ಹೊಳಪು ಹೆಚ್ಚಾಗುತ್ತದೆ ಎನ್ನುತ್ತಾರೆ ಅವರು. ಈ ಹಣ್ಣಿನ ತಂಪು ಪಾನೀಯವನ್ನು ಬೆಳಗಿನ ಉಪಹಾರದ ಬದಲಾಗಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಕ್ರಮೇಣ ಕಡಿಮೆಯಾಗಿ ಬಾಡಿ ಫಿಟ್ಟಾಗಿರಲು ಸಹಕಾರಿ. ಡಯಟ್ ಮಾಡುವವರಿಗೆ ಉತ್ತಮ ಪೇಯ ಎಂಬುದು ಅವರ ಅಭಿಪ್ರಾಯ. ಸಮ್ಮರ್‌ನಲ್ಲಿ ಆದಷ್ಟೂ ಹೆಚ್ಚು ನೀರಿನಂಶ ಇರುವ ಹಣ್ಣು-ತರಕಾರಿಗಳನ್ನು ಡಯಟ್‌ನಲ್ಲಿ ಸೇರಿಸಿಕೊಳ್ಳಿ ಎನ್ನುತ್ತಾರೆ ಕೃತಿ ಸನೂನ್.

ಕೃತಿ ಸನೂನ್ ಸಮ್ಮರ್ ಟಿಪ್ಸ್
- ಗಾಢ ವರ್ಣದ ಉಡುಪುಗಳನ್ನು ಧರಿಸುವುದನ್ನು ಆದಷ್ಟೂ ಮಿತಿಗೊಳಿಸಿ. ಇವು ದೇಹದ ಉಷ್ಣಾಂಶ ಹೆಚ್ಚಿಸುತ್ತವೆ.
- ನೀರಿನಂಶ ಇರುವ ಕಲ್ಲಂಗಡಿ, ದ್ರಾಕ್ಷಿ, ಕರ್ಬೂಜ, ದಾಳಿಂಬೆ ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸಿ.
- ಮುಖದ ಹಾಗೂ ಕೂದಲಿಗೆ ಆಯಿಲ್ ಮಸಾಜ್ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Akshaya Trutiya Special: ಅಕ್ಷಯ ತೃತೀಯ ಪ್ರಯುಕ್ತ ಸಜ್ಜಾದ ಆಭರಣ ಲೋಕ