Star Fashion 2025: ಹೀಗಿದೆ ಜಂಭದ ಹುಡುಗಿ ನಟಿ ಪ್ರಿಯಾ ಹಾಸನ್ ಫ್ಯಾಷನ್ ಸ್ಟೇಟ್‌ಮೆಂಟ್ಸ್
Star Fashion 2025: ಸ್ಯಾಂಡಲ್‌ವುಡ್‌ನ ಜಂಭದ ಹುಡುಗಿ ಎಂದೇ ಖ್ಯಾತಿ ಗಳಿಸಿರುವ ನಟಿ, ನಿರ್ದೇಶಕಿ, ನಿರ್ಮಾಪಕಿ ಪ್ರಿಯಾ ಹಾಸನ್ ತಮ್ಮದೇ ಆದ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ಸ್ ಹೊಂದಿದ್ದಾರೆ. ಈ ಕುರಿತಂತೆ ಅವರು ವಿಶ್ವವಾಣಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಚಿತ್ರಗಳು: ಪ್ರಿಯಾ ಹಾಸನ್, ನಟಿ, ನಿರ್ದೇಶಕಿ, ನಿರ್ಮಾಪಕಿ

ಸಂದರ್ಶನ: ಶೀಲಾ ಸಿ. ಶೆಟ್ಟಿ
ಸ್ಯಾಂಡಲ್‌ವುಡ್‌ನ ಜಂಭದ ಹುಡುಗಿ ಎಂದೇ ಖ್ಯಾತಿ ಗಳಿಸಿರುವ ನಟಿ, ನಿರ್ದೇಶಕಿ, ನಿರ್ಮಾಪಕಿ ಪ್ರಿಯಾ ಹಾಸನ್ ಕೂಡ ತಮ್ಮದೇ ಆದ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ಸ್ (Star Fashion 2025) ಹೊಂದಿದ್ದಾರೆ. ಈ ಕುರಿತು ಖುದ್ದು ವಿಶ್ವವಾಣಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ವಿಶ್ವವಾಣಿ ನ್ಯೂಸ್: ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ಸ್ ಏನು?
ಪ್ರಿಯಾ ಹಾಸನ್: ನನ್ನ ಫ್ಯಾಷನ್ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.
ವಿಶ್ವವಾಣಿ ನ್ಯೂಸ್: ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಹೇಗೆ ಬದಲಾಗುತ್ತದೆ?
ಪ್ರಿಯಾ ಹಾಸನ್: ನಾನು ಆನ್‌ಸ್ಕ್ರೀನ್‌ನಲ್ಲಿ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ರಿಯಲ್ ಲೈಫ್‌ನಲ್ಲಿ ಸೀರೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತೇನೆ. ಮೈಸೂರ್ ಸಿಲ್ಕ್ ಸೀರೆಗಳು ನನಗಿಷ್ಟ. ಇನ್ನು, ಪಾರ್ಟಿವೇರ್ ಸೀರೆಗಳು, ಲೈಟ್‌ವೈಟ್ ಸೀರೆಗಳು ನನ್ನ ಬಳಿ ಸಾಕಷ್ಟಿವೆ.
ವಿಶ್ವವಾಣಿ ನ್ಯೂಸ್: ನೀವು ಬ್ರ್ಯಾಂಡ್ ಫ್ರೀಕಾ?
ಪ್ರಿಯಾ ಹಾಸನ್: ಇಲ್ಲ! ನಾನು ಬ್ರಾಂಡ್ ಫ್ರೀಕ್ ಅಲ್ಲ! ಯಾವುದು ಇಷ್ಟವಾಗುತ್ತದೆಯೋ ಅದನ್ನು ಧರಿಸುತ್ತೇನೆ. ಇನ್ನು, ಕಲಾವಿದರಿಗೆ ಕಲರ್ಸ್ ಇಷ್ಟ. ನಾನು ಬ್ಲ್ಯೂ & ಪಿಂಕ್ ಕ್ರೀಮ್ ಕಲರ್‌ನ ಡ್ರೆಸ್‌ಗಳನ್ನು ಹೆಚ್ಚು ಇಷ್ಟಪಡುತ್ತೇನೆ.

ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಫ್ಯಾಷನ್?
ಪ್ರಿಯಾ ಹಾಸನ್: ಎಂದಿಗೂ ಬದಲಾಗದ ನನ್ನ ಹೇರ್‌ಸ್ಟೈಲ್. ಜತೆಗೆ ಲಿಪ್‌ಸ್ಟಿಕ್ ಹಾಗೂ ಕಾಡಿಗೆ. ಇವಿಲ್ಲದೇ ನಾನು ಹೊರಗೆ ಹೋಗುವುದೇ ಇಲ್ಲ!

ವಿಶ್ವವಾಣಿ ನ್ಯೂಸ್: ನೀವು ಆಭರಣ ಪ್ರಿಯರಾ?
ಪ್ರಿಯಾ ಹಾಸನ್: ಹೌದು. ಬಂಗಾರದ ಆಭರಣಗಳನ್ನು ಧರಿಸುತ್ತೇನೆ. ಎಮರಾಲ್ಡ್, ಪರ್ಲ್, ಡೈಮಂಡ್ ಉಂಗುರಗಳನ್ನು ಧರಿಸುವುದು ನನಗಿಷ್ಟ.
ವಿಶ್ವವಾಣಿ ನ್ಯೂಸ್: ಮೇಕಪ್ ಅಂದ್ರೆ ಇಷ್ಟನಾ?
ಪ್ರಿಯಾ ಹಾಸನ್: ಕಾರ್ಯಕ್ರಮಗಳಿಗೆ ಹೋಗುವಾಗ ಮಾತ್ರ ಮೇಕಪ್ ಮಾಡುತ್ತೇನೆ.

ವಿಶ್ವವಾಣಿ ನ್ಯೂಸ್: ಶಾಪಿಂಗ್ ಕ್ರೇಝ್ ಇದೆಯಾ?
ಪ್ರಿಯಾ ಹಾಸನ್: ಇದೆ. ಕಮರ್ಷಿಯಲ್ ಸ್ಟ್ರೀಟ್‌ಗೆ ಶಾಪಿಂಗ್ ಹೋಗುತ್ತೇನೆ. ಇನ್ನು, ಮಲ್ಲೇಶ್ವರಂನಲ್ಲಿ ಪೂಜೆಗೆ ಬೇಕಾಗುವಂತಹ ಸಾಮಾಗ್ರಿಗಳ ಶಾಪಿಂಗ್ ಮಾಡುತ್ತೇನೆ. ಮಾಲ್‌ಗಳಲ್ಲಿ ಔಟ್‌ಫಿಟ್ಸ್ ಶಾಪಿಂಗ್ ಮಾಡುತ್ತೇನೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Monsoon Nail Art 2025: ಈ ಸೀಸನ್‌ನಲ್ಲಿ ಟ್ರೆಂಡಿಯಾದ ಮಾನ್ಸೂನ್ ನೇಲ್ ಆರ್ಟ್‌ಗಳಿವು!