KL Rahul: ಕಂಟೈನರ್ ಟ್ರಕ್ ಮೇಲೆ ಬ್ಯಾಟಿಂಗ್ ನಡೆಸಿ 110 ಮೀ. ಸಿಕ್ಸರ್ ಸಿಡಿಸಿದ ರಾಹುಲ್
ಸದ್ಯ ಇಂಗ್ಲೆಂಡ್ ಟೆಸ್ಟ್ ಸರಣಿಯ ಭಾಗವಾಗಿರುವ ರಾಹುಲ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಅಲ್ಲದೆ ಭಾರತ ಎ ಜತೆಗಿನ ಇಂಟ್ರಾಸ್ಕ್ವಾಡ್ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದರು. ಹೀಗಾಗಿ ಸರಣಿಯಲ್ಲಿ ಅವರ ಮೇಲೆ ಭಾರೀ ನಂಬಿಕೆ ಇಡಲಾಗಿದೆ.


ಲಂಡನ್: ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಕಂಟೈನರ್ ಲಾರಿಯೊಂದ ಮೇಲೆ ಬ್ಯಾಟ್ ಬೀಸುವ ಮೂಲಕ 110 ಮೀ. ದೂರದ ಸಿಕ್ಸರ್ ಒಂದನ್ನು ಬಾರಿಸುವ ಮೂಲಕ ಸುದ್ದಿಯಾಗಿದ್ದಾರೆ. ಅವರ ಈ ಸಿಕ್ಸರ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ರೆಡ್ ಬುಲ್' ಬ್ರ್ಯಾಂಡ್‌ನ(Red Bull) ಜಾಹೀರಾತು ಭಾಗವಾಗಿ ಕೆಲವು ಚಾಲೆಂಜಿಂಗ್ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ವೇಳೆ ರಾಹುಲ್ ಈ ಸಿಕ್ಸರ್ ಬಾರಿಸಿದ್ದಾರೆ.
ರೆಡ್ ಬುಲ್ ಬ್ರಾಂಡ್‌ನ ಅಂಬಾಸಿಡರ್‌ಗಳಲ್ಲಿ ಒಬ್ಬರಾಗಿರುವ ರಾಹುಲ್ ಜಾಹೀರಾತಿನ ಭಾಗವಾಗಿ ಹಲವು ಚಾಲೆಂಜಿಂಗ್ ಸ್ಪರ್ಧೆಗಳನ್ನು ಮಾಡಲಾಗಿತ್ತು. ಇದರಲ್ಲೊಂದು ಟ್ರಕ್ ಮೇಲೆ ಬ್ಯಾಟಿಂಗ್ ನಡೆಸುವ ಚಾಲೆಂಜಿಂಗ್ ಕೂಡ ಒಳಗೊಂಡಿತ್ತು. ಆರಂಭಿಕ ಹಂತದಲ್ಲಿ 35, 75, 50 ಮೀ. ಹೀಗೆ ಕಡಿಗೆ ದೂರ ಸಿಕ್ಸರ್ ಸಿಡಿಸಿದ ರಾಹುಲ್ ತಮ್ಮ ಕೊನೆಯ ಪ್ರಯತ್ನವೊಂದರಲ್ಲಿ ಬರೋಬ್ಬರಿ 110 ಮೀ. ಸಿಕ್ಸರ್ ಸಿಡಿಸಿದರು. ಈ ಸಿಕ್ಸರ್ ಕಂಡು ಸ್ವತಃ ರಾಹುಲ್ ಕೂಡ ಆಶ್ಚರ್ಯಕ್ಕೊಳಗಾದರು.
KL Rahul on a truck & hit a 110 mtr six. 😅🔥 pic.twitter.com/WfRIEqykxh
— Kunal Yadav (@Kunal_KLR) June 17, 2025
ಸದ್ಯ ಇಂಗ್ಲೆಂಡ್ ಟೆಸ್ಟ್ ಸರಣಿಯ ಭಾಗವಾಗಿರುವ ರಾಹುಲ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಅಲ್ಲದೆ ಭಾರತ ಎ ಜತೆಗಿನ ಇಂಟ್ರಾಸ್ಕ್ವಾಡ್ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದರು. ಹೀಗಾಗಿ ಸರಣಿಯಲ್ಲಿ ಅವರ ಮೇಲೆ ಭಾರೀ ನಂಬಿಕೆ ಇಡಲಾಗಿದೆ. ಇಂಗ್ಲೆಂಡ್‌ನಲ್ಲಿ ರಾಹುಲ್ ಎರಡು ಶತಕಗಳು ಸೇರಿದಂತೆ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತರಾದ ನಂತರ ಟೆಸ್ಟ್ ತಂಡದಲ್ಲಿ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಆಗಿದ್ದಾರೆ.
ರಾಹುಲ್ 58 ಟೆಸ್ಟ್‌ಗಳಲ್ಲಿ ಅವರು 33.57 ರ ಸರಾಸರಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ, ಸಾಂಪ್ರದಾಯಿಕ ಸ್ವರೂಪದಲ್ಲಿ ಅವರ ಹೆಚ್ಚಿನ ಯಶಸ್ಸು ಅಗ್ರ ಕ್ರಮಾಂಕದಲ್ಲಿ ಬಂದಿದೆ. ಹೀಗಾಗಿ ಅವರು ಇಂಗ್ಲೆಂಡ್ ಟೆಸ್ಟ್‌ನಲ್ಲಿ ಆರಂಭಿಕರಾಗಿ ಮುಂದುವರಿಯುತ್ತಾರೋ ಅಥವಾ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೋ ಎಂಬುದು ಕಾದು ನೋಡಬೇಕಿದೆ. ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಕರುಣ್ ನಾಯರ್ ಟೆಸ್ಟ್ ಸರಣಿಯಲ್ಲೂ ತಂಡದಲ್ಲಿ ಅವಕಾಶ ಪಡೆಯಬಹುದು. ಅವರನ್ನು ನಿರ್ಲಕ್ಷಿಸುವುದು ಕಷ್ಟಕರವಾಗಿದೆ.
ಇದನ್ನೂ ಓದಿ KL Rahul: ಮುಂದಿನ ಟಿ20 ವಿಶ್ವಕಪ್ ಆಡುವ ವಿಶ್ವಾಸವಿದೆ ಎಂದ ಕೆ.ಎಲ್. ರಾಹುಲ್