ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲೀಡ್ಸ್‌ನಲ್ಲಿ ಭಾರತದ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಬಹುದಾದ ಇಬ್ಬರು ಆಟಗಾರರನ್ನು ಹೆಸರಿಸಿದ ಸಂಜಯ್ ಬಾಂಗರ್‌!

Sanjay Bangar on india's playing XI: ಜೂನ್ 20 (ಶುಕ್ರವಾರ) ರಂದು ಲೀಡ್ಸ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಪ್ಲೇಯಿಂಗ್ ಇಲೆವೆನ್ ಬಗ್ಗೆ ಮಾತನಾಡಿದ್ದಾರೆ. ಭಾರತದ ಪ್ಲೇಯಿಂಗ್‌ XIನಲ್ಲಿ 3 ಮತ್ತು 6ನೇ ಕ್ರಮಾಂಕವು ನಿರ್ಣಾಯಕವಾಗಿದ್ದು, ಈ ಸ್ಥಾನಗಳಿಗೆ ಮೂವರ ನಡುವೆ ಪೈಪೋಟಿ ನಡೆಯಲಿದೆ ಎಂದು ಹೇಳಿದ್ದಾರೆ.

ಟೆಸ್ಟ್‌ಗೆ ಪದಾರ್ಪಣೆ ಮಾಡಲಿರುವ ಇಬ್ಬರು ಆಟಗಾರರನ್ನು ಹೆಸರಿಸಿದ ಬಾಂಗರ್‌!

ಭಾರತ ತಂಡದ ಪ್ಲೇಯಿಂಗ್‌ XI ಬಗ್ಗೆ ಸಂಜಯ್‌ ಬಾಂಗರ್‌ ಹೇಳಿಕೆ.

Profile Ramesh Kote Jun 18, 2025 6:00 PM

ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs ENG) ಭಾರತ ತಂಡದ 3 ಮತ್ತು 6ನೇ ಕ್ರಮಾಂಕಕ್ಕೆ ಮೂವರು ಆಟಗಾರರ ನಡುವೆ ಪೈಪೋಟಿ ನಡೆಯಲಿದೆ ಎಂದು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ (Sanjay Bangar) ಹೇಳಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್ (IND Playing) ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅನುಭವಿ ಆಟಗಾರ ಕೆ.ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕ ಆಟಗಾರರಾಗಿ ಅಖಾಡಕ್ಕಿಯಲಿದ್ದು, 3 ಮತ್ತು 6ನೇ ಕ್ರಮಾಂಕಕ್ಕೆ ಸಾಯಿ ಸುದರ್ಶನ್, ಕರುಣ್ ನಾಯರ್ ಹಾಗೂ ಅಭಿಮನ್ಯು ಈಶ್ವರನ್ ನಡುವೆ ಪೈಪೋಟಿ ನಡೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೂನ್ 20 ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಲೀಡ್ಸ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿವೃತ್ತಿಯಿಂದ ಪ್ರವಾಸಿಗರಿಗೆ ಬ್ಯಾಟಿಂಗ್ ಸಂಯೋಜನೆಯೇ ದೊಡ್ಡ ಸವಾಲಾಗಿದೆ. ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರು ಕಡಿಮೆ ಇದ್ದಾರೆ. ಈ ಕಾರಣದಿಂದ ಟೀಮ್‌ ಇಂಡಿಯಾಗೆ ಕಠಿಣ ಸವಾಲು ಎದುರಾಗಲಿದೆ.

IND vs ENG: ಮೊದಲನೇ ಟೆಸ್ಟ್‌ಗೆ ತಮ್ಮ ನೆಚ್ಚಿನ ಪ್ಲೇಯಿಂಗ್‌ XI ಆರಿಸಿದ ವಸೀಮ್‌ ಜಾಫರ್‌!

ಮೂರನೇ ಕ್ರಮಾಂಕದ ಬಾಂಗರ್ ಹೇಳಿಕೆ

ಸ್ಟಾರ್ ಸ್ಪೋರ್ಟ್ಸ್‌ನ ಗೇಮ್ ಪ್ಲಾನ್ ಶೋನಲ್ಲಿ ಪಾಲ್ಗೊಂಡಿದ್ದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್‌ಗೆ ಟೀಮ್ ಇಂಡಿಯಾದ ಟಾಪ್ 3 ಕ್ರಮಾಂಕದ ಆಟಗಾರರನ್ನು ಆಯ್ಕೆ ಮಾಡುವಂತೆ ಕೇಳಲಾಯಿತು.

"ಮೊದಲ ಟೆಸ್ಟ್ ಪಂದ್ಯಕ್ಕೆ ನನ್ನ ಮೊದಲ ಮೂರು ಕ್ರಮಾಂಕದ ಆಟಗಾರರನ್ನಾಗಿ ಆಯ್ಕೆ ಮಾಡುವುದಾದರೆ, ಕೆಎಲ್ ರಾಹುಲ್ ಅವರು ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಬೇಕು. 3 ಮತ್ತು 6ನೇ ಕ್ರಮಾಂಕವು ತಂಡಕ್ಕೆ ನಿರ್ಣಾಯಕವಾಗಿದ್ದು, ಈ ಸ್ಥಾನದಲ್ಲಿ ಆಡಲು ಸಾಯಿ ಸುದರ್ಶನ್, ಕರುಣ್ ನಾಯರ್ ಹಾಗೂ ಅಭಿಮನ್ಯು ಈಶ್ವರನ್ ಅವರು ನನ್ನ ಮನಸ್ಸಿನಲ್ಲಿದ್ದಾರೆ. ಈ ಮೂವರ ಪೈಕಿ ಇಬ್ಬರು ಪ್ಲೇಯಿಂಗ್ ಇಲೆವೆನ್ ಒಳಗೆ ಬರುತ್ತಾರೆ," ಎಂದು ಮಾಜಿ ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.

IND vs ENG Test: ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯಿಂದ ಇಸಿಬಿಗೆ 800 ಕೋಟಿ ಆದಾಯ!

3ನೇ ಕ್ರಮಾಂಕಕ್ಕೆ ಅಭಿಮನ್ಯು ಸೂಕ್ತ

"ಟೀಮ್ ಇಂಡಿಯಾದ 3ನೇ ಕ್ರಮಾಂಕದಲ್ಲಿ ಅಭಿಮನ್ಯು ಈಶ್ವರನ್ ಆಡಬೇಕೆಂಬುದು ನನ್ನ ಭಾವನೆ. ಏಕೆಂದರೆ ಅವರು ಟೀಮ್ ಇಂಡಿಯಾದ ಜೊತೆಗೆ ಈ ಹಿಂದೆ ಇಂಗ್ಲೆಂಡ್ ಗೆ ಪ್ರಯಾಣಿಸಿರುವ ಸ್ವಲ್ಪ ಅನುಭವ ಹೊಂದಿದ್ದಾರೆ. ಆದ್ದರಿಂದ ಅವರೇ ಮೊದಲ ಆಯ್ಕೆ ಆಗಿರುತ್ತಾರೆ. ಅಲ್ಲದೆ ಅಭ್ಯಾಸ ಪಂದ್ಯಗಳಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ಸಾಕಷ್ಟು ರನ್ ಗಳಿಸಿದ್ದಾರೆ," ಎಂದು ಸಂಜಯ್ ಬಂಗಾರ್ ತಿಳಿಸಿದ್ದಾರೆ.

ಶುಭಮನ್ ಗಿಲ್ 4ನೇ ಕ್ರಮಾಂಕದಲ್ಲಿ ಆಡಲಿ

"ಇನ್ನು 4ನೇ ಕ್ರಮಾಂಕದಲ್ಲಿ ನಾಯಕ ಶುಭಮನ್ ಗಿಲ್ ಆಡಬೇಕು ಎಂಬುದು ನನ್ನ ಅನಿಸಿಕೆ. ಪಂದ್ಯದ ದಿನವೂ ಅವರು ಅದೇ ಕ್ರಮಾಂಕದಲ್ಲಿ ಆಡಿ ಸಾಕಷ್ಟು ರನ್ ಗಳಿಸಿ ತಂಡಕ್ಕೆ ಆಸರೆಯಾಗಲಿದ್ದಾರೆ," ಎಂದು ಅವರು ಹೇಳಿದ್ದಾರೆ.

"ಇತಿಹಾಸದಲ್ಲಿ ಟೀಮ್ ಇಂಡಿಯಾದ ಪರ 4ನೇ ಕ್ರಮಾಂಕದ ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಆದ್ದರಿಂದ ಶುಭಮನ್ ಗಿಲ್ ಅವರು ಇದೇ ಕ್ರಮಾಂಕದಲ್ಲಿ ಆಡುವುದು ಅವರಿಗೂ ಹಾಗೂ ತಂಡದ ದೃಷ್ಟಿಯಿಂದ ಉತ್ತಮವಾಗಿದೆ," ಎಂದು ಸಂಜಯ್ ಬಂಗಾರ್ ತಿಳಿಸಿದ್ದಾರೆ.