Viral Video: ಬಿಕಿನಿ ತೊಟ್ಟು ಸನ್ ಬಾತ್ ಮಾಡ್ತಿದ್ದ ವಿದೇಶಿ ಮಹಿಳೆಯರು- ಈ ಭೂಪ ಮಾಡಿದ್ದೇನು ಗೊತ್ತಾ?
ವಿದೇಶಿ ಮಹಿಳೆಯರು ಗುರುಗ್ರಾಮ್ ಡೌನ್ಟೌನ್ನಲ್ಲಿರುವ ಮ್ಯಾರಿಯಟ್ನ ಕೋರ್ಟ್ಯಾರ್ಡ್ನಲ್ಲಿ ಸನ್ ಬಾತಿಂಗ್ ಮಾಡುವಾಗ ಹೋಟೆಲ್ ರೂಂನೊಳಗಿದ್ದ ವ್ಯಕ್ತಿಯೊಬ್ಬ ರಹಸ್ಯವಾಗಿ ಅವರ ವಿಡಿಯೊ ಶೂಟ್ ಮಾಡಿದ್ದಾನೆ. ಇದನ್ನು ಮಹಿಳೆಯರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಎಲ್ಲೆಡೆ ವೈರಲ್(Viral Video) ಆಗಿದೆ.


ಚಂಡೀಗಢ: ಗುರುಗ್ರಾಮ್ ಡೌನ್ಟೌನ್ನಲ್ಲಿರುವ ಮ್ಯಾರಿಯಟ್ನ ಕೋರ್ಟ್ಯಾರ್ಡ್ನಲ್ಲಿ ತಂಗಿರುವ ವಿದೇಶಿ ಮಹಿಳೆಯರ ಗುಂಪೊಂದು, ಹೋಟೆಲ್ ಆವರಣದಲ್ಲಿ ಸನ್ಬಾತಿಂಗ್(Sunbathing) ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಅವರ ಫೋಟೊವನ್ನು ರಹಸ್ಯವಾಗಿ ತೆಗೆದಿದ್ದಾನೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ. ವೈರಲ್ ಆದ ಈ ವಿಡಿಯೊ ಪೋಸ್ಟ್ ಮಾಡಿದಾಗಿನಿಂದ, 8 ಮಿಲಿಯನ್ಗೂ ಹೆಚ್ಚು ವ್ಯೂವ್ಸ್ ಪಡೆದಿದೆ. ವಿಡಿಯೊದಲ್ಲಿ ಮಹಿಳೆಯರು ತಮ್ಮ ವಿಡಿಯೊ ಶೂಟ್ ಮಾಡಲಾಗುತ್ತಿದೆ ಎಂದು ಹೇಳಿ ಹೋಟೆಲ್ ರೂಂನ ಕಡೆಗೆ ಬೆರಳು ತೋರಿಸುತ್ತಿರುವುದು ಸೆರೆಯಾಗಿದೆ.
ಈ ವಿಡಿಯೊ ಬಗ್ಗೆ ಸೋಶಿಯಲ್ ಮೀಡಿಯಾ ನೆಟ್ಟಿಗರು ಕಿಡಿಕಾರಿದ್ದಾರೆ. ಅನೇಕರು ಹೋಟೆಲ್ನವರು ಹೊಣೆಗಾರಿಕೆಯನ್ನು ತೆಗೆದುಕೊಂಡು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ ಹೋಟೆಲ್ನವರು ಈ ಘಟನೆ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ವಿಡಿಯೊ ಇಲ್ಲಿದೆ ನೋಡಿ...
ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಭಾರತದಲ್ಲಿ ರೈಲು ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ವಿದೇಶಿ ಮಹಿಳೆಯೊಬ್ಬಳು ತನಗೆ ಆದ ಅಹಿತಕರ ಅನುಭವದ ಬಗ್ಗೆ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಅಬ್ಬಾಬ್ಬ ಇವ್ರ ಧೈರ್ಯವೇ...ಹೆಲ್ಮೆಟ್ ಧರಿಸದೆ ಹೈವೇಯಲ್ಲಿ ಸ್ಟಂಟ್ ಮಾಡಿದ ದಂಪತಿ; ವಿಡಿಯೊ ನೋಡಿ
ವಿಡಿಯೊದಲ್ಲಿ ಮಹಿಳೆ, ರೈಲಿನಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ನಿರಂತರವಾಗಿ ತನ್ನೊಂದಿಗೆ ಮಾತನಾಡಿದ್ದು ಅಲ್ಲದೇ, ರಹಸ್ಯವಾಗಿ ಫೋಟೊಗಳನ್ನು ತೆಗೆದುಕೊಳ್ಳುತ್ತಿದ್ದಾನೆಂದು ಆರೋಪಿಸಿದ್ದಾಳೆ.ಆದರೆ ಈ ಘಟನೆಯಿಂದ ಬೇಸರಗೊಂಡಿದ್ದರೂ ಮಹಿಳೆ ಮಾತ್ರ ಭಾರತದ ಬಗ್ಗೆ ತನ್ನ ಪ್ರೀತಿಯನ್ನು ಪೋಸ್ಟ್ನಲ್ಲಿ ವ್ಯಕ್ತಪಡಿಸಿದ್ದಳು.