ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Multibagger Stocks: ಭವಿಷ್ಯದ 5 ಮಲ್ಟಿಬ್ಯಾಗರ್‌ ಸ್ಟಾಕ್ಸ್

ತಮ್ಮ ಹೂಡಿಕೆಯನ್ನು ಸಾಧ್ಯವಾದಷ್ಟೂ ಬೇಗ ಡಬಲ್‌ ಮಾಡಬೇಕು. ಅಂಥ ಸ್ಟಾಕ್ಸ್‌ ಯಾವುದು ಎಂದು ಪ್ರತಿಯೊಬ್ಬರೂ ಹುಡುಕಾಡುತ್ತಾರೆ. ಮುಂದಿನ ಮಲ್ಟಿಬ್ಯಾಗರ್‌ ಸ್ಟಾಕ್ಸ್‌ ಯಾವುದು ಎಂದರೆ ಎಲ್ಲರು ಮೈಯೆಲ್ಲ ಕಿವಿಯಾಗಿ ಕೇಳುತ್ತಾರೆ ಅಲ್ಲವೇ. 5 ಮಲ್ಟಿ ಬ್ಯಾಗರ್ಸ್‌ ಸ್ಟಾಕ್ಸ್‌ಗಳ ವಿವರ ಇಲ್ಲಿದೆ.

ಭವಿಷ್ಯದ 5 ಮಲ್ಟಿಬ್ಯಾಗರ್‌ ಸ್ಟಾಕ್ಸ್

Profile Siddalinga Swamy May 28, 2025 10:41 PM

ಕೇಶವ ಪ್ರಸಾದ್‌ ಬಿ.

ಪ್ರತಿಯೊಬ್ಬರೂ ತಮ್ಮ ಹೂಡಿಕೆಯನ್ನು ಸಾಧ್ಯವಾದಷ್ಟೂ ಬೇಗ ಡಬಲ್‌ ಮಾಡಬೇಕು. ಅಂಥ ಸ್ಟಾಕ್ಸ್‌ ಯಾವುದು ಎಂದು ಹುಡುಕಾಡುತ್ತಾರೆ. ಮುಂದಿನ ಮಲ್ಟಿಬ್ಯಾಗರ್‌ ಸ್ಟಾಕ್ಸ್‌ ಯಾವುದು ಎಂದರೆ ಎಲ್ಲರು ಮೈಯೆಲ್ಲ ಕಿವಿಯಾಗಿ ಕೇಳುತ್ತಾರೆ ಅಲ್ಲವೇ. 5 ಮಲ್ಟಿ ಬ್ಯಾಗರ್ಸ್‌ ಸ್ಟಾಕ್ಸ್‌ಗಳ (Multibagger Stocks) ವಿವರ ಇಲ್ಲಿದೆ. ಈಕ್ವಿಟಿ ಮಾಸ್ಟರ್‌ ಇದನ್ನು ಪಟ್ಟಿ ಮಾಡಿದ್ದು, ವಿವರಗಳು ಸ್ವಾರಸ್ಯಕರವಾಗಿವೆ.

ರಾತ್ರೋರಾತ್ರಿ ಸ್ಟಾಕ್ಸ್‌ನಲ್ಲಿ ಮಾಡಿದ ಹೂಡಿಕೆ ಡಬಲ್‌ ಆಗಲ್ಲ ಎಂಬುದು ಈಕ್ವಿಟಿ ಇನ್ವೆಸ್ಟ್‌ ಮಾಡುವ ಎಲ್ಲರಿಗೂ ಗೊತ್ತಿದೆ. ಆದರೂ ಕೆಲವು ಕಂಪನಿಗಳಲ್ಲಿ ನೀವು ಮಾಡುವ ಹೂಡಿಕೆ ಐದು ವರ್ಷದೊಳಗೆ ಡಬಲ್‌ ಆಗುತ್ತದೆ ಎಂಬುದನ್ನು ಗೆಸ್‌ ಮಾಡಬಹುದು. ಅದಕ್ಕೊಂದು ಸರಳವಾದ ಸೂತ್ರವೂ ಇದೆ. ಏನದು? ಕಂಪನಿಯ ನಿವ್ವಳ ಲಾಭ 5 ವರ್ಷದಲ್ಲಿ ಇಮ್ಮಡಿಯಾಗಬೇಕು. ನೀವು ಏನು ಮಾಡಬೇಕು ಎಂದರೆ, ಮುಂದಿನ ಐದು ವರ್ಷಗಳಲ್ಲಿ ವಾರ್ಷಿಕ ಸರಾಸರಿ 15 %ಗೂ ಹೆಚ್ಚು ನಿವ್ವಳ ಲಾಭ ಗಳಿಸುವ ಕಂಪನಿಗಳ ಷೇರುಗಳನ್ನು ಹೂಡಕೆಗೆ ಆಯ್ಕೆ ಮಾಡಿಕೊಳ್ಳಬೇಕು. ಈಗ ಅಂಥ ಸಾಧ್ಯತೆ ಇರುವ ಷೇರುಗಳ ಬಗ್ಗೆ ತಿಳಿಯೋಣ

ಡೇಟಾ ಪ್ಯಾಟರ್ನ್ಸ್‌ (ಇಂಡಿಯಾ) - Data Patterns (India)

ಷೇರಿನ ಈಗಿನ ದರ: 2,848/-

2020ರಲ್ಲಿ ದರ: 755/-

5 ವರ್ಷದಲ್ಲಿ ಎಷ್ಟು ಏರಿಕೆ: 278%

ಡೇಟಾ ಪ್ಯಾಟರ್ನ್ಸ್‌ ಚೆನ್ನೈ ಮೂಲದ ಡಿಫೆನ್ಸ್‌ ಮತ್ತು ಏರೊಸ್ಪೇಸ್‌ ಕಂಪನಿಯಾಗಿದೆ. 1988ರಲ್ಲಿ ಸ್ಥಾಪನೆಯಾಯಿತು. ಚೆನ್ನೈನಲ್ಲಿ ಕಾರ್ಪೊರೇಟ್‌ ಕಚೇರಿ ಇದ್ದರೆ, ಬೆಂಗಳೂರು-ಹೈದರಾಬಾದ್-ದಿಲ್ಲಿಯಲ್ಲಿ ಬ್ರಾಂಚ್‌ಗಳನ್ನು ಹೊಂದಿದೆ. ರಕ್ಷಣೆ ಮತ್ತು ಏರೊಸ್ಪೇಸ್‌ಗೆ ಸಂಬಂಧಿಸಿದ ಹಾರ್ಡ್‌ ವೇರ್‌ ಡಿಸೈನ್‌, ಪ್ರಾಡಕ್ಟ್‌ ಡೆವಲಪ್‌ಮೆಂಟ್‌ ಸರ್ವೀಸ್‌, ಎಲೆಕ್ಟ್ರಾನಿಕ್‌ ವಾರ್‌ಫೇರ್‌, ಏವಿಯಾನಿಕ್‌ ಸಿಸ್ಟಮ್ಸ್‌, ರಾಡಾರ್‌, ಕೋಟ್ಸ್‌ ಬೋರ್ಡ್‌, ಎಟಿಇ & ಟೆಸ್ಟ್‌ ಸಿಸ್ಟಮ್ಸ್‌, ಆರ್‌ ಎಫ್‌ & ಮೈಕ್ರೊವೇವ್‌, ಕಾಕ್‌ಪಿಟ್‌ & ರಗ್ಡ್‌ ಸಬ್‌ ಸಿಸ್ಟಮ್ಸ್‌, ಸ್ಪೇಸ್‌ ಸಿಸ್ಟಮ್ಸ್‌, ನಾವಲ್‌ ಸಿಸ್ಟಮ್ಸ್‌, ಕಮ್ಯುನಿಕೇಶನ್‌ ಪ್ರಾಡಕ್ಟ್ಸ್‌, ಹೈ ಸ್ಪೀಡ್‌ ಪ್ರೊಸೆಸರ್ಸ್‌, ಸಾಫ್ಟ್‌ವೇರ್‌ & ಅಪ್ಲಿಕೇಶನ್‌ ಪ್ರಾಡಕ್ಟ್ಸ್‌ ನೀಡುತ್ತದೆ.

ಡೇಟಾ ಪ್ಯಾಟರ್ನ್ಸ್‌ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ, ಎಂಜಿನಿಯರಿಂಗ್‌ ಮತ್ತು ಎಕ್ಸಿಕ್ಯೂಶನ್‌ಗೆ ಪ್ರಸಿದ್ಧಿ ಪಡೆದಿದೆ. ಮುಖ್ಯವಾಗಿ ಭಾರತದ ಮಾರುಕಟ್ಟೆಗೆ ವಿಶ್ವದರ್ಜೆಯ ಪ್ರಾಡಕ್ಟ್‌ಗಳನ್ನು ನೀಡುತ್ತದೆ. ಎಚ್‌ಎಎಲ್‌, ಬಿಇಎಲ್‌, ಡಿಆರ್‌ಡಿಒ ಮೊದಲಾದ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಪ್ರಾಡಕ್ಟ್‌ಗಳನ್ನು ನೀಡುತ್ತದೆ. ಕಳೆದ ಮೂರು ವರ್ಷಗಳಿಂದ ಸರಾಸರಿ 15% ಹೆಚ್ಚಿನ ರಿಟರ್ನ್‌ ಅನ್ನು ಡೇಟಾ ಪ್ಯಾಟರ್ನ್ಸ್‌ ನೀಡಿದೆ. ಕಂಪನಿಯು ಮುಂದಿನ 1-2 ವರ್ಷಗಳಲ್ಲಿ 150 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲು ಉದ್ದೇಶಿಸಿದೆ. ಪ್ರೊಡಕ್ಷನ್‌, ಟೆಸ್ಟಿಂಗ್‌ ಸೌಲಭ್ಯಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಹೀಗಿದ್ದರೂ, ಷೇರಿನ ಹೈ ವಾಲ್ಯುಯೇಶನ್‌ ಹೂಡಿಕೆದಾರರಿಗೆ ಪ್ರಮುಖ ರಿಸ್ಕ್‌ ಎನ್ನಬಹುದು.

ಡೇಟಾ ಪ್ಯಾಟರ್ನ್ಸ್‌ ಕಳೆದ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ 114 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. 9% ಏರಿಕೆಯಾಗಿತ್ತು. ಆದಾಯವು 396 ಕೋಟಿ ರುಪಾಯಿಗೆ ಹೆಚ್ಚಳವಾಗಿತ್ತು. 355 ಕೋಟಿ ರುಪಾಯಿಗಳ ಫ್ರೆಶ್‌ ಆರ್ಡರ್‌ ಅನ್ನೂ ಗಳಿಸಿತ್ತು.

ಸರಿಗಮ ಇಂಡಿಯಾ - Saregama India

ಷೇರಿನ ಈಗಿನ ದರ: 555/-

2020ರಲ್ಲಿ ಷೇರಿನ ದರ: 28/-

ಏರಿಕೆ ಎಷ್ಟು: 1953%

ಮಾರುಕಟ್ಟೆ ಮೌಲ್ಯ: 10,670 ಕೋಟಿ ರು.

ಸರಿಗಮ ಇಂಡಿಯಾ ಫಂಡಮೆಂಟಲ್‌ ಆಗಿ ಸ್ಟ್ರಾಂಗ್‌ ಆಗಿರುವ ಷೇರು. ಭಾರತದ ಅತ್ಯಂತ ಹಳೆಯ ಮ್ಯೂಸಿಕ್‌ ಬ್ರ್ಯಾಂಡ್‌ ಆಗಿದೆ. 19% ಮಾರ್ಕೆಟ್‌ ಶೇರ್‌ ಅನ್ನು ಹೊಂದಿದೆ. 1 ಲಕ್ಷದ 60 ಸಾವಿರ ಸಾಂಗ್ಸ್‌, 70 ಸಿನಿಮಾಗಳು, 45 ಡಿಜಿಟಲ್‌ ಸೀರಿಸ್‌ಗಳ ಹಕ್ಕನ್ನು ಹೊಂದಿದೆ. ಸರಿಗಮ ಕಾರವಾನ್‌ ಎಂಬ ಡಿಜಿಟಲ್‌ ಆಡಿಯೊ ಪ್ಲೇಯರ್‌ಗಳನ್ನೂ ಸರಿಗಮ ಇಂಡಿಯಾ ಮಾರುತ್ತಿದೆ.

ಸರಿಗಮ ಇಂಡಿಯಾ ಕೋಲ್ಕೊತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 1901ರಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಯಾಗಿದೆ. ಷೇರು ಎನ್‌ ಎಸ್‌ಇ ಮತ್ತು ಬಿಎಸ್‌ಇನಲ್ಲಿ ಲಿಸ್ಟ್‌ ಆಗಿದೆ. 2024ರಲ್ಲಿ 817 ಕೋಟಿ ರುಪಾಯಿ ಆದಾಯವನ್ನು ಗಳಿಸಿತ್ತು. ಸರಿಗಮ ಇಂಡಿಯಾ ಸಂಸ್ಥೆಯು ಮುಂದಿನ 3 ವರ್ಷಗಳಿಗೆ ತನ್ನ ಆದಾಯದಲ್ಲಿ ಸರಾಸರಿ 30% ರ ಲೆಕ್ಕದಲ್ಲಿ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.

ಸುಪ್ರಿಯಾ ಲೈಫ್‌ಸೈನ್ಸ್‌ - Supriya Lifescience

ಷೇರಿನ ಈಗಿನ ದರ: 731/-

2024ರ ಮೇನಲ್ಲಿ ದರ: 363/-

ಏರಿಕೆ ಎಷ್ಟು: 101%

ಸುಪ್ರಿಯಾ ಲೈಫ್‌ಸೈನ್ಸ್‌ ಮುಂಬಯಿ ಮೂಲದ ಪಬ್ಲಿಕ್‌ ಲಿಸ್ಟೆಡ್‌ ಜೆನರಿಕ್‌ ಫಾರ್ಮಾಸ್ಯುಟಿಕಲ್‌ ಕಂಪನಿಯಾಗಿದೆ. 1987ರಲ್ಲಿ ಸ್ಥಾಪನೆಯಾಗಿದೆ. 1987ರಲ್ಲಿ ಸ್ಥಾಪನೆಯಾಗಿರುವ ಸುಪ್ರಿಯಾ ಲೈಫ್‌ಸೈನ್ಸ್‌ ಔಷಧಗಳನ್ನು ತಯಾರಿಸುವ ಕಂಪನಿಯಾಗಿದೆ. ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 100 ದೇಶಗಳಲ್ಲಿ 1,200 ಕ್ಕೂ ಹೆಚ್ಚು ಗ್ರಾಹಕರನ್ನು ಒಳಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಸರಾಸರಿ 13% ರಿಟರ್ನ್‌ ನೀಡಿದೆ.

ಇಂಟರ್‌ ಆರ್ಕ್‌ ಬಿಲ್ಡಿಂಗ್‌ ಸಲ್ಯೂಷನ್ಸ್‌ - Interarch Building Solutions

ಷೇರಿನ ಈಗಿನ ದರ: 2,122/-

2024ರಲ್ಲಿ ದರ: 1,195/-

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಾಜೆಕ್ಟ್‌ ನಿರ್ವಹಣೆ, ವಿನ್ಯಾಸ, ಎಂಜಿನಿಯರಿಂಗ್‌, ಪ್ರೊಡಕ್ಷನ್‌, ಕಂಪೊನೆಂಟ್‌ ಮಾನ್ಯುಫಾಕ್ಚರಿಂಗ್‌ ಸೇರಿದಂತೆ ಎಲ್ಲ ಸೇವೆಗಳನ್ನು ಇಂಟರ್‌ ಆರ್ಕ್‌ ಬಿಲ್ಡಿಂಗ್‌ ಸಲ್ಯೂಷನ್ಸ್‌ ನೀಡುತ್ತದೆ.

ಒನ್‌ ಸೋರ್ಸ್‌ ಸ್ಪೆಶಾಲಿಟಿ ಫಾರ್ಮ - OneSource Specialty Pharma

ಷೇರಿನ ಈಗಿನ ದರ : 1,760/-

ಮುಂಬಯಿ ಮೂಲದ ಒನ್‌ ಸೋರ್ಸ್‌ ಸ್ಪೆಶಾಲಿಟಿ ಫಾರ್ಮಾ ಕಂಪನಿಯು ಔಷಧ ವಲಯದ ಕಂಪನಿಯಾಗಿದೆ. ಔಷಧ ಉತ್ಪಾದಕ ಮತ್ತು ಬಯೊಟೆಕ್ನಾಲಜಿ ಕಂಪನಿಗಳಿಗೆ ಅಗತ್ಯ ಸೇವೆಗಳನ್ನು ನೀಡುತ್ತದೆ.

ಈ ಐದೂ ಷೇರುಗಳು ಭವಿಷ್ಯದಲ್ಲಿ ಮಲ್ಟಿ ಬ್ಯಾಗರ್‌ ಷೇರುಗಳಾಗಬಹುದು ಎಂದು ಈಕ್ವಿಟಿ ಮಾಸ್ಟರ್‌ ವರದಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | MSP Hike: ರೈತರಿಗೆ ಗುಡ್‌ನ್ಯೂಸ್‌; ಭತ್ತ, ರಾಗಿ ಸೇರಿ 14 ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳಕ್ಕೆ ಕೇಂದ್ರ ಸಂಪುಟ ಒಪ್ಪಿಗೆ