ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanitary pads: ಆರೋಗ್ಯ ಇಲಾಖೆ ನಿರ್ಲಕ್ಷ್ಯ; ಹೆಣ್ಣು ಮಕ್ಕಳಿಗೆ ಸೇರಬೇಕಾದ 1 ಲಕ್ಷಕ್ಕೂ ಅಧಿಕ ಶುಚಿ ಸ್ಯಾನಿಟರಿ ಪ್ಯಾಡ್‌ಗಳಿಗೆ ಬೆಂಕಿ!

Sanitary pads: 2017ರಲ್ಲಿ ತಯಾರಿಸಿದ ಶುಚಿ ಸ್ಯಾನಿಟರಿ ಪ್ಯಾಡ್‌ಗಳನ್ನು ಹೆಣ್ಣು ಮಕ್ಕಳಿಗೆ ಕಳೆದ 8 ವರ್ಷಗಳಿಂದ ವಿತರಿಸದೆ ಕೋಣೆಯಲ್ಲಿ ಕೊಳೆಯುವಂತೆ ಮಾಡಲಾಗಿದೆ. ಈಗ ಅವಧಿ ಮುಗಿದ ಹಿನ್ನೆಲೆ ಉಪಯೋಗಕ್ಕೆ ಬರುವುದಿಲ್ಲ ಎನ್ನುವ ಸಬೂಬು ನೀಡಿರುವ ಅಧಿಕಾರಿಗಳು, ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಲಕ್ಷಾಂತರ ಶುಚಿ ಪ್ಯಾಡ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಆರೋಗ್ಯ ಇಲಾಖೆ ನಿರ್ಲಕ್ಷ್ಯ; ಶುಚಿ ಸ್ಯಾನಿಟರಿ ಪ್ಯಾಡ್‌ಗಳಿಗೆ ಬೆಂಕಿ!

Profile Prabhakara R Jun 28, 2025 9:56 PM

ಕಲಬುರಗಿ: "ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ" ಅನ್ನೋ ಗಾದೆ ಮಾತು ಅಕ್ಷರಶಃ ಕಲಬುರಗಿಯ ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಜವಾಗಿದೆ. ಋತುಸ್ತ್ರಾವ ಸಂದರ್ಭದಲ್ಲಿ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ 10 ರಿಂದ 18 ವರ್ಷದ ಹೆಣ್ಣು ಮಕ್ಕಳಿಗಾಗಿ ರಾಜ್ಯ ಸರಕಾರ ಶುಚಿ ಯೋಜನೆಯಡಿ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು (Sanitary pads) ವಿತರಿಸುತ್ತಿದೆ. ಆದರೆ, ಈ ಆಸ್ಪತ್ರೆಯಲ್ಲಿ ಅಗತ್ಯವಿದ್ದವರಿಗೆ ನೀಡದೆ, ಅವಧಿ ಮುಗಿದ ಹಿನ್ನೆಲೆಯಲ್ಲಿ ಈಗ ಲಕ್ಷಾಂತರ ರೂ.ಮೌಲ್ಯದ 1 ಲಕ್ಷಕ್ಕೂ ಅಧಿಕ ಸ್ಯಾನಿಟರಿ ಪ್ಯಾಡ್‌ಗಳಿಗೆ ಬೆಂಕಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಸೇರಬೇಕಾದ 1 ಲಕ್ಷಕ್ಕೂ ಅಧಿಕ ಶುಚಿ ಪ್ಯಾಡ್‌ಗಳನ್ನು ಅಧಿಕಾರಿಗಳು ಸುಟ್ಟು ಹಾಕುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

2017ರಲ್ಲಿ ತಯಾರಿಸಿದ ಶುಚಿ ಪ್ಯಾಡ್‌ಗಳನ್ನು ಫಲಾನುಭವಿಗಳಿಗೆ ಕಳೆದ 8 ವರ್ಷಗಳಿಂದ ವಿತರಿಸದೆ ಕೋಣೆಯಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಈಗ ಉಪಯೋಗಕ್ಕೆ ಬರುವುದಿಲ್ಲ ಎನ್ನುವ ಸಬೂಬು ನೀಡಿ, ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಲಕ್ಷಾಂತರ ಶುಚಿ ಪ್ಯಾಡ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

Sanitary pads (1)

ಈ ಸುದ್ದಿಯನ್ನೂ ಓದಿ | Moral Policing: ನೈತಿಕ ಪೊಲೀಸ್‌ಗಿರಿ; ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದ 6 ಮಂದಿ ಬಂಧನ

ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ಹಳ್ಳಿಗಳ ಹೆಣ್ಣುಮಕ್ಕಳಿಗೆ ಶುಚಿ ಪ್ಯಾಡ್ ವಿತರಣೆ ಮಾಡಬೇಕಾಗಿತ್ತು. ದುರ್ದೈವಕ್ಕೆ ಹಂಚಿಕೆ ಮಾಡದೇ ಆರೋಗ್ಯ ಕೇಂದ್ರದಲ್ಲಿ ಬೆಂಕಿ ಇಟ್ಟು ಸೌಲಭ್ಯ ಸಿಗಬೇಕಾದವರಿಗೆ ಅನ್ಯಾಯ ಮಾಡಲಾಗಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸುತ್ತಮುತ್ತಲಿನ ಮಹಿಳೆಯರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.