Samantha Ruth Prabhu: ನಾಗಚೈತನ್ಯರಿಂದ 200 ಕೋಟಿ ರೂ. ಜೀವನಾಂಶ ಪಡೆದ್ರಾ ಸಮಂತಾ? ನಟಿ ಹೇಳಿದ್ದೇನು?
ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ವಿಚ್ಛೇದನ ಪಡೆದು ನಾಲ್ಕು ವರ್ಷಗಳಾದರೂ ಇನ್ನೂ ಇವರಿಬ್ಬರ ವಿಚ್ಛೇದನದ ಬಗ್ಗೆ ಚರ್ಚೆಯಾಗುತ್ತಿದೆ. ವಿಚ್ಛೇದನ ಬಳಿಕ ಸಮಂತಾ ಅವರು ಭಾರಿ ಪ್ರಮಾಣದ ಜೀವನಾಂಶ ಪಡೆದಿದ್ದಾರೆ ಎನ್ನುವ ಊಹಾಪೋಹಗಳು ಕೇಳಿ ಬರುತ್ತಿವೆ. ಇದಕ್ಕೆ ಸಮಂತಾ ಅವರೇ ಒಂದು ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ. ಅದು ಏನು ಗೊತ್ತೇ?



ವಿಚ್ಛೇದನದ ಬಳಿಕ ಸಮಂತಾ ರುತ್ ಪ್ರಭು ಜೀವನಾಂಶವಾಗಿ ನಾಗಚೈತನ್ಯ ಅವರಿಂದ 200 ಕೋಟಿ ರೂ. ಪಡೆದಿದ್ದಾರೆ ಎನ್ನುವ ವದಂತಿಗಳಿಗೆ ಈಗ ಸ್ಪಷ್ಟ ಉತ್ತರ ಸಿಕ್ಕಿದೆ. ಸಮಂತಾ ಅವರೇ ಸ್ವತಃ ಇದಕ್ಕೆ ಕಾರ್ಯಕ್ರಮವೊಂದರಲ್ಲಿ ಉತ್ತರ ನೀಡಿದ್ದಾರೆ. 2017ರಲ್ಲಿ ವಿವಾಹವಾಗಿದ್ದ ನಾಗಚೈತನ್ಯ ಮತ್ತು ಸಮಂತಾ 2021ರಲ್ಲಿ ವಿಚ್ಛೇದನ ಪಡೆದಿದ್ದರು.

ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನದ ಬಳಿಕ ಇದೀಗ ಸಮಂತಾ ರುತ್ ಪ್ರಭು ಅವರು ಸಿನಿಮಾ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಇದೆ. ಆದರೆ ಈ ಬಗ್ಗೆ ಇವರಿಬ್ಬರೂ ಎಲ್ಲೂ ಅಧಿಕೃತ ಹೇಳಿಕೆ ನೀಡಿಲ್ಲ. ಸಮಂತಾ ಅವರೇ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರಾಜ್ ಜೊತೆ ಇರುವ ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದ ಅತಿದೊಡ್ಡ ಸೂಪರ್ಸ್ಟಾರ್ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿರುವ ಸಮಂತಾ ರುತ್ ಪ್ರಭು ಅವರ ಪ್ರತಿಯೊಂದು ನಡೆಯೂ ಇತ್ತೀಚೆಗೆ ಸುದ್ದಿಯಾಗುತ್ತಿದೆ. ನಾಗ ಚೈತನ್ಯ ಅವರು ವಿಚ್ಛೇದನದ ಬಳಿಕ ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾಗಿದ್ದಾರೆ.

ನಾಗಚೈತನ್ಯ ಅವರ ಮರು ಮದುವೆಯ ಬಳಿಕವೂ ಸಮಂತಾ ಮತ್ತು ಚೈತನ್ಯ ಅವರ ವಿಚ್ಛೇದನ ಸುದ್ದಿಗಳು ಆಗಾಗ್ಗೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ಸಮಂತಾ ಜೀವನಾಂಶವಾಗಿ ನಾಗಚೈತನ್ಯ ಅವರಿಂದ 200 ಕೋಟಿ ರೂ. ಪಡೆದಿದ್ದಾರೆ ಎನ್ನುವ ಊಹಾಪೋಹದ ಬಗ್ಗೆ ಶೋವೊಂದರಲ್ಲಿ ಮಾತನಾಡಿದ್ದಾರೆ. ವಿಚ್ಚೇದನದ ಬಳಿಕ ಜೀವನಾಂಶವಾಗಿ ತಾನು ನಾನು ಯಾರಿಂದಲೂ ಒಂದು ಪೈಸೆಯನ್ನೂ ಪಡೆದಿಲ್ಲ ಇದು ಸತ್ಯ ಎಂದು ಹೇಳಿದ್ದಾರೆ.

ಜಿಕ್ಯೂ ಪವರ್ ಲಿಸ್ಟ್ 2025ರ ಕಾರ್ಯಕ್ರಮದಲ್ಲಿ ನಟಿ ಸಮಂತಾ ರುತ್ ಪ್ರಭು ಎಲ್ಲರ ಗಮನ ಸೆಳೆದಿದ್ದು, ಮೈ ಬಣ್ಣದ ಕ್ರೇಶ ಬಜಾಜ್ ಉಡುಗೆ ಧರಿಸಿದ್ದರು. ಅದಕ್ಕೆ ಪೂರಕವಾಗಿ ಹದವಾದ ಮೇಕಪ್ ಮಾಡಿಕೊಂಡಿದ್ದರು. ಸಣ್ಣ ಕಿವಿಯೋಲೆ, ಹೈಹೀಲ್ಸ್ ಧರಿಸಿ ಮಿಂಚಿದ್ದರು.

ಸಮಂತಾ ಅವರು 'ದಿ ಫ್ಯಾಮಿಲಿ ಮ್ಯಾನ್' ನಿರ್ದೇಶಕ ರಾಜ್ ನಿಧಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ, ಸಮಂತಾ ಮತ್ತು ರಾಜ್ ಈವರೆಗೆ 'ದಿ ಫ್ಯಾಮಿಲಿ ಮ್ಯಾನ್ 2' ಮತ್ತು 'ಸಿಟಾಡೆಲ್: ಹನಿ ಬನ್ನಿ ಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸಮಂತಾ ಪ್ರಸ್ತುತ 'ಮಾ ಇಂತಿ ಬಂಗಾರಂ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.