77 ರನ್‌ಗಳ ಜೊತೆಯಾಟದ ಮೂಲಕ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನಾ, ಶಫಾಲಿ ವರ್ಮಾ!
ಇಂಗ್ಲೆಂಡ್ ವಿರುದ್ದ ಮಹಿಳಾ ಟಿ20ಐ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನಾ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಈ ಇಬ್ಬರೂ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನಾ-ಶಫಾಲಿ ವರ್ಮಾ.

ನಾಟಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮಹಿಳಾ ಟಿ20ಐ ಸರಣಿಯ(INDW vs ENGW) ಮೊದಲನೇ ಪಂದ್ಯದಲ್ಲಿ ಮುರಿಯದ ಮೊದಲನೇ ವಿಕೆಟ್‌ಗೆ ದೊಡ್ಡ ಜೊತೆಯಾಟವನ್ನು ಆಡುವ ಮೂಲಕ ಭಾರತ ತಂಡದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (Shafali Verma) ಹಾಗೂ ಸ್ಮೃತಿ ಮಂಧಾನಾ (Smriti Mandhana)ಮಹತ್ವದ ದಾಖಲೆಯನ್ನು ಬರೆದಿದ್ದಾರೆ. ಶನಿವಾರ ಇಲ್ಲಿನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡದ ಪರ ಸ್ಮೃತಿ ಮಂಧಾನಾ ಹಾಗೂ ಶಫಾಲಿ ವರ್ಮಾ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 77 ರನ್‌ಗಳನ್ನು ಜೊತೆಯಾಟವನ್ನು ಆಡಿತ್ತು.
ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನಾ ಟಿ20ಐ ಕ್ರಿಕೆಟ್‌ನಲ್ಲಿ ಮುರಿಯದ ಮೊದಲನೇ ವಿಕೆಟ್‌ಗೆ 21ನೇ ಬಾರಿ 50ಕ್ಕಿಂತ ಹೆಚ್ಚು ರನ್‌ಗಳ ಜೊತೆಯಾಟವನ್ನು ಆಡಿದೆ. ಆ ಮೂಲಕ 20 ಬಾರಿ 50ಕ್ಕೂ ಹೆಚ್ಚು ಬಾರಿ ಜೊತೆಯಾಟಗಳನ್ನು ಆಡಿದ್ದ ಆಸ್ಟ್ರೇಲಿಯಾದ ಅಲೀಸಾ ಹೀಲಿ ಹಾಗೂ ಬೆಥ್ ಮೂನಿ ಅವರ ದಾಖಲೆಯನ್ನು ಭಾರತದ ಜೋಡಿ ಮುರಿದಿದೆ. ಅಲ್ಲದೆ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಆರಂಭಿಕ ವಿಕೆಟ್‌ಗೆ ಅತಿ ಹೆಚ್ಚು ರನ್ ದಾಖಲಿಸಿದ ಮೊದಲ ಜೋಡಿ ಎಂಬ ವಿಶ್ವ ದಾಖಲೆಯನ್ನು ಮಂಧಾನಾ ಹಾಗೂ ಶಫಾಲಿ ಜೋಡಿ ಬರೆದಿದೆ. ಭಾರತದ ಈ ಜೋಡಿ 78 ಟಿ20ಐ ಇನಿಂಗ್ಸ್‌ಗಳಿಂದ 36.17ರ ಸರಾಸರಿಯಲ್ಲಿ ಮೂರು ಶತಕಗಳು ಹಾಗೂ 15 ಅರ್ಧಶತಕಗಳ ಮೂಲಕ 2713 ರನ್‌ಗಳನ್ನು ಬಾರಿಸಿದೆ.
INDW vs SLW: ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 11ನೇ ಶತಕ ಸಿಡಿಸಿದ ಸ್ಮೃತಿ ಮಂಧಾನಾ!
ಭಾರತದ ಪರ ಇನಿಂಗ್ಸ್ ಆರಂಭಿಸಿದ ಶಫಾಲಿ ಹಾಗೂ ಮಂಧಾನಾ ಜೋಡಿ ಆರಂಭದಿಂದಲೇ ಸೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ಪಂದ್ಯದ ಎರಡನೇ ಎಸೆತದಲ್ಲಿಯೇ ಸ್ಮೃತಿ ಮಂಧಾನಾ ಅವರು ಲೌರೆನ್ ಬೆಲ್ ಅವರಿಗೆ ಕವರ್ ಡ್ರೈವ್ ಮೂಲಕ ಬೌಂಡರಿಯನ್ನು ಬಾರಿಸಿ ಶುಭಾರಂಭ ಮಾಡಿದ್ದರು. ಎರಡನೇ ಓವರ್‌ನಲ್ಲಿ ಹಂಗಾಮಿ ನಾಯಕಿ ಇನ್ನೂ ಎರಡು ಬೌಂಡರಿಗಳನ್ನು ಬಾರಿಸಿದ್ದರು. ಇನ್ನು ಎಂಟು ತಿಂಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದ ಶಫಾಲಿ ವರ್ಮಾ ಲೌರೆನ್ ಫಿಲರ್‌ಗೆ ಮೊದಲ ಬೌಂಡರಿ ಬಾರಿಸಿದ್ದರು.
FIFTY & counting 🙌
— BCCI Women (@BCCIWomen) June 28, 2025
Captain Smriti Mandhana gets to her 31st half-century in T20Is 👏👏
Updates ▶️ https://t.co/iZwkYt8agO#TeamIndia | #ENGvIND | @mandhana_smriti pic.twitter.com/3gW4ZsICDW
ಆರಂಭಿಕ ಬ್ಯಾಟ್ಸ್‌ವುಮೆನ್ ಶಫಾಲಿ ವರ್ಮಾ ಅವರು ಒಂದು ಜೀವದಾನ ಕೂಡ ಪಡೆದಿದ್ದರು. ಇದೇ ಓವರ್‌ನ ಕೊನೆಯ ಎಸೆತದಲ್ಲಿ ಅವರು ಚೆಂಡನ್ನು ತಮ್ಮ ಹೆಲ್ಮೆಟ್‌ಗೆ ಹೊಡೆಸಿಕೊಂಡಿದ್ದರು. ಈ ವೇಳೆ ಅಂಪೈರ್ ಬ್ಯಾಟ್‌ಗೆ ತಾಗಿರಬಹುದೆಂದು ಔಟ್ ಕೊಟ್ಟಿದ್ದರು. ಆದರೆ, ಡಿಆರ್‌ಎಸ್ ಪಡೆದ ಶಫಾಲಿ ನಾಟ್‌ಔಟ್ ಆಗಿದ್ದರು. ನಂತರ ಇದೇ ಓವರ್‌ನಲ್ಲಿ ಅವರು ಮತ್ತೊಂದು ಬೌಂಡರಿ ಬಾರಿಸಿದರು. ನಂತರ ಎಬ್ಬರೂ ಬ್ಯಾಟರ್ಸ್ ಇಂಗ್ಲೆಂಡ್ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಸ್ಮೃತಿ ಮಂಧಾನಾ ಅವರು ಕೇವಲ 37 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಸೋಫಿ ಎಕ್ಲೆಸ್ಟೋನ್ ಅವರ ಓವರ್‌ನಲ್ಲಿ ಮಂಧಾನಾ ಅವರು ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ 19 ರನ್‌ಗಳನ್ನು ಬಾರಿಸಿದ್ದರು.
ಶತಕ ಬಾರಿಸಿದ ಸ್ಮೃತಿ ಮಂಧಾನಾ
ಅರ್ಧಶತಕ ಬಾರಿಸಿದ ಬಳಿಕ ಸ್ಮೃತಿ ಮಂಧಾನ ತಮ್ಮ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿಕೊಂಡರು. ಅವರು 62 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 112 ರನ್‌ಗಳನ್ನು ಬಾರಿಸಿದರು. ಆ ಮೂಲಕ ಶತಕವನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಮೂರೂ ಸ್ವರೂಪದಲ್ಲಿ ಶತಕಗಳನ್ನು ಬಾರಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಸ್ಮೃತಿ ಮಂಧಾನಾ ಬರೆದಿದ್ದಾರೆ.