ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pregnancy Offer: ಮಕ್ಕಳನ್ನು ಹೆರಲು ವಿದ್ಯಾರ್ಥಿನಿಯರಿಗೆ ಆಫರ್! ಏನಿದು ಶಾಕಿಂಗ್‌ ಘಟನೆ?

ರಷ್ಯಾದಲ್ಲಿ ಜನನ ಪ್ರಮಾಣ ಕುಸಿಯುತ್ತಿದೆ. ಇದನ್ನು ಸುಧಾರಣೆ ಮಾಡಲು ಕರೇಲಿಯಾದ ಸ್ಥಳೀಯಾಡಳಿತವು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇದು ಈ ವರ್ಷದ ಜನವರಿಯಿಂದ ಜಾರಿಯಲ್ಲಿದೆ. ಈ ಯೋಜನೆ ಪ್ರಕಾರ, 25 ವರ್ಷದೊಳಗಿನ ವಿದ್ಯಾರ್ಥಿನಿಯರು ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದರೆ ಅವರಿಗೆ 1,00,000 ರೂಬಲ್ಸ್ ಅಂದರೆ ಸರಿಸುಮಾರು 81,000 ರೂ. ನಗದು ಬಹುಮಾನ ನೀಡಲಾಗುತ್ತದೆ.

ಮಕ್ಕಳನ್ನು ಹೆತ್ತರೆ  81,000 ರೂ. ಬಹುಮಾನ-ವಿದ್ಯಾರ್ಥಿನಿಯರಿಗೆ ಆಫರ್!

ಮಾಸ್ಕೋ: ಜನನ ಪ್ರಮಾಣ (Birth rate) ಕುಸಿಯುತ್ತಿರುವುದರಿಂದ (birth rate decline) ಇದನ್ನು ಸುಧಾರಿಸಲು ರಷ್ಯಾದ (russia) ಸ್ಥಳೀಯಾಡಳಿತವೊಂದು ವಿದ್ಯಾರ್ಥಿನಿಯರಿಗೆ ಬಹುದೊಡ್ಡ ಆಫರ್ ನೀಡಿದೆ. ಅದು ಏನು ಗೊತ್ತೇ? 25 ವರ್ಷದೊಳಗಿನ ವಿದ್ಯಾರ್ಥಿನಿಯರು ಗರ್ಭಿಣಿಯಾದರೆ (Pregnant Offer) 81,000 ನಗದು ಬಹುಮಾನ ಪುರಸ್ಕಾರ (cash prize) ನೀಡುವುದಾಗಿ ಹೇಳಿದೆ. ಈ ವರ್ಷದ ಜನವರಿಯಲ್ಲೇ ಈ ಆಫರ್ ಅನ್ನು ವಿದ್ಯಾರ್ಥಿನಿಯರಿಗೆ (students) ನೀಡಲಾಗಿದೆ. ಇದರಲ್ಲಿ ವಿದ್ಯಾರ್ಥಿನಿಯರು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದರೆ ಮಾತ್ರ ನಗದು ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ ಎನ್ನಲಾಗಿದೆ.

ಈ ಕುರಿತು ಮಾಸ್ಕೊ ಟೈಮ್ಸ್ ವರದಿ ಮಾಡಿದ್ದು, ರಷ್ಯಾದಲ್ಲಿ ಜನನ ಪ್ರಮಾಣ ಕುಸಿಯುತ್ತಿದೆ. ಇದನ್ನು ಸುಧಾರಣೆ ಮಾಡಲು ಕರೇಲಿಯಾದ ಸ್ಥಳೀಯಾಡಳಿತವು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇದು ಈ ವರ್ಷದ ಜನವರಿಯಿಂದ ಜಾರಿಯಲ್ಲಿದೆ. ಈ ಯೋಜನೆ ಪ್ರಕಾರ, 25 ವರ್ಷದೊಳಗಿನ ವಿದ್ಯಾರ್ಥಿನಿಯರು ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದರೆ ಅವರಿಗೆ 1,00,000 ರೂಬಲ್ಸ್ ಅಂದರೆ ಸರಿಸುಮಾರು 81,000 ರೂ. ನಗದು ಬಹುಮಾನ ನೀಡಲಾಗುತ್ತದೆ.

ಕರೇಲಿಯಾ ನಿವಾಸಿಯಾಗಿದ್ದು,ಸ್ಥಳೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ 25 ವರ್ಷಕ್ಕಿಂತ ಕೆಳಗಿನ ಯುವತಿಯರು ಮಕ್ಕಳನ್ನು ಹೊಂದಬಹುದು. ರಷ್ಯಾದ ಹಲವಾರು ಪ್ರದೇಶಗಳಲ್ಲಿ ಯುವತಿಯರಿಗೆ ಈ ಆಫರ್ ನೀಡಲಾಗಿದೆ. ಇದಕ್ಕಾಗಿ ಸುಮಾರು 11 ಪ್ರಾದೇಶಿಕ ಸರ್ಕಾರಗಳು ಹೆರಿಗೆಗಾಗಿ ಮಹಿಳಾ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: Parag Jain: RAW ಮುಖ್ಯಸ್ಥರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಪರಾಗ್ ಜೈನ್ ಆಯ್ಕೆ; ಯಾರಿವರು ಹಿನ್ನೆಲೆಯೇನು?

ರಷ್ಯಾದಲ್ಲಿ ಜನನ ಪ್ರಮಾಣ ಕುಸಿಯುತ್ತಿದ್ದು, ಇದಕ್ಕಾಗಿ ಹೆರಿಗೆಗೆ ಪ್ರೋತ್ಸಾಹ ನೀಡುವ ನೀತಿಯನ್ನು ರೂಪಿಸಲಾಗುತ್ತಿದೆ. ಆದರೆ ಇದರ ಪರಿಣಾಮದ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.