ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC Points Table: ಆಸ್ಟ್ರೇಲಿಯಾಗೆ ಅಗ್ರ ಸ್ಥಾನ, 5ನೇ ಸ್ಥಾನಕ್ಕೆ ಕುಸಿದ ಭಾರತ ತಂಡ!

2025-27ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಯಣದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಕ್ರಮವಾಗಿ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳ ಎದುರು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಹಾಗೂ ಮೂರನೇ ಸ್ಥಾನವನ್ನು ಅಲಂಕರಿಸಿವೆ. ಇದೇ ವೇಳೆ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗೆಲುವು ಸಾಧಿಸಿದ ಇಂಗ್ಲೆಂಡ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಭಾರತ 5ನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾಗೆ ಅಗ್ರ ಸ್ಥಾನ, 5ನೇ ಸ್ಥಾನಕ್ಕೆ ಕುಸಿದ ಭಾರತ ತಂಡ!

ಟೆಸ್ಟ್‌ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ 5ನೇ ಸ್ಥಾನಕ್ಕೆ ಕುಸಿದ ಭಾರತ.

Profile Ramesh Kote Jun 28, 2025 3:40 PM

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಬಾರ್ಬಡೋಸ್‌ನಲ್ಲಿ ಶನಿವಾರ ಅಂತ್ಯವಾದ ಮೂರು ಪಂದ್ಯಗಳ ಟೆಸ್ಟ್ ಸರಣಿಯ (AUS vs WI) ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 159 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ತಂಡ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿ (WTC Points Table)ಯಲ್ಲಿ ಅಗ್ರ ಸ್ಥಾನಕ್ಕೇರಿದರೆ, ಬಾಂಗ್ಲಾದೇಶ ವಿರುದ್ಧ ಇನಿಂಗ್ಸ್ ಹಾಗೂ 78 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿದ ಶ್ರೀಲಂಕಾ (Srilanka) ಮೂರನೇ ಸ್ಥಾನಕ್ಕೇರಿದೆ. ಭಾರತ ತಂಡದ ವಿರುದ್ಧ ಲೀಡ್ಸ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಗೆದ್ದಿದ್ದ ಇಂಗ್ಲೆಂಡ್ ತಂಡ ಎರಡನೇ ಸ್ಥಾನದಲ್ಲಿದ್ದರೆ, ಭಾರತ ತಂಡ (India) ಐದನೇ ಸ್ಥಾನಕ್ಕೆ ಕುಸಿದಿದೆ.

ಕಿಂಗ್ಸ್‌ಸ್ಟನ್ ಓವಲ್‌ನಲ್ಲಿ ಶನಿವಾರ ಮುಕ್ತಾಯಗೊಂಡಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣವಾಗಿ ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ, ಟ್ರಾವಿಸ್ ಹೆಡ್ ಅವರ ಅರ್ಧಶತಕ (59ರನ್) ಶತಕದ ಹೊರತಾಗಿಯೂ ಕೆರೆಬಿಯನ್ ವೇಗಿಗಳಾದ ಜೇಡನ್ ಸೀಲ್ಸ್‌ (60ಕ್ಕೆ5) ಹಾಗೂ ಶಮರ್ ಜೋಸೆಫ್ (46ಕ್ಕೆ4) ಬೌಲಿಂಗ್ ದಾಳಿಯಿಂದ 180 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್‌ನ ತ್ರಿವಳಿ ವೇಗಿಗಳಾದ ಮಿಚೆಲ್ ಸ್ಟಾರ್ಕ್‌ (3 ವಿಕೆಟ್), ಜಾಶ್‌ ಹೇಝಲ್‌ವುಡ್ (2 ವಿಕೆಟ್ )ಹಾಗೂ ಪ್ಯಾಟ್ ಕಮಿನ್ಸ್ (2 ವಿಕೆಟ್ )ಅವರ ಸಂಘಟಿತ ದಾಳಿಯಿಂದ ವೆಸ್ಟ್ ಇಂಡೀಸ್ ತಮ್ಮ ಪ್ರಥಮ ಇನಿಂಗ್ಸ್ ಅನ್ನು 190 ರನ್‌ಗಳಿಗೆ ಮುಕ್ತಾಯಗೊಳಿಸಿತು.

IND vs ENG 2nd Test: ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ; ಮೊದಲ ದಿನ ಬುಮ್ರಾ, ಪ್ರಸಿದ್ಧ್‌ ಗೈರು

10 ರನ್‌ಗಳ ಹಿನ್ನಡೆಯಿಂದ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 65 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಟ್ರಾವಿಸ್ ಹೆಡ್ (63 ರನ್), ಬೇ ವೆಬ್‌ಸ್ಟರ್‌ (61 ರನ್) ಹಾಗೂ ಅಲೆಕ್ಸ್ ಕೇರಿ (65 ರನ್) ಅವರ ಅರ್ಧಶತಕಗಳ ನೆರವಿನಿಂದ 310 ರನ್ ಕಲೆಹಾಕಿತು‌. ಶಮರ್‌ ಜೋಸೆಫ್ 5 ವಿಕೆಟ್ ಸಾಧನೆ ಮಾಡಿದರು.

ಗೆಲುವಿಗಾಗಿ 300 ರನ್ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್ ಪರ ಶಮರ್ ಜೋಸೆಫ್ ಸ್ಫೋಟಕ ಬ್ಯಾಟಿಂಗ್ (44 ರನ್, 22 ಎಸೆತ, 4 ಬೌಂಡರಿ, 4 ಸಿಕ್ಸರ್) ನಡುವೆಯೂ ಜಾಶ್ ಹೇಝಲ್‌ವುಡ್ (5 ವಿಕೆಟ್) ವೇಗದ ದಾಳಿಗೆ ನಲುಗಿದ ವಿಂಡೀಸ್, 149 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ವೆಸ್ಟ್‌ ಇಂಡೀಸ್‌ 159 ರನ್‌ಗಳ ಸೋಲು ಅನುಭವಿಸಿತು.

IND vs ENG: ಜಸ್‌ಪ್ರೀತ್‌ ಬುಮ್ರಾ ಔಟ್‌, ಎರಡನೇ ಟೆಸ್ಟ್‌ಗೆ ಭಾರತ ತಂಡದಲ್ಲಿ 4 ಬದಲಾವಣೆ ಸಾಧ್ಯತೆ!

ಶ್ರೀಲಂಕಾ ತಂಡಕ್ಕೆ ಇನಿಂಗ್ಸ್ ಗೆಲುವು

ಬಾಂಗ್ಲಾದೇಶ ವಿರುದ್ಧ ಕೊಲಂಬೊದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಇನಿಂಗ್ಸ್ ಹಾಗೂ 78 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನಜ್ಮುಲ್‌ ಹುಸೇನ್‌ ಸ್ಯಾಂಟೊ ಬಳಗ 247 ರನ್‌ಗಳಿಗೆ ಸರ್ವಪತನ ಕಂಡಿತು. ಶ್ರೀಲಂಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ ಪ್ರಥುಮ್ ನಿಸಾಂಕ (158 ರನ್), ದಿನೇಶ್ ಚಾಂಡಿಮಾಲ್ (93 ರನ್ ) ಹಾಗೂ ಕುಶಾಲ್ ಮೆಂಡಿಸ್ (84 ರನ್) ಅವರ ಬ್ಯಾಟಿಂಗ್ ಬಲದಿಂದ 458 ಬೃಹತ್ ಮೊತ್ತ ಕಲೆಹಾಕಿ 211 ರನ್‌ಗಳ ಇನಿಂಗ್ಸ್ ಮುನ್ನಡೆ ಪಡೆಯಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಪ್ರಭತ್ ಜಯಸೂರ್ಯ (5 ವಿಕೆಟ್) ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾದೇಶ 133 ರನ್‌ಗಳಿಸಿ ಇನಿಂಗ್ಸ್ ಹಾಗೂ 78 ರನ್ ಗಳ ಸೋಲು ಕಂಡಿತು. ಪಥುಮ್ ನಿಸಾಂಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

2025-27 ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿ

WTC Points Table