Viral Video: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿಯನ್ನು ಉಳಿಸಿಕೊಳ್ಳಲು ಪತಿ ಮಾಡಿದ್ದೇನು ಗೊತ್ತಾ? ಕಣ್ಣಂಚು ಒದ್ದೆಯಾಗುತ್ತೆ ಇವರಿಬ್ಬರ ಪ್ರೀತಿ ನೋಡಿದ್ರೆ!
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿಯನ್ನು ಉಳಿಸಿಕೊಳ್ಳಲು ಪತಿಯೊಬ್ಬ ಆಕೆ ಮಲಗಿದ್ದ ಬೆಡ್ ಮುಂದೆ ಹಾಡು ಹಾಡಿ ಆಕೆಯನ್ನು ಕುಣಿಸಿದ್ದಾನೆ. ಅವರ ನಡುವಿನ ಪ್ರೀತಿಯ ಕ್ಷಣದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.


ಬೀಜಿಂಗ್: ನಾವು ಪ್ರೀತಿಸುವವರಿಗಾಗಿ ಏನು ಬೇಕಾದರೂ ಮಾಡುತ್ತೇವೆ. ಅವರು ನೋವಲ್ಲಿದ್ದಾಗಲು ಅವರನ್ನು ನಗಿಸಲು ನೋಡುತ್ತೇವೆ. ಅದೇರೀತಿ ಚೀನಾದ ವ್ಯಕ್ತಿಯೊಬ್ಬ ಮಾರಕ ಕಾಯಿಲೆಯಾದ ಕ್ಯಾನ್ಸರ್(Cancer)ನಿಂದ ಬಳಲುತ್ತಿದ್ದ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಆಕೆ ಮಲಗಿದ್ದ ಹಾಸಿಗೆಯ ಎದುರು ನಿಂತು ಹಾಡು ಹಾಡಿ ಆಕೆಯ ಜೊತೆ ಡ್ಯಾನ್ಸ್ ಮಾಡಿದ್ದಾನೆ. ದಂಪತಿಯ ಈ ಪ್ರೀತಿಯನ್ನು ನೋಡಿ ನೆಟ್ಟಿಗರ ಕಣ್ಣಂಚು ಒದ್ದೆಯಾಗಿವೆಯಂತೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಡೆಂಗ್ ಎಂಬ ವ್ಯಕ್ತಿಯ ಪತ್ನಿ ಮೈದಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಳಂತೆ. ಅದೂ ಅಲ್ಲದೇ ಈ ಕಾಯಿಲೆಯ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಬೇಕಾಗಿರುವುದರಿಂದ ತನ್ನ ಪತಿಯ ಬಳಿ ಚಿಕಿತ್ಸೆ ಮಾಡುವುದು ಎಂದು ಆಕೆ ಹತಾಶೆಯಿಂದ ಹೇಳಿದ್ದಾಳಂತೆ. ಆದರೆ ಡೆಂಗ್ ಮಾತ್ರ ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೇ, ಹತಾಶೆಗೊಂಡಿದ್ದ ತನ್ನ ಪತ್ನಿಯನ್ನು ಸಮಾಧಾನಗೊಳಿಸಿದ್ದಾನಂತೆ.
ವಿಡಿಯೊ ಇಲ್ಲಿದೆ ನೋಡಿ...
In sickness and in health, the dedication of this husband
— Science girl (@gunsnrosesgirl3) April 17, 2025
Love is the only answer
pic.twitter.com/3IfZnMkSVE
ಅದೂ ಅಲ್ಲದೇ, ಹೆಂಡತಿಯ ಆರೈಕೆ ಮಾಡುವುದಕ್ಕಾಗಿ ಆತ ತನ್ನ ಕೆಲಸಕ್ಕೂ ಸಹ ರಾಜೀನಾಮೆ ನೀಡಿ,ಅವಳ ಜೊತೆ ಕಾಲ ಕಳೆಯುತ್ತಿದ್ದಾನಂತೆ.ಹೆಂಡತಿಯ ಮನಸ್ಸನ್ನು ಸಮಾಧಾನಗೊಳಿಸಲು ಆತ ಆಕೆಗಾಗಿ ಹಾಡುವುದು ಜೊತೆಗೆ ಅವಳ ಬೆಡ್ ಎದುರು ಡ್ಯಾನ್ಸ್ ಮಾಡುವುದು ಹಾಗೇ ಆಕೆಯನ್ನು ಅಪ್ಪಿ ಮುದ್ದಾಡುತ್ತಾನೆ. ಇದರಿಂದ ಆಕೆಯ ಮನಸ್ಸು ಹಗುರವಾಗಿ ಕಾಯಿಲೆಯಿಂದ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ ಎಂಬುದು ಆತನ ನಂಬಿಕೆ!
ಅಪ್ಪನ ಕಾಳಜಿ ಕಂಡು ಮಗಳು ಕೂಡ ಅಮ್ಮನ ಕೆನ್ನೆಗೆ ಪ್ರೀತಿಯಿಂದ ಮುತ್ತಿಟ್ಟಿದ್ದಾಳಂತೆ. ಈ ಹೃದಯಸ್ಪರ್ಶಿ ದೃಶ್ಯವನ್ನು ಡೆಂಗ್ ವಿಡಿಯೊದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಆ ಭಾವನಾತ್ಮಕ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಸಾಕಷ್ಟೆ ಪ್ರೀತಿ ಹಾಗೂ ಧನ ಸಹಾಯ ಕೂಡ ಸಿಕ್ಕಿದೆಯಂತೆ.
ಮಾಹಿತಿ ಪ್ರಕಾರ, ಡೆಂಗ್ ಮತ್ತು ಮೈದಿ 2016ರಲ್ಲಿ ಸ್ನೇಹಿತೊಬ್ಬನ ಮದುವೆಯಲ್ಲಿ ಭೇಟಿಯಾದರಂತೆ. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿ ಮದುವೆಯಾಗಿದ್ದಾರೆ. ಮಗು ಜನಿಸಿದ ಒಂದು ವರ್ಷದ ಬಳಿಕ, ಕ್ಯಾನ್ಸರ್ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತಂತೆ. ಮೈದಿ, ಗ್ಲಿಯೋಮಾದಿಂದ ಬಳಲುತ್ತಿದ್ದಾಳಂತೆ, ಇದು ಪದೇ ಪದೇ ಬೆಳೆಯುವ ಒಂದು ರೀತಿಯ ಮೆದುಳಿನ ಗೆಡ್ಡೆಯಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಲಿಫ್ಟ್‌ನೊಳಗೆ ಹೋದ ಬಾಲಕ ಮಾಡಿದ ಅವಾಂತರ ಒಂದಾ ಎರಡಾ...? ಶಾಕಿಂಗ್ ವಿಡಿಯೊ ಇಲ್ಲಿದೆ
ಮೆಡಿಕಲ್ ಬಿಲ್‌ಗಳು ರೂ. 2,36,75,060 ದಾಟಿದರೂ, ಡೆಂಗ್ ತನ್ನ ಮುದ್ದಿನ ಮಡದಿಯನ್ನು ಉಳಿಸಿಕೊಳ್ಳುವ ಭರವಸೆಯಲ್ಲಿ ಇದ್ದಾನೆ. ಅವನ ಆ ನಿಷ್ಕಲ್ಮಶ ಪ್ರೀತಿಯೇ ಆಕೆ ಚೇತರಿಸಿಕೊಳ್ಳಲು ಸಹಾಯ ಮಾಡಲು ಶುರುಮಾಡಿದೆಯಂತೆ.