Tommy Genesis: ಹಿಂದೂ ದೇವರ ವೇಷ ಧರಿಸಿ ಅಶ್ಲೀಲ ಫೋಟೋ ಹರಿಬಿಟ್ಟ ಗಾಯಕಿ; ಛೀ ಥೂ ಎಂದ ನೆಟ್ಟಿಗರು
ಭಾರತೀಯ ಮೂಲದ ರ‍್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಇದೀಗ ವಿವಾದಕ್ಕೀಡಾಗಿದೆ. ಅವರ ಮ್ಯೂಸಿಕ್ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ, ಅವರು ನೀಲಿ ಬಣ್ಣದ ದೇಹ, ಚಿನ್ನದ ಆಭರಣ ಮತ್ತು ಕೆಂಪು ಬಿಂದಿ ಧರಿಸಿ ಹಿಂದೂ ದೇವತೆಯಂತೆ ವೇಷ ಧರಿಸಿದ್ದಾರೆ.


ಒಟ್ಟಾವಾ: ಭಾರತೀಯ ಮೂಲದ ರ‍್ಯಾಪರ್ ಜೆನೆಸಿಸ್ ಯಾಸ್ಮಿನ್ (Tommy Genesis) ಮೋಹನರಾಜ್ ಇದೀಗ ವಿವಾದಕ್ಕೀಡಾಗಿದೆ. ಅವರ ಮ್ಯೂಸಿಕ್ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ, ಅವರು ನೀಲಿ ಬಣ್ಣದ ದೇಹ, ಚಿನ್ನದ ಆಭರಣ ಮತ್ತು ಕೆಂಪು ಬಿಂದಿ ಧರಿಸಿ ಹಿಂದೂ ದೇವತೆಯಂತೆ ವೇಷ ಧರಿಸಿದ್ದು, ಕ್ರಿಶ್ಚಿಯನ್ ಶಿಲುಬೆಯನ್ನು ಬಳಸಿದ್ದಾರೆ. ವೀಡಿಯೊದ ಒಂದು ಕ್ಷಣದಲ್ಲಿ ಅವಳು ಶಿಲುಬೆಯನ್ನು ನೆಕ್ಕಿ ಅದನ್ನು ತನ್ನ ಹಿಂಬದಿಯ ಬಳಿ ಹಿಡಿದುಕೊಂಡು ಪೋಸ್ ನೀಡುತ್ತಿರುವುದನ್ನು ತೋರಿಸಲಾಗಿದೆ. ಈ ದೃಶ್ಯಗಳು ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಜನರನ್ನು ಕೆರಳಿಸಿದೆ.
ಜನರು ಇದನ್ನು ದೇವದೂಷಣೆ ಎಂದು ಕರೆದಿದ್ದಾರೆ. ಜನರ ಗಮನ ಸೆಳೆಯಲು ಆಕೆ ದೇವರಿಗೆ ಅಗೌರವ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಟ್ರೂ ಬ್ಲೂ ಮ್ಯೂಸಿಕ್ ವೀಡಿಯೊದಲ್ಲಿನ ವಿವಾದಾತ್ಮಕ ದೃಶ್ಯಗಳಿಗಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ರ‍್ಯಾಪರ್ ಟಾಮಿ ಜೆನೆಸಿಸ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ, ಅವರು ಉದ್ದೇಶಪೂರ್ವಕವಾಗಿ ಧಾರ್ಮಿಕ ಸಮುದಾಯಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಕ್ಸ್‌ನಲ್ಲಿ ಆಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಿಂದೂಗಳ ಭಾವನೆಗೆ ದಕ್ಕೆಯುಂಟು ಮಾಡಲೆಂದು ಆಕೆ ಆ ರೀತಿಯ ಮೇಕ್‌ಅಪ್ ಹಾಕಿದ್ದಾಳೆ ಮತ್ತೊಬ್ಬರು ಕಮೆಂಟ್ ಮಾಡಿ ಅವಳ ಪೃಷ್ಠದಿಂದ ಶಿಲುಬೆ ಹೊರಬರುವುದನ್ನು ನೀವು ನೋಡಲಿಲ್ಲವೇ? ಅವಳು ಎಲ್ಲರ ಭಾವನೆಗಳನ್ನು ನೋಯಿಸುತ್ತಿದ್ದಾಳೆ, ಬಹುಶಃ ಉದ್ದೇಶಪೂರ್ವಕವಾಗಿ ವೈರಲ್ ಮಾಡಲು ಈ ರೀತಿ ಮಾಡಿದ್ದಾಳೆ ಎಂದು ಹಲವರು ಆರೋಪಿಸಿದ್ದಾರೆ. ಅವರ ಹೊಸ ಹಾಡು ಹಿಂದೂ ಮತ್ತು ಕ್ರಿಶ್ಚಿಯನ್ ನಂಬಿಕೆಗಳೆರಡನ್ನೂ ಬಹಿರಂಗವಾಗಿ ಅಪಹಾಸ್ಯ ಮಾಡುತ್ತದೆ. ಇದು ಸೃಜನಶೀಲತೆಯಲ್ಲ, ಇದು ಶುದ್ಧ ಅಗೌರವ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Just listened to Tommy Genesis whose real name is Genesis Yasmine Mohanraj. She is a Canadian artist with an Indian background from Kerala and Tamil side. Her new song openly mocks both Hindu and Christian faiths. This is not creativity this is pure disrespect. Surprised @YouTube… pic.twitter.com/2tMnfEQNfM
— Dhilan Gowda 🇮🇳 (@dhilangowda) June 22, 2025
ಈ ಸುದ್ದಿಯನ್ನೂ ಓದಿ: Kiccha Sudeep: ಮುಗಿಯದ ನಟ್ಟು-ಬೋಲ್ಟ್ ವಿವಾದ: ಕಿಚ್ಚನ ಹೇಳಿಕೆಗೆ ತಿರುಗೇಟು ಕೊಟ್ಟ ಡಿಕೆಶಿ
ಕೆನಡಾದ ಪೌರತ್ವವನ್ನು ಹೊಂದಿರುವ ಟಾಮಿ ಜೆನೆಸಿಸ್, ಈ ಟೀಕೆಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಟಾಮಿ ಜೆನೆಸಿಸ್ ಎಂದೂ ಕರೆಯಲ್ಪಡುವ ಜೆನೆಸಿಸ್ ಯಾಸ್ಮಿನ್ ಮೋಹನರಾಜ್, ಕೆನಡಾದ ವ್ಯಾಂಕೋವರ್‌ನಲ್ಲಿ ಜನಿಸಿದರು. ಇವರು ಭಾರತೀಯ ಮೂಲದವರಾಗಿದ್ದಾರೆ. ಅವರ ಸಂಗೀತವು ಹೆಚ್ಚಾಗಿ ಲಿಂಗ, ಗುರುತು ಮತ್ತು ಲೈಂಗಿಕತೆಗೆ ಸಂಬಂಧಿಸಿದ್ದಾಗಿರುತ್ತವೆ.