Health Tips: ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
ಲೈಂಗಿಕತೆಯು ಸಂತೋಷ ಅಥವಾ ಆನಂದಕ್ಕಾಗಿ ಮಾತ್ರ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅದನ್ನು ನಿಯಮಿತವಾಗಿ ಮಾಡುವುದರಿಂದ ಆರೋಗ್ಯಕ್ಕೆ(Health Tips) ಎಷ್ಟು ಪ್ರಯೋಜನಕಾರಿ ಎಂಬುದು ಹಲವರಿಗೆ ತಿಳಿದಿಲ್ಲ. ಇದು ನಿಮಗೆ ಉತ್ತಮ ನಿದ್ರೆ ನೀಡುವುದಲ್ಲದೆ, ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಇರುವ ಕ್ಯಾಲೊರಿಗಳನ್ನು ಸಹ ಕಡಿಮೆ ಮಾಡುತ್ತದೆ.


ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಲೈಂಗಿಕವಾಗಿ ಸಕ್ರಿಯವಾಗಿರುವುದೆಂದರೆ ಸುಲಭದ ಮಾತಲ್ಲ. ಒತ್ತಡ ಮತ್ತು ಕೆಲಸದಿಂದಾಗಿ ಕೆಲವರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ. ಇದು ಅವರ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ವಾರದಲ್ಲಿ ಒಮ್ಮೆಯಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಆರೋಗ್ಯಕ್ಕೆ(Health Tips) ಎಷ್ಟು ಪ್ರಯೋಜನವಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಹಾಗಾದ್ರೆ ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಹೃದಯಾಘಾತದ ಅಪಾಯ ಕಡಿಮೆ
ಇತ್ತೀಚಿನ ಅಧ್ಯಯನವೊಂದು ಹೇಳುವಂತೆ, ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವ ಪುರುಷರಿಗೆ ಹೋಲಿಸಿದರೆ, ವಾರಕ್ಕೆ ಎರಡು ಬಾರಿಗಿಂತ ಹೆಚ್ಚು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಪುರುಷರು ಹೃದಯಾಘಾತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಹೊಂದಿರುತ್ತಾರಂತೆ. ಯಾಕೆಂದರೆ ದೈನಂದಿನ ಲೈಂಗಿಕ ಕ್ರಿಯೆಯು ದೇಹದ ಅಪಧಮನಿಗಳಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಹೃದಯವನ್ನು ಆರೋಗ್ಯಕರವಾಗಿಸುತ್ತದೆ.
ನೋವಿನಿಂದ ಪರಿಹಾರ
ತಲೆನೋವಿನ ನೆಪ ಹೇಳಿ ಲೈಂಗಿಕತೆಯನ್ನು ತಪ್ಪಿಸುವುದು ನಿಮ್ಮ ಅಭ್ಯಾಸವಾಗಿದ್ದರೆ, ಹಾಗೆ ಮಾಡಬೇಡಿ. ಏಕೆಂದರೆ ನೀವು ಪರಾಕಾಷ್ಠೆಗೆ ಹತ್ತಿರವಾದಾಗ, ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಮಟ್ಟವು 5 ಪಟ್ಟು ಹೆಚ್ಚಾಗುತ್ತದೆ ಮತ್ತು ಈ ಸಮಯದಲ್ಲಿ ಎಂಡಾರ್ಫಿನ್ ಎಂಬ ಹಾರ್ಮೋನ್ ಬಿಡುಗಡೆಯು ಎಲ್ಲಾ ರೀತಿಯ ನೋವು ಮತ್ತು ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ನಿಯಮಿತ ಲೈಂಗಿಕತೆಯು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರತಿಕಾಯ ಇಮ್ಯುನೊಗ್ಲಾಬ್ಯುಲಿನ್ ಎ (IGA) ಅನ್ನು ಹೆಚ್ಚಿಸುತ್ತದೆ. ಇದು ಜ್ವರ ಮತ್ತು ಶೀತದಂತಹ ಸಣ್ಣ ಕಾಯಿಲೆಗಳ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಬಲಪಡಿಸುತ್ತದೆ.
ಒತ್ತಡವನ್ನು ಕಡಿಮೆ ಮಾಡುತ್ತದೆ
ಅಧ್ಯಯನದಲ್ಲಿ ತಿಳಿಸಿದ ಪ್ರಕಾರ, ಲೈಂಗಿಕತೆಯು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವುದಲ್ಲದೆ, ನಿಯಮಿತವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ
ನೀವು ಸಂಭೋಗ ಮಾಡಿದಾಗ, ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ನಿಮ್ಮ ದೇಹದ ಭಾಗಗಳು ಮತ್ತು ಜೀವಕೋಶಗಳಿಗೆ ತಾಜಾ ರಕ್ತವನ್ನು ಪೂರೈಸುತ್ತದೆ. ಹಾಗೂ ಇದುದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ.
ಚೆನ್ನಾಗಿ ನಿದ್ರೆ ಬರುತ್ತದೆ
ಲೈಂಗಿಕತೆಯ ನಂತರ ನಿಮಗೆ ತುಂಬಾ ಒಳ್ಳೆಯ ಮತ್ತು ನಿರಾಳವಾದ ನಿದ್ರೆ ಬರುತ್ತದೆ. ಒಳ್ಳೆಯ ನಿದ್ರೆ ನಿಮ್ಮನ್ನು ಯಾವಾಗಲೂ ಉತ್ಸಾಹದಿಂದ ಇರಿಸುತ್ತದೆ ಮತ್ತು ಆರೋಗ್ಯವಾಗಿರಿಸುತ್ತದೆ.
ಈ ಸುದ್ದಿಯನ್ನೂ ಓದಿ:Viral Video: ಮಗನ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಪೋಲ್ ಡಾನ್ಸರ್ಸ್ ಕರೆಸಿದ ಅಪ್ಪ-ಅಮ್ಮ! ವಿಡಿಯೊ ನೋಡಿ
ಫಿಟ್ನೆಸ್ ಕಾಪಾಡಿಕೊಳ್ಳುವುದು
ಕೆಲವರು ಫಿಟ್ನೆಸ್ಗಾಗಿ ಜಿಮ್ಗೆ ಹೋದರೆ ಇನ್ನು ಕೆಲವರು ಮನೆಯಲ್ಲಿ ಯಾವುದಾದರೂ ರೀತಿಯ ವ್ಯಾಯಾಮದಲ್ಲಿ ತೊಡಗಿರುತ್ತಾರೆ. ಆದರೆ ಫಿಟ್ನೆಸ್ ಕಾಪಾಡಿಕೊಳ್ಳಲು ಸೆಕ್ಸ್ ಉತ್ತಮ ಮಾರ್ಗವಾಗಿದೆ. ನಿಯಮಿತ ಸೆಕ್ಸ್ ನಿಮ್ಮ ದೇಹದ ಕೊಬ್ಬನ್ನು ಕರಗಿಸುತ್ತದೆ . ಹಾಗೂ ಇದು ದೇಹದ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ.