Thalapathy Vijay: ತಮಿಳು ಸ್ಟಾರ್ ನಟನಿಗೆ ಬರ್ತ್ ಡೇ ಸಂಭ್ರಮ; ದಳಪತಿ ವಿಜಯ್ ಕುರಿತು ನಿಮಗೆ ಗೊತ್ತಿರದ ಇಂಟ್ರಸ್ಟಿಂಗ್ ಸಂಗತಿಗಳು ಇಲ್ಲಿವೆ
ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಗೆ ಇಂದು (Thalapathy Vijay) ಹುಟ್ಟುಹಬ್ಬ.. ಸಿನಿಮಾ, ರಾಜಕೀಯ ಗಣ್ಯರು ಸೇರಿದಂತೆ ನಟನಿಗೆ ಶುಭಾಶಯ ಕೋರಿದ್ದಾರೆ. ಅಪ್ಪ ಚಂದ್ರಶೇಖರ್ ನಿರ್ದೇಶನದಲ್ಲಿ ಬಾಲನಟನಾಗಿ ಸಿನಿಮಾ ಶುರು ಮಾಡಿದ ವಿಜಯ್ ಇಂದು ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ.

Thalapathy Vijay


ಜೂನ್ 22, 1974ರಂದು ಚೆನ್ನೈನಲ್ಲಿ ನಿರ್ದೇಶಕ ಎಸ್.ಎ. ಚಂದ್ರಶೇಖರ್, ಗಾಯಕಿ ಶೋಭಾ ದಂಪತಿಗೆ ನಟ ವಿಜಯ್ ಜನಿಸಿದರು. ಅಪ್ಪ ಚಂದ್ರಶೇಖರ್ ನಿರ್ದೇಶನದ 'ನಳಾಯ ತೀರ್ಪು' ಚಿತ್ರದಿಂದ ಹೀರೋ ಆದ ವಿಜಯ್ 1998ರಲ್ಲಿ ಬಾಸಿಲ್ ನಿರ್ದೇಶನ, ಸಂಗಿಲಿ ಮುರುಗನ್ ನಿರ್ಮಾಣದ 'ಕಾದಲುಕ್ಕು ಮಾರಿಯಾದೈ' ಚಿತ್ರದಿಂದ ವಿಜಯ್ ಸ್ಟಾರ್ ಹೀರೋ ಆದ್ರು. ಆ ಬಳಿಕ ಇಂದಿಗೂ ಫೇಮಸ್ ನಟನಾಗಿ ಕಾಣಿಸಿಕೊಂಡಿದ್ದಾರೆ.

ದಳಪತಿ ವಿಜಯ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.1984ರಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಜಯ್ ಪೂವೇ ಉನಕ್ಕಾಗ,ಗಿಲ್ಲಿ, ತುಪ್ಪಾಕಿ ಹೀಗೆ ಹಲವು ಹಿಟ್ ಚಿತ್ರಗಳನ್ನುನೀಡಿದ್ದಾರೆ. ಸದ್ಯ ದಳಪತಿ ವಿಜಯ್ ಅವರು ‘ಜನ ನಾಯಗನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ಎಕ್ಸೈಟ್ ಆಗಿದ್ದಾರೆ.

ಸಿನಿಮಾದಲ್ಲಿ ಬೆಳೆಯುತ್ತಿರುವಾಗಲೇ ವಿಜಯ್ ಪ್ರೀತಿಸಿ ಮದುವೆ ಯಾಗಿದ್ದು ಪ್ರೇಯಸಿ ಸಂಗೀತಾಳನ್ನ ಆಗಸ್ಟ್ 25, 1999ರಂದು ಮದುವೆಯಾದರು. ಮದುವೆ ನಂತರ ಸಂಗೀತಾ ವಿಜಯ್ಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ ಸಂಜಯ್ ಎಂಬ ಮಗ ಹಾಗೂ ದಿವ್ಯ ಎನ್ನುವ ಮಗಳು ಇದ್ದಾರೆ.

ತಮಿಳು ಸಿನಿಮಾದ ಶ್ರೀಮಂತ ನಟ ವಿಜಯ್ ಆಗಿದ್ದಾರೆ. ಪ್ರತಿ ಸಿನಿಮಾಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುವ ದಳಪತಿ ವಿಜಯ್ ಅವರ ಆಸ್ತಿ 474 ಕೋಟಿ ರೂಪಾಯಿ ಅಷ್ಟಿದ್ದು ಲಕ್ಷುರಿ ಕಾರು, ಐಷಾರಾಮಿ ಮನೆ ಇದ್ದು ಹೆಚ್ಚು ಸಂಭಾವನೆ ಪಡೆಯುವ ನಟ ಕೂಡ ಆಗಿದ್ದಾರೆ.

ಸದ್ಯ ರಾಜಕೀಯಕ್ಕೆ ಪ್ರವೇಶಿಸಿರುವ ದಳಪತಿ ವಿಜಯ್ ‘ಜನ ನಾಯಗನ್’ ಹೆಸರಿನಲ್ಲಿ ಕೊನೆಯ ಸಿನಿಮಾ ಮಾಡುತ್ತಿದ್ದಾರೆ ಈ ಸಿನಿಮಾದ ಟೀಸರ್ ಇಂದು (ಜೂನ್ 22) ಬಿಡುಗಡೆ ಆಗಿದೆ. ವಿಜಯ್ ಮತ್ತೊಮ್ಮೆ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಈ ಚಿತ್ರವನ್ನು ಹೆಚ್. ವಿನೋದ್ ನಿರ್ದೇಶಿಸುತ್ತಿದ್ದಾರೆ. ವಿಜಯ್, ಪೂಜಾ ಹೆಗ್ಡೆ, ಬಾಬಿ ಡಿಯೋಲ್, ವರಲಕ್ಷ್ಮಿ ಶರತ್ ಕುಮಾರ್, ಬಾಬಾ ಭಾಸ್ಕರ್, ಗೌತಮ್ ಮೆನನ್, ನರೈನ್, ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ.