Viral Video: ಗುಡುಗು-ಮಿಂಚಿನ ಬಗ್ಗೆ ತಮಾಷೆ ಮಾಡಿದವನಿಗೆ ಕೊನೆಗೆ ಆಗಿದ್ದೇನು; ಶಾಕಿಂಗ್ ವಿಡಿಯೊ ನೋಡಿ
ಜೋರಾಗಿ ಮಳೆ ಬರುವ ಸಮಯದಲ್ಲಿ ಬೈಕಿನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ದೇವರನ್ನು ಕುರಿತು "ಭಗವಂತ... ನೀವು ಹುಡುಗಿಯರು ಮಾಡುವ ವಿಡಿಯೊಗಳಲ್ಲಿ ಮಾತ್ರ ಯಾಕೆ ಮಿಂಚನ್ನು ತೋರಿಸುತ್ತೀರಿ ಎಂದು ಕೇಳಿದ್ದಾನೆ. ಆತ ಕೇಳಿದ ಒಂದು ಕ್ಷಣದಲ್ಲೇ ಆಕಾಶದಲ್ಲಿ ಮಿಂಚು ಕಾಣಿಸಿಕೊಂಡು ಅವನ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ. ಇದರಿಂದ ಆತ ಶಾಕ್ ಆಗಿದ್ದಾನೆ. ಈ ತಮಾಷೆಯ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ವೈರಲ್ ವಿಡಿಯೊದಲ್ಲಿ, ಅಭಿಷೇಕ್ ಎಂಬ ವ್ಯಕ್ತಿ ಮಳೆ ಸುರಿಯುವ ಸಮಯದಲ್ಲಿ ಬೈಕಿನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವಾಗ ತಮಾಷೆಯಾಗಿ, " ದೇವರೇ, ನೀವು ಹುಡುಗಿಯರ ವಿಡಿಯೊಗಳಲ್ಲಿ ಮಾತ್ರ ಯಾಕೆ ಮಿಂಚನ್ನು ತೋರಿಸುತ್ತೀರಿ" ಎಂದು ಕೇಳಿದ್ದಾನೆ. ಅವನ ಮಾತಿಗೆ ದೇವರು ಪ್ರತಿಕ್ರಿಯಿಸಿದಂತೆ ಮರುಕ್ಷಣವೇ, ಆಕಾಶದಲ್ಲಿ ಮಿಂಚು ಕಾಣಿಸಿಕೊಂಡಿದೆಯಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು, “ದೇವರು ಮಾಡಿದ್ದು ಸರಿ, ಇನ್ನು ಮುಂದೆ ಹಾಗೇ ಹೇಳಬೇಡಿ” ಎಂದು ಹೇಳಿದ್ದಾರೆ. "ಆ ಸಮಯದಲ್ಲಿ ಗುಡುಗಿನ ದೇವರು ಅವನನ್ನು ಗಮನಿಸುತ್ತಿದ್ದಿರಬೇಕು" ಎಂದು ಮತ್ತೊಬ್ಬರು ಹೇಳಿದ್ದಾರೆ.ಕ್ಷಿಯೆಂಬಂತೆ ಆಕಾಶದಲ್ಲಿ ಮಿಂಚು ಮೂಡಿ ಅದು ಅವನ ಕ್ಯಾಮೆರಾದಲ್ಲಿ ಸೆರೆಯಾಗಿದೆಯಂತೆ. ಈ ಅನಿರೀಕ್ಷಿತ ಘಟನೆಯಿಂದ ಆತ ಕೂಡ ಶಾಕ್ ಆಗಿದ್ದಾನಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ವೈರಲ್ ವಿಡಿಯೊದಲ್ಲಿ, ಅಭಿಷೇಕ್ ಎಂಬ ವ್ಯಕ್ತಿ ಮಳೆ ಸುರಿಯುವ ಸಮಯದಲ್ಲಿ ಬೈಕಿನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವಾಗ ತಮಾಷೆಯಾಗಿ, " ದೇವರೇ, ನೀವು ಹುಡುಗಿಯರ ವಿಡಿಯೊಗಳಲ್ಲಿ ಮಾತ್ರ ಯಾಕೆ ಮಿಂಚನ್ನು ತೋರಿಸುತ್ತೀರಿ" ಎಂದು ಕೇಳಿದ್ದಾನೆ. ಅವನ ಮಾತಿಗೆ ದೇವರು ಪ್ರತಿಕ್ರಿಯಿಸಿದಂತೆ ಮರುಕ್ಷಣವೇ, ಆಕಾಶದಲ್ಲಿ ಮಿಂಚು ಕಾಣಿಸಿಕೊಂಡಿದೆಯಂತೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು, “ದೇವರು ಮಾಡಿದ್ದು ಸರಿ, ಇನ್ನು ಮುಂದೆ ಹಾಗೇ ಹೇಳಬೇಡಿ” ಎಂದು ಹೇಳಿದ್ದಾರೆ. "ಆ ಸಮಯದಲ್ಲಿ ಗುಡುಗಿನ ದೇವರು ಅವನನ್ನು ಗಮನಿಸುತ್ತಿದ್ದಿರಬೇಕು" ಎಂದು ಮತ್ತೊಬ್ಬರು ಹೇಳಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
"ದೇವರು ಇರುವುದು ನಿಜ ಎಂದು ಸಾಬೀತಾಗಿದೆ” ಎಂದು ಒಬ್ಬ ನೆಟ್ಟಿಗರು ತಮಾಷೆ ಮಾಡಿದ್ದಾರೆ. ಆದರೆ ಈ ವಿಡಿಯೊ ಸತ್ಯಾಸತ್ಯತೆಯ ಬಗ್ಗೆ ಕೆಲವರಿಗೆ ಅನುಮಾನಗಳಿವೆ. ಹಾಗಾಗಿ ಕೆಲವರು ಇದು ಎಡಿಟ್ ಮಾಡಿದ್ದಾಗಿರಬೇಕು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಮಳೆಗಾಲದ ವಿಡಿಯೊಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ.ಈ ಹಿಂದೆ ಮಹಿಳೆಯೊಬ್ಬಳು ಛತ್ರಿಯನ್ನು ಮಡಚಿಕೊಂಡು ಮಳೆಯಲ್ಲಿ ಒದ್ದೆಯಾಗುತ್ತಾ ನಡೆಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆಕೆಯ ಸುತ್ತಲಿರುವ ಎಲ್ಲರೂ ಛತ್ರಿಗಳನ್ನು ಬಿಡಿಸಿಕೊಂಡಿದ್ದರೂ , ಆಕೆ ಮಾತ್ರ ಮಳೆಯಲ್ಲಿ ಛತ್ರಿ ಇದ್ದರೂ ಅದನ್ನು ಬಿಡಿಸದೇ ನಡೆದಿದ್ದಳು. ಈ ವಿಡಿಯೊ 11 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿತ್ತು.
ಈ ಸುದ್ದಿಯನ್ನೂ ಓದಿ:Viral Video: ವರದಿ ಮಾಡಲು ಹೋದ ಪತ್ರಕರ್ತನ ಮೇಲೆ ಡೆಡ್ಲಿ ಅಟ್ಯಾಕ್; ಈ ಶಾಕಿಂಗ್ ವಿಡಿಯೊ ನೋಡಿ
ಮಳೆಗೆ ಸಂಬಂಧಿಸಿದಂತೆ, ಭಾರತ ಹವಾಮಾನ ಇಲಾಖೆ (ಐಎಂಡಿ) ಬುಧವಾರ (ಮೇ 28)ಮುಂಬೈಗೆ ‘ಯೆಲ್ಲೋ ಅಲರ್ಟ್’ ನೀಡಿದೆ. ಮುಂಬೈ ನಗರ ಮತ್ತು ಉಪನಗರಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು / ಮಿಂಚಿನ ನಂತರ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.