ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jailer 2: ಜೈಲರ್ 2ನಲ್ಲಿ ಸೂಪರ್‌ ಸ್ಟಾರ್‌ ತಲೈವಾಗೆ ಈ ಸ್ಟಾರ್‌ ನಟನೇ ವಿಲನ್‌!

ತೆಲುಗು ಸಿನಿಮಾ ಇಂಡಸ್ಟ್ರಿಯ ಐಕಾನಿಕ್ ಸ್ಟಾರ್ ನಾಗಾರ್ಜುನ ಅವರು ಇತ್ತೀಚೆಗೆ ಬೇರೆ ಸ್ಟಾರ್ ನಟ ನಟಿಯರ ಸಿನಿಮಾದಲ್ಲಿ ಅತಿಥಿ ಪಾತ್ರ ನಿಭಾಯಿಸುವ ಮೂಲಕ ಅತೀ ಹೆಚ್ಚು ಪ್ರೇಕ್ಷಕರ ಮನಗೆದ್ದಿದ್ದಾರೆ. ಹೆಚ್ಚಾಗಿ ಪಾಸಿಟಿವ್ ರೋಲ್ ಮಾಡುತ್ತಾ ಅಭಿ ಮಾನಿಗಳನ್ನು ರಂಜಿಸಿದ್ದ ನಟ ನಾಗಾರ್ಜುನ ಅವರು ಈ ಬಾರಿ ಜೈಲರ್ 2 ಸಿನಿಮಾದಲ್ಲಿ ನೆಗೆಟಿವ್ ಶೇಡ್ ನಲ್ಲಿ ಅಭಿನಯಿಸಲಿದ್ದು ಈ ಪಾತ್ರಕ್ಕೆ ಈಗಾಗಲೇ ಅವರು ಸಹಿ ಕೂಡ ಹಾಕಿದ್ದಾರೆ ಎನ್ನಲಾಗುತ್ತಿದೆ...

ಜೈಲರ್‌ 2ನಲ್ಲಿ ತೆಲುಗು ನಟ ನಾಗಾರ್ಜುನ್‌ ವಿಲನ್‌?

Profile Pushpa Kumari May 28, 2025 5:52 PM

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ನಟನೆಯ ಸಿನಿಮಾ ಎಂದರೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿರುತ್ತದೆ. ಜೈಲರ್ ಸಿನಿಮಾ 2023ರ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿತ್ತು. ಸಿಂಪಲ್ ಸ್ಟೋರಿ ಇದ್ದರೂ ಅತಿಥಿ ಪಾತ್ರಗಳನ್ನು ಖ್ಯಾತ ಕಲಾವಿದರಿಗೆ ನೀಡಿದ್ದ ಕಾರಣಕ್ಕೆ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿತು. ರಜನೀಕಾಂತ್ ಅವರಿಗೆ ಭಾರಿ ದೊಡ್ಡ ಯಶಸ್ಸನ್ನು ನೀಡಿದ್ದ ಇದೇ ಸಿನಿಮಾದ ಮುಂದುವರಿದ ಭಾಗ ಇದೀಗ ತೆರೆ ಮೇಲೆ ಬರಲು ರೆಡಿ ಆಗ್ತಿದೆ. ಜೈಲರ್ 2 ಸಿನಿಮಾದ ಬಗ್ಗೆ ಆಗಾಗ ಹೊಸ ಹೊಸ ವಿಚಾರಗಳು ಸುದ್ದಿಯಾಗುತ್ತಲೇ ಇದ್ದು ಜೈಲರ್ 2 ಸಿನಿಮಾದಲ್ಲಿ ನಟ ನಾಗಾರ್ಜುನ (Actor Nagarjuna) ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ತೆಲುಗು ಸಿನಿಮಾ ಇಂಡಸ್ಟ್ರಿಯ ಐಕಾನಿಕ್ ಸ್ಟಾರ್ ನಾಗಾರ್ಜುನ ಅವರು ಇತ್ತೀಚೆಗೆ ಬೇರೆ ಸ್ಟಾರ್ ನಟ ನಟಿಯರ ಸಿನಿಮಾ ದಲ್ಲಿ ಅತಿಥಿ ಪಾತ್ರ ನಿಭಾಯಿಸುವ ಮೂಲಕ ಅತೀ ಹೆಚ್ಚು ಪ್ರೇಕ್ಷಕರ ಮನಗೆದ್ದಿದ್ದಾರೆ. ಹೆಚ್ಚಾಗಿ ಪಾಸಿಟಿವ್ ರೋಲ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸಿದ್ದ ನಟ ನಾಗಾರ್ಜುನ ಅವರು ಈ ಬಾರಿ ಜೈಲರ್ 2 ಸಿನಿಮಾದಲ್ಲಿ ನೆಗೆಟಿವ್ ಶೇಡ್ ನಲ್ಲಿ ಅಭಿನಯಿಸಲಿದ್ದು ಈ ಪಾತ್ರಕ್ಕೆ ಈಗಾಗಲೇ ಅವರು ಸಹಿ ಕೂಡ ಹಾಕಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಚೆನ್ನೈ ಮತ್ತು ಕೇರಳದಲ್ಲಿ ಜೈಲರ್ 2 ಚಿತ್ರೀಕರಣ ಪೂರ್ಣಗೊಂಡಿವೆ. ನಟ ನಾಗಾರ್ಜುನ ಕೂಡ ಮಾಸ್ ಹೀರೊ ಗಳಲ್ಲಿ ಒಬ್ಬರಾಗಿದ್ದ ಕಾರಣ ಅವರು ಜೈಲರ್ 2 ಸಿನಿಮಾದಲ್ಲಿ ರಜನೀಕಾಂತ್ ವಿರುದ್ಧ ವಿಲನಿಶ್ ಲುಖ್ ನಲ್ಲಿ ಕಾಣಿಸಿಕೊಳ್ಳ ಲಿದ್ದಾರೆ. ಜೈಲರ್ ಫಸ್ಟ್ ಪಾರ್ಟ್ ನಲ್ಲಿ ಟಿ.ಕೆ. ವಿನಾಯಕನ್ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಬಾರಿ ಜೈಲರ್ 2 ನಲ್ಲಿ ನಾಗಾರ್ಜುನ ನಟಿಸುವುದರೊಂದಿಗೆ, ರಜನೀಕಾಂತ್ ವಿರುದ್ಧ ಟಫ್ ಫೈಟ್ ನೀಡಲಿದ್ದಾರೆ.

ಜೈಲರ್ 2 ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಅದ್ಭುತವಾಗಿ ಮೂಡಿ ಬಂದಿದೆ. ಜೈಲರ್ ನಲ್ಲಿ ನಟ ರಜನೀಕಾಂತ್ ಜೊತೆಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನರಸಿಂಹ ಪಾತ್ರದಲ್ಲಿ ಮಿಂಚಿದ್ದರು. ಜೈಲರ್ 2 ಸಿನಿ ಮಾದಲ್ಲಿ ಕೂಡ ಶಿವಣ್ಣ ನಟಿಸಲಿದ್ದು ಮೋಹನ್​ಲಾಲ್, ಜಾಕಿಶ್ರಾಫ್ ಮತ್ತು ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಸಹ  ಇರಲಿದ್ದಾರೆ. ಸನ್ ಪಿಕ್ಚರ್ಸ್​ ‘ಜೈಲರ್ 2 ನಿರ್ಮಾಣ ಮಾಡಲಿದ್ದು, ನೆಲ್ಸನ್ ನಿರ್ದೇಶನ ಮಾಡಲಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಮತ್ತಷ್ಟು ಸ್ಟಾರ್ ಸೆಲೆಬ್ರಿಟಿಗಳು ಒಂದೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನು ಓದಿ: Maadeva Movie: ನಟ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ ʼಮಾದೇವʼ ಚಿತ್ರ ಜೂನ್ 6ಕ್ಕೆ ರಿಲೀಸ್‌

ಸದ್ಯ ನಟ ರಜನೀಕಾಂತ್ ಅವರು ಕೂಲಿ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಕೂಲಿ ಸಿನಿಮಾದಲ್ಲಿ ಕೂಡ ದೊಡ್ಡ ತಾರಾಗಣವೇ ಇದೆ. ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಉಪೇಂದ್ರ, ತೆಲುಗು ನಟ ನಾಗಾರ್ಜುನ, ಬಾಲಿವುಡ್ ನಟ ಆಮಿರ್ ಖಾನ್ ಅವರು ನಟಿಸಿದ್ದಾರೆ. ಆಗಸ್ಟ್ 14ರಂದು ಈ ಸಿನಿಮಾ ತಮಿಳು, ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.ಈ ಸಿನಿಮಾ ರಿಲೀಸ್ ಗೂ ಮುನ್ನವೇ ಮುಂಬರುವ ಜೈಲರ್ 2 ಸಿನಿಮಾದಲ್ಲಿ ಕೂಡ ನಾಗಾರ್ಜುನ ಮತ್ತು ಸೂಪರ್ ಸ್ಟಾರ್ ರಜನೀ ಕಾಂತ್ ಮತ್ತೆ ಸ್ಕ್ರೀನ್ ಹಂಚಿಕೊಳ್ತಾರೆ ಅನ್ನೊ ಸುದ್ದಿ ಅಭಿಮಾನಿಗಳಿಗೆ ಸಂತಸ ತಂದಿದೆ. 2025ರ ಡಿಸೆಂಬರ್ ಒಳಗೆ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.