X&Y Movie: ʼರಾಮಾ ರಾಮಾ ರೇʼ ನಿರ್ದೇಶಕರ ಮತ್ತೊಂದು ವಿಭಿನ್ನ ಪ್ರಯತ್ನ ‘X&Y’; ಸತ್ಯಪ್ರಕಾಶ್ ಚಿತ್ರ ಶೀಘ್ರದಲ್ಲೇ ತೆರೆಗೆ
Kannada New Movie: ಡಿ. ಸತ್ಯಪ್ರಕಾಶ್ ನಿರ್ಮಿಸಿ, ನಿರ್ದೇಶಿಸುವುದರ ಜತೆಗೆ ಪ್ರಮುಖಪಾತ್ರದಲ್ಲೂ ನಟಿಸಿರುವ ಬಹು ನಿರೀಕ್ಷಿತ ʼX&Yʼ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಪೋಸ್ಟರ್ ಸೇರಿದಂತೆ ಕೆಲವು ಕಂಟೆಂಟ್‌ಗಳ ಮೂಲಕ ತೀವ್ರ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಸತ್ಯಪ್ರಕಾಶ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.


ಬೆಂಗಳೂರು: ʼರಾಮಾ ರಾಮಾ ರೇʼ ಖ್ಯಾತಿಯ ಡಿ. ಸತ್ಯಪ್ರಕಾಶ್ ನಿರ್ಮಿಸಿ, ನಿರ್ದೇಶಿಸುವುದರ ಜತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ ʼX&Yʼ ಚಿತ್ರವನ್ನು (X&Y Movie) ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ U/A ಪ್ರಮಾಣ ಪತ್ರವನ್ನು ನೀಡಿದೆ. ಜೂನ್ ತಿಂಗಳಲೇ ಚಿತ್ರವನ್ನು ತೆರೆಗೆ ತರುವ ಸಿದ್ದತೆಯನ್ನು ಸಿನಿಮಾತಂಡ ನಡೆಸಿದೆ. ಈಗಾಗಲೇ ಪೋಸ್ಟರ್ ಸೇರಿದಂತೆ ಕೆಲವು ಕಂಟೆಂಟ್‌ಗಳ ಮೂಲಕ ತೀವ್ರ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಸತ್ಯಪ್ರಕಾಶ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ʼX&Yʼ, ಡಿ. ಸತ್ಯಪ್ರಕಾಶ್ ನಿರ್ದೇಶನದ 4ನೇ ಚಿತ್ರ.
ಈ ಮೊದಲು ʼರಾಮಾ ರಾಮಾ ರೇʼ, ʼಒಂದಲ್ಲಾ ಎರಡಲ್ಲಾʼ ಮತ್ತು ʼಮ್ಯಾನ್ ಆಫ್ ದಿ ಮ್ಯಾಚ್ʼ ಚಿತ್ರಗಳನ್ನು ಡಿ. ಸತ್ಯಪ್ರಕಾಶ್ ನಿರ್ದೇಶಿಸಿದ್ದು, ಈ 3 ಸಿನಿಮಾಗಳು ಭಿನ್ನ ಕಥೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಸುದ್ದಿಯನ್ನೂ ಓದಿ | Summer Season End Sale: ಸೀಸನ್‌ಗೂ ಮುನ್ನವೇ ಆರಂಭವಾಯ್ತು ಸಮ್ಮರ್ ಎಂಡ್ ಸೇಲ್
ಲವಿತ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು, ಕೌಶಿಕ್ ಹರ್ಷ ಸಂಗೀತ ನಿರ್ದೇಶನ ಹಾಗೂ ವರದರಾಜ್ ಕಾಮತ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರವನ್ನು ಸತ್ಯ ಪಿಕ್ಚರ್ಸ್ ನಿರ್ಮಿಸಿದೆ. ಬೃಂದಾ ಆಚಾರ್ಯ, ಡಿ. ಸತ್ಯಪ್ರಕಾಶ್, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ, ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರ್, ತೇನಪ್ಪನ್ ಮುಂತಾದವರು ʼX&Yʼ ಚಿತ್ರದ ತಾರಾಬಳಗದಲ್ಲಿದ್ದಾರೆ.