ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Big Boss: ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಒಂದು ಶಾಪ ಆಯ್ತಾ? ಈ ವರೆಗೆ 6 ಮಂದಿಯ ಸಾವು!

ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೃದಯಾಘಾತ ಹೆಚ್ಚುತ್ತಿದೆ. ಬಿಗ್‌ಬಾಸ್ 13ನೇ ಸೀಸನ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ಶೆಫಾಲಿ ಜರಿವಾಲಾ (42) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಂತ ಲಗಾ' ಎಂಬ ಐಕಾನಿಕ್ ಸಂಗೀತ ವಿಡಿಯೋದ ಮೂಲಕ ಖ್ಯಾತಿ ಹೊಂದಿದ್ದ ಜರಿವಾಲಾ ಬಿಗ್‌ ಬಾಸ್‌ ಸೀಸನ್‌ 13 ರ ಮೂಲಕ ಮತ್ತೆ ಕಮ್‌ಬ್ಯಾಕ್‌ ಮಾಡಿ ಜನಪ್ರಿಯರಾಗಿದ್ದರು.

ಬಿಗ್‌ ಬಾಸ್‌ ಒಂದು ಶಾಪ ಆಯ್ತಾ? ಸೋಶಿಯಲ್‌ ಮೀಡಿಯಾ ಚರ್ಚೆ ಏನು?

Profile Vishakha Bhat Jun 28, 2025 1:57 PM

ಮುಂಬೈ: ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೃದಯಾಘಾತ ಹೆಚ್ಚುತ್ತಿದೆ. ಬಿಗ್‌ಬಾಸ್ 13ನೇ (Big Boss) ಸೀಸನ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ಶೆಫಾಲಿ ಜರಿವಾಲಾ (42) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಂತ ಲಗಾ' ಎಂಬ ಐಕಾನಿಕ್ ಸಂಗೀತ ವಿಡಿಯೋದ ಮೂಲಕ ಖ್ಯಾತಿ ಹೊಂದಿದ್ದ ಜರಿವಾಲಾ ಬಿಗ್‌ ಬಾಸ್‌ ಸೀಸನ್‌ 13 ರ ಮೂಲಕ ಮತ್ತೆ ಕಮ್‌ಬ್ಯಾಕ್‌ ಮಾಡಿ ಜನಪ್ರಿಯರಾಗಿದ್ದರು. ಅವರ ಹಠಾತ್ ನಿಧನವು ಮನರಂಜನಾ ಉದ್ಯಮ ಮತ್ತು ಅವರ ಅಭಿಮಾನಿಗಳನ್ನು ಆಘಾತಗೊಳಿಸಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಗ್‌ ಬಾಸ್‌ ಕುರಿತು ಚರ್ಚೆಯಾಗುತ್ತಲಿದೆ.

ಬಿಗ್​ಬಾಸ್​ ಶೋ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಇದೀಗ ಚರ್ಚೆ ನಡೆಸಲಾಗುತ್ತಿದೆ. ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಶಾಪವಾಗಿ ಪರಣಮಿಸುತ್ತಿದೆಯೇ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಕೆಲ ವರ್ಷಗಳಲ್ಲಿಯೇ ವಿವಿಧ ಭಾಷೆಗಳ ಬಿಗ್​ಬಾಸ್​ನ ಆರು ಮಾಜಿ ಸ್ಪರ್ಧಿಗಳು ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ರೀತಿಯಿಂದ ಸಾವನ್ನಪ್ಪಿರುವುದು. ಇದರಲ್ಲಿ ಹೃದಯಾಘಾತ ಒಂದೇ ಕಾರಣವಲ್ಲ, ಬೇರೆ ಬೇರೆ ಕಾರಣಗಳಿಂದಲೂ ಮೃತಪಟ್ಟಿದ್ದಾರೆ. ಬಿಗ್‌ ಬಾಸ್‌ನಲ್ಲಿ ಭಾಗವಹಿಸಿ ಮೃತಪಟ್ಟಿರುವ ಸೆಲೆಬ್ರಿಟಿಗಳ ಲಿಸ್ಟ್‌ ಇಲ್ಲಿದೆ.

ಸಿದ್ಧಾರ್ಥ್‌ ಶುಕ್ಲಾ:

ಹಿಂದಿ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದ ಸಿದ್ಧಾರ್ಥ್‌ ಶುಕ್ಲಾ ಬಿಗ್‌ ಬಾಸ್‌ 13 ನೇ ಸೀಸನ್‌ನ ವಿನ್ನರ್‌ ಆಗಿದ್ದರು. ಇವರು 2021 ರಲ್ಲಿ 40 ನೇ ವಯಸ್ಸಿನಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾದರು. ಫಿಟ್‌ ಆಂಡ್‌ ಎನರ್ಜಿಗೆ ಹೆಸರುವಾಸಿಯಾಗಿದ್ದ ಶುಕ್ಲಾ ಸಾವು ಇಡೀ ದೇಶಕ್ಕೆ ಆಘಾತ ಉಂಟು ಮಾಡಿತ್ತು.

ಪ್ರತ್ಯೂಷಾ ಬ್ಯಾನರ್ಜಿ:

ಬಿಗ್ ಬಾಸ್ 7 ರ ಜನಪ್ರಿಯ ಮುಖ, ಪ್ರತ್ಯೂಷಾ 2016 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಸಾಯುವಾಗ ಅವರಿಗೆ ಕೇವಲ 24 ವರ್ಷ. ಇವರ ಸಾವು ಇಂದಿಗೂ ನಿಗೂಢ

ಸ್ವಾಮಿ ಓಂ:

ಬಿಗ್ ಬಾಸ್ 10 ರ ವಿವಾದಾತ್ಮಕ ಸ್ಪರ್ಧಿ ಸ್ವಾಮಿ ಓಂ ಅವರು COVID-19 ರ ವಿರುದ್ಧ ಹೋರಾಡಿದ ನಂತರ 2021 ರಲ್ಲಿ ನಿಧನರಾದರು. ಇವರು ಕೋವಿಡ್‌ ಸಾಂಕ್ರಾಮಿಕದಿಂದ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ಸೋನಾಲಿ ಫೋಗಟ್

ರಾಜಕಾರಣಿ ಮತ್ತು ಬಿಗ್ ಬಾಸ್ 14 ಸ್ಪರ್ಧಿ ಸೋನಾಲಿ ಫೋಗಟ್ 2023 ರಲ್ಲಿ 42 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Shefali Jariwala: ʻತೊಂದ್ರೆ ಇಲ್ಲಾ ಪಂಕಜಾ...ʼ ಹಾಡಿನ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ

ಸೋಮದಾಸ್ ಚತ್ತನ್ನೂರ್

ಬಿಗ್ ಬಾಸ್ ಮಲಯಾಳಂನ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡ ಸೋಮದಾಸ್ 2021 ರಲ್ಲಿ ಕೋವಿಡ್‌ 19 ಸಮಸ್ಯೆಗಳಿಂದಾಗಿ ನಿಧನರಾದರು.

ಜಯಶ್ರೀ ರಾಮಯ್ಯ

ಬಿಗ್ ಬಾಸ್ ಕನ್ನಡ ಸೀಸನ್ 3 ರಿಂದ ಪರಿಚಿತರಾದ ಜಯಶ್ರೀ 2020 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.