ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ವೃದ್ಧ ದಂಪತಿಯ ಪ್ರೀತಿಗೆ ಮನಸೋತು ಮಂಗಳಸೂತ್ರ ಉಡುಗೊರೆ ನೀಡಿದ ಆಭರಣ ಅಂಗಡಿ ಮಾಲೀಕ; ಹೃದಯಸ್ಪರ್ಶಿ ವಿಡಿಯೊ ವೈರಲ್

93 ವರ್ಷದ ವೃದ್ಧರೊಬ್ಬರು ಮಡದಿಗೆ ಮಂಗಳಸೂತ್ರ ಖರೀದಿಸಲು ಆಭರಣ ಅಂಗಡಿಗೆ ಹೋಗಿ ಉಳಿತಾಯದ ಹಣವನ್ನು ನೀಡಿದ್ದಾರೆ. ಆದರೆ ಮಂಗಳಸೂತ್ರ ಖರೀದಿಸಲು ಆ ಹಣ ಸಾಕಾಗಲಿಲ್ಲ. ಆದರೂ ಅವರ ಪ್ರೀತಿಗೆ ಮನಸೋತ ಆಭರಣ ಅಂಗಡಿ ಮಾಲೀಕ ದಂಪತಿಗೆ ಉಡುಗೊರೆಯಾಗಿ ಮಂಗಳಸೂತ್ರ ನೀಡಿದ್ದಾನೆ. ಈ ವಿಡಿಯೊ ಎಲ್ಲರ ಮನ ಗೆದ್ದಿದೆ.

ಪತ್ನಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಪತಿಗೆ ಸಿಕ್ತು ಉಡುಗೊರೆ

Profile pavithra Jun 18, 2025 7:49 PM

ಮುಂಬೈ: ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದ ಘಟನೆಯೊಂದು ಜ್ವಲಂತ ಸಾಕ್ಷಿ. ಇಲ್ಲಿನ ಆಭರಣ ಅಂಗಡಿಯ ಮಾಲೀಕ ವೃದ್ಧ ದಂಪತಿಗೆ ಉಡುಗೊರೆಯಾಗಿ ಮಂಗಳಸೂತ್ರವನ್ನು ನೀಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ಎಲ್ಲರ ಮನಗೆದ್ದಿದೆ. 93 ವರ್ಷದ ವೃದ್ಧ ಶಿಂಧೆ ಮತ್ತು ಆತನ ಪತ್ನಿ ಶಾಂತಾಬಾಯಿ ಕಾಲ್ನಡಿಗೆಯಲ್ಲಿ ಪಂಢರಪುರಕ್ಕೆ ತೀರ್ಥಯಾತ್ರೆಗೆ ಬಂದಿದ್ದರು. ಆ ವೇಳೆ ದಂಪತಿ ಛತ್ರಪತಿ ಸಂಭಾಜಿನಗರದಲ್ಲಿರುವ ಆಭರಣದ ಅಂಗಡಿಗೆ ಭೇಟಿ ನೀಡಿತ್ತು. ಪತ್ನಿಗಾಗಿ ಮಂಗಳಸೂತ್ರ ಖರೀದಿಸುವುದಕ್ಕಾಗಿ ಶಿಂಧೆ ಉಳಿತಾಯದ ಹಣ ನೀಡಿದ್ದರು. ಆದರೆ ಆ ಹಣ ಸಾಕಾಗಲಿಲ್ಲ. ಆಗ ಅಂಗಡಿಯ ಮಾಲೀಕ ಮಂಗಳಸೂತ್ರ (Manglsutra)ವನ್ನು ಉಡುಗೊರೆಯಾಗಿ ನೀಡಿದ್ದಾನೆ.

ಸಾಂಪ್ರದಾಯಿಕ ಬಿಳಿ 'ಧೋತಿ-ಕುರ್ತಾ' ಮತ್ತು ಟೋಪಿ ಧರಿಸಿ ಆಭರಣ ಅಂಗಡಿಯೊಂದಕ್ಕೆ ಕಾಲಿಟ್ಟಾಗ ಸಿಬ್ಬಂದಿ ಅವರನ್ನು ಆರ್ಥಿಕ ಸಹಾಯ ಬೇಡುತ್ತಿರುವವರು ಎಂದು ತಪ್ಪಾಗಿ ಭಾವಿಸಿದ್ದರು. ಆದರೆ ಶಿಂಧೆ ಪತ್ನಿಗಾಗಿ 'ಮಂಗಳಸೂತ್ರ' ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಿದಾಗ ಎಲ್ಲರೂ ಭಾವುಕರಾಗಿದ್ದಾರೆ. ಶಿಂಧೆ ಪತ್ನಿಗಾಗಿ ಮಂಗಳಸೂತ್ರ ಖರೀದಿಸಲು ಉಳಿತಾಯದ ಹಣವನ್ನೆಲ್ಲಾ ನೀಡಿದ್ದಾರೆ. ಆದರೆ ಆ ಹಣ ಸಾಕಾಗಲಿಲ್ಲ. ಆಗ ಅಂಗಡಿಯ ಮಾಲೀಕ ಆತನ ಪ್ರೀತಿ ಕಂಡು ಮಂಗಳಸೂತ್ರವನ್ನು ಉಡುಗೊರೆಯಾಗಿ ನೀಡಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...

"ವೃದ್ಧ ಪತಿ ಅಂಗಡಿಯೊಳಗೆ ಬಂದು ನನಗೆ 1,120 ರೂ.ಗಳನ್ನು ನೀಡಿ, ಹೆಂಡತಿಗೆ ಮಂಗಳಸೂತ್ರ ಖರೀದಿಸಬೇಕೆಂದು ಹೇಳಿದ್ದಾರೆ. ಅವರ ಪ್ರೀತಿಯನ್ನು ಕಂಡು ನನಗೆ ತುಂಬಾ ಸಂತೋಷವಾಯಿತು. ಹಾಗಾಗಿ ನಿಮ್ಮ ಆಶೀರ್ವಾದ ಮಾತ್ರ ಸಾಕು ಎಂದು ಹೇಳಿ ಅವರ ಹಣವನ್ನು ಹಿಂತಿರುಗಿಸಿ ಮಂಗಳಸೂತ್ರವನ್ನು ದಂಪತಿಗೆ ಉಡುಗೊರೆಯಾಗಿ ನೀಡಿದ್ದೇನೆʼʼ ಎಂದು ಆಭರಣ ಅಂಗಡಿ ಮಾಲೀಕ ತಿಳಿಸಿದ್ದಾನೆ. ಅಂಗಡಿ ಮಾಲೀಕನ ಮಾನವೀಯತೆ ಕಂಡು ಆ ದಂಪತಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಮತ್ತು ಅಂಗಡಿಯ ಮಾಲೀಕನಿಗೆ ಮನಸಾರೆ ಹಾರೈಸಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಫುಡ್‌ ಡೆಲಿವರಿ ಮಾಡೋಕೆ ಬಂದಿದ್ದ ಡೆಲಿವರಿ ಬಾಯ್‌ಗೆ ಕಾದಿತ್ತು ಸರ್ಪ್ರೈಸ್‌; ಈ ವಿಡಿಯೊ ನೋಡಿ

ಈ ಹೃದಯಸ್ಪರ್ಶಿ ಕ್ಷಣದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಎರಡು ಕೋಟಿಗೂ ಹೆಚ್ಚು ವ್ಯೂವ್ಸ್ ಗಳಿಸಿದೆ. ವೃದ್ಧನಿಗೆ ಹೆಂಡತಿಯ ಮೇಲಿರುವ ಪ್ರೀತಿಯನ್ನು ಕಂಡು ನೆಟ್ಟಿಗರು ಕಣ್ಣಂಚ್ಚು ಒದ್ದೆಯಾಗಿದೆ. ಹಾಗೇ ಆಭರಣ ಅಂಗಡಿ ಮಾಲೀಕನ ಉದಾರತೆಯನ್ನು ಹೊಗಳಿದ್ದಾರೆ. ಒಬ್ಬರು “ ಇಂತವರಿಂದಲೇ ಮಾನವೀಯತೆ ಇನ್ನೂ ಜೀವಂತವಾಗಿದೆ” ಎಂದು ಹೇಳಿದರೆ, ಇನ್ನೊಬ್ಬರು, “ಈ ದೃಶ್ಯ ನೋಡಿ ಕಣ್ಣು ತುಂಬಿ ಬಂತು” ಎಂದು ಹೇಳಿದ್ದಾರೆ. ಮತ್ತೊಬ್ಬರು, “ಈ ಆಭರಣ ಅಂಗಡಿ ಮಾಲೀಕ ಹಣದಲ್ಲಿ ಮಾತ್ರವಲ್ಲ ಹೃದಯದಲ್ಲಿಯೂ ಬಹಳ ಶ್ರೀಮಂತ ವ್ಯಕ್ತಿ” ಎಂದು ಹೇಳಿದ್ದಾರೆ.