Hyderabad Couple Arrested: ಸುಲಭವಾಗಿ ಹಣ ಗಳಿಸಲು ತಮ್ಮದೇ ಲೈಂಗಿಕ ಕ್ರಿಯೆಯ ವಿಡಿಯೊ ಮಾರಾಟ ಮಾಡಿದ ದಂಪತಿ!
ಸುಲಭವಾಗಿ ಹಣ ಗಳಿಸಲು ದಂಪತಿ ಮುಖವನ್ನು ಮರೆ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದನ್ನು ಅಪ್ಲಿಕೇಶನ್ ಒಂದರಲ್ಲಿ ನೇರ ಪ್ರಸಾರ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿರುವ ಹೈದರಾಬಾದ್ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿದ್ದು, ಸಂಚಲನ ಸೃಷ್ಟಿಸಿದೆ.

ಸಾಂದರ್ಭಿಕ ಚಿತ್ರ.

ಹೈದರಾಬಾದ್: ಸುಲಭವಾಗಿ ಹಣ ಗಳಿಸಲು ದಂಪತಿ (Hyderabad Couple) ಮುಖವನ್ನು ಮರೆ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದನ್ನು ಅಪ್ಲಿಕೇಶನ್ ಒಂದರಲ್ಲಿ ನೇರ ಪ್ರಸಾರ (Live Stream) ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿರುವ ಹೈದರಾಬಾದ್ ಪೊಲೀಸರು (Hyderabad police) ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ಪ್ರತಿ ವಿಡಿಯೊಗೆ 2,000 ರೂ. ಹಣ ಪಡೆಯುವ ಸಲುವಾಗಿ ಹೈದರಾಬಾದ್ ದಂಪತಿ ಮುಖಕ್ಕೆ ಮಾಸ್ಕ್ ಧರಿಸಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ನೇರ ಪ್ರಸಾರ ಮಾಡಿದ್ದರಿಂದ ಇವರು ಬಂಧನಕ್ಕೆ ಒಳಗಾಗಿದ್ದಾರೆ.
ಸುಲಭವಾಗಿ ಹಣ ಗಳಿಸುವ ದುರಾಸೆಯಿಂದ ಮೊಬೈಲ್ ಅಪ್ಲಿಕೇಶನ್ವೊಂದರಲ್ಲಿ ಹೈದರಾಬಾದ್ ದಂಪತಿ ತಮ್ಮ ಲೈಂಗಿಕ ಕ್ರಿಯೆಗಳನ್ನು ನೇರ ಪ್ರಸಾರ ಮಾಡಿದ್ದಾರೆ. ಈ ಆರೋಪದ ಮೇರೆಗೆ 41 ವರ್ಷದ ಆಟೋ ಚಾಲಕ ವ್ಯಕ್ತಿ ಮತ್ತು 37 ವರ್ಷದ ಆತನ ಪತ್ನಿಯನ್ನು ಹೈದರಾಬಾದ್ನಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಂಬರ್ಪೇಟೆಯ ಮಲ್ಲಿಕಾರ್ಜುನ ನಗರದ ದಂಪತಿಯನ್ನು ಬಂಧಿಸಿರುವ ಪೊಲೀಸರು ಹೈ ಡೆಫಿನಿಷನ್ ಕ್ಯಾಮೆರಾ ಸೇರಿದಂತೆ ರೆಕಾರ್ಡಿಂಗ್ಗೆ ಸಂಬಂಧಿಸಿದ ಹಲವಾರು ಉಪಕರಣಗಳನ್ನು ಅವರ ಮನೆಯಿಂದ ವಶಕ್ಕೆ ಪಡೆದಿದ್ದಾರೆ.
ದಂಪತಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಂಪತಿ ತಮ್ಮ ಲೈಂಗಿಕ ಕ್ರಿಯೆಗಳ ನೇರ ಮತ್ತು ರೆಕಾರ್ಡ್ ಮಾಡಿದ ವಿಡಿಯೊಗಳನ್ನು ಅಪ್ಲಿಕೇಶನ್ ಒಂದರ ಬಳಕೆದಾರರೊಂದಿಗೆ ಅದರಲ್ಲೂ ಹೆಚ್ಚಾಗಿ ಯುವಕರೊಂದಿಗೆ ಹಂಚಿಕೊಳ್ಳುತ್ತಿದ್ದರು. ಲೈವ್ ವಿಡಿಯೊಗೆ 2,000 ರೂ. ಹಾಗೂ ರೆಕಾರ್ಡ್ ಮಾಡಿದ ಕ್ಲಿಪ್ಗಳನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದರು. ಈ ದಂಧೆಯ ಮೂಲಕ ದಂಪತಿ ಹೆಚ್ಚಿನ ಹಣವನ್ನು ಗಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bhavya Gowda: "ತುಳಿದ ಜಾಗದಲ್ಲಿ ಬೆಳೆದು ತೋರಿಸು": ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿದ ಭವ್ಯಾ ಗೌಡ ಇನ್ಸ್ಟಾ ಸ್ಟೋರಿ
ದಂಪತಿ ಎಚ್ಡಿ ಕೆಮ್ಯಾರಾ ಬಳಸಿಕೊಂಡು ತಮ್ಮ ಕೃತ್ಯಗಳನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದರು ಅಥವಾ ರೆಕಾರ್ಡ್ ಮಾಡುತ್ತಿದ್ದರು. ಕೃತ್ಯದ ಸಮಯದಲ್ಲಿ ಅವರು ತಮ್ಮ ಗುರುತುಗಳನ್ನು ಮರೆಮಾಡಲು ಮಾಸ್ಕ್ ಧರಿಸುತ್ತಿದ್ದರು ಎನ್ನಲಾಗಿದೆ. ಆರೋಪಿ ದಂಪತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.