ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kajol: ಆಲಿಯಾ ಭಟ್ ಇಂದಿನ ಪೀಳಿಗೆಯ ಭರವಸೆಯ ನಟಿ ಎಂದ ಬಾಲಿವುಡ್ ಸ್ಟಾರ್

90ರ ದಶಕದಲ್ಲಿ ಟಾಪ್ ಹೀರೋಯಿನ್ ಆಗಿದ್ದ ಬಾಲಿವುಡ್ ಸ್ಟಾರ್ ನಟಿ ಕಾಜೋಲ್ ಅತಿಥಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಇತ್ತೀಚಿನ ನಟಿಯರಲ್ಲಿ ಯಾರು ಉದಯೋನ್ಮುಖ ತಾರೆ ಎಂಬುದರ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಆಲಿಯಾ ಭಟ್ ಉದಯೋನ್ಮುಖ ನಟಿ ಎಂದ ಬಾಲಿವುಡ್ ಸ್ಟಾರ್

Kajol

Profile Pushpa Kumari Jun 27, 2025 5:31 PM

ನವದೆಹಲಿ: ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ (Kajol) ಸದಾ ಒಂದಲ್ಲ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿರುತ್ತಾರೆ. ʼಬಾಜಿಗರ್ʼ, ʼದಿಲ್ವಾಲೆ ದುಲ್ಹನಿಯೇ ಲೇ ಜಾಯೇಂಗೆʼ, ʼಕುಚ್ ಕುಚ್ ಹೋತಾ ಹೈʼ, ʼಕಭಿ ಖುಷಿ ಕಭಿ ಗಮ್ʼ, ʼಫನಾʼ ಮುಂತಾದ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಅವರು ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. 90ರ ದಶಕದಲ್ಲಿ ಟಾಪ್ ಹೀರೋಯಿನ್ ಆಗಿದ್ದ ಇವರು ಕೆಲವು ಸಮಯಗಳಿಂದ ಅತಿಥಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ಅವರು, ಪ್ರಸ್ತುತ ನಟಿಯರಲ್ಲಿ ಯಾರು ಉದಯೋನ್ಮುಖ ತಾರೆ ಎಂಬುದರ ಬಗ್ಗೆ ತಿಳಿಸಿದ್ದಾರೆ.

ಬಾಲಿವುಡ್‌ನಲ್ಲಿ ಹೊಸ ಪ್ರತಿಭೆಗಳಿಗೆ ನೀಡಲಾಗುವ ಅವಕಾಶಗಳ ಬಗ್ಗೆ ಕಾಜೋಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಜೋಲ್ ಅಭಿನಯದ ʼದುಲ್ಹನಿಯೇ ಲೇ ಜಾಯೇಂಗೆʼ ಸಿನಿಮಾ ಈಗ ರಿಮೇಕ್‌ ಆದರೆ ಯಾವ ನಟ-ನಟಿ ಸೂಕ್ತ ಎಂಬುದನ್ನು ಸಂದರ್ಶಕ ಪ್ರಶ್ನಿಸಿದ್ದಾರೆ. ಅಂತಹ ಯಾವ ನಟರು ಇಲ್ಲ...ನಾನು ದುರಂಹಕಾರದಿಂದ ಈ ಹೇಳಿಕೆ ನೀಡುತ್ತಿಲ್ಲ. ಬದಲಾಗಿ ಆ ಕಾಲದಿಂದ ಈ ಕಾಲದವರೆಗೂ ಪ್ರತಿಯೊಬ್ಬ ನಟ ನಟಿಯರು ತಮಗೆ ಸಿಕ್ಕಿದ್ದಂತಹ ಸಿನಿಮಾ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಚಲನಚಿತ್ರೋದ್ಯಮದ ಅಂದಿನ ಮತ್ತು ಇಂದಿನ ಅವಕಾಶದ ಬಗ್ಗೆಯೂ ಗಮಾತನಾಡಿದ್ದಾರೆ. ಅಂದಿನ ಕಾಲದಲ್ಲಿ ಸಿನಿಮಾ ಕಥೆ ಕೇಳಿದ ಬಳಿಕ ಆ ಸಿನಿಮಾದಲ್ಲಿ ಅಭಿನಯಿಸಲು ಸೂಕ್ತವೇ ಇಲ್ಲವೇ ಎಂಬ ನಿರ್ಧಾರ ಕೈಗೊಳ್ಳಲು ಸ್ನೇಹಿತರ ಜತೆ, ಕುಟುಂಬ, ಚಲನಚಿತ್ರೋದ್ಯಮದ ಗಣ್ಯರ ಸಲಹೆ ಕೇಳುತ್ತಿದ್ದುದಾಿಯೂ ತಿಳಿಸಿದ್ದಾರೆ. ಆದರೆ ಇಂದಿನ ನಟರು ಹೆಚ್ಚಾಗಿ ಸ್ವನಿರ್ಧಾರ ಕೈಗೊಳ್ಳುತ್ತಾರೆ. ತಮ್ಮದೇ ಆದ ನಿಲುವಿನ ಮೂಲಕವೇ ಸಿನಿಮಾ ಆಯ್ಕೆ ಮಾಡುತ್ತಿದ್ದು ಅವರಿಗೆ ಯಾವುದೇ ಮಾರ್ಗ ದರ್ಶನದ ಅಗತ್ಯವಿಲ್ಲ ಎಂದಿದ್ದಾರೆ.

ಬಳಿಕ ಸಂದರ್ಶಕರು ಕಾಜೋಲ್ ಅವರ ಬಳಿ, ಹೊಸ ಪೀಳಿಗೆಯ ಅತ್ಯುತ್ತಮ ನಟಿ ಯಾರೆಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಾಜೋಲ್ ಹಲವಾರು ನಟಿಯರಿಎ ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲೂ ಆಲಿಯಾ ಭಟ್ ಅವರನ್ನು ವಿಶೇಷ ರೀತಿಯಲ್ಲಿಯೇ ಉದಯೋನ್ಮುಖ ತಾರೆ ಎಂದು ಹೊಗಳಿದ್ದಾರೆ. ಆಲಿಯಾ ಭಟ್‌ ತಮ್ಮ ಪ್ರತಿಭೆಯನ್ನು ಈಗಾಗಲೇ ಅನೇಕ ಸಿನಿಮಾದಲ್ಲಿ ತೋರ್ಪಡಿಸಿದ್ದು ಹೊಸ ಪೀಳಿಗೆಯ ಭರವಸೆ ನಟಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆಲಿಯಾ ಭಟ್ ಜತೆಗೆ ಅನನ್ಯಾ ಪಾಂಡೆ, ಜಾಹ್ನವಿ ಕಪೂರ್‌, ಸಾರಾ ಆಲಿ ಖಾನ್‌ ಕೂಡ ಅತ್ಯುತ್ತಮ ನಟಿಯರು ಎಂದು ಕಾಜೋಲ್ ಹೇಳಿದ್ದಾರೆ.

ಇದನ್ನು ಓದಿ:Phoenix Movie: ಓಂ ಪ್ರಕಾಶ್ ರಾವ್ ನಿರ್ದೇಶನದ ‘ಫೀನಿಕ್ಸ್’ ಸಿನಿಮಾ ಚಿತ್ರೀಕರಣ ಪೂರ್ಣ

ಕಾಜೋಲ್ ಅಭಿನಯದ 'ಮಾ' ಸಿನಿಮಾ ಇಂದು (ಜೂ. 27ಕ್ಕೆ) ಬಿಡುಗಡೆಯಾಗಿದೆ. ಇದು ಹಾರರ್ ಸಿನಿಮಾವಾಗಿದ್ದು ವಿಶಾಲ್ ಫ್ಯೂರಿಯಾ ನಿರ್ದೇಶಿಸಿದ್ದಾರೆ. 'ಮಾ' ಸಿನಿಮಾಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ದೊವ್ರೆಯಕ್ಯುತವಾಗುತ್ತಿದೆ. ಈ ಸಿನಿಮಾದ ನಂತರ ಅವರು ಚರಣ್ ತೇಜ್ ಉಪ್ಪಲಪತಿ ನಿರ್ದೇಶನದ ಆ್ಯಕ್ಷನ್-ಥ್ರಿಲ್ಲರ್ ʼಮಹಾರಾಗ್ನಿ ಕ್ವೀನ್ಸ್ ಆಫ್ ಕ್ವೀನ್ಸ್ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಾಸಿರುದ್ದೀನ್ ಶಾ, ಪ್ರಭು ದೇವ, ಜಿಶು ಸೇನ್‌ಗುಪ್ತಾ, ಆದಿತ್ಯ ಸೀಲ್ ಮತ್ತು ಪ್ರಮೋದ್ ಪಾಠಕ್ ಅಭಿನಯಿಸುತ್ತಿದ್ದಾರೆ. ಇದಾದ ಬಳಿಕ ಕರಣ್ ಜೋಹರ್ ನಿರ್ಮಾಣ ಸಂಸ್ಥೆಯ ʼಸರ್ಜಮೀನ್ʼನಲ್ಲಿಯೂ ಕಾಜೋಲ್ ನಟಿಸಲಿದ್ದಾರೆ. ಇದರಲ್ಲಿ ಅವರು ಇಬ್ರಾಹಿಂ ಅಲಿ ಖಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೂ ತೆರೆ ಹಂಚಿಕೊಳ್ಳಲಿದ್ದಾರೆ.