ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆ ಮೇಲೆ ಕಾಲಿಟ್ಟು ಪತಿಯನ್ನೇ ಕೊಂದ ಪತ್ನಿ; ವಿಚಾರಣೆ ವೇಳೆ ಹೊರಬಿತ್ತು ಸತ್ಯ

ದೇಶದಲ್ಲಿ ಪತ್ನಿಯರೇ ತಮ್ಮ ಪತಿಯನ್ನು ಕೊಲೆ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದೀಗ ರಾಜ್ಯದಲ್ಲಿಯೂ ಅಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆ ಮೇಲೆ ಕಾಲಿಟ್ಟು ಪತಿಯನ್ನೇ ಕೊಂದ ಪತ್ನಿ

Profile Vishakha Bhat Jun 29, 2025 8:35 AM

ತುಮಕೂರು: ದೇಶದಲ್ಲಿ ಪತ್ನಿಯರೇ ತಮ್ಮ ಪತಿಯನ್ನು ಕೊಲೆ ಮಾಡುವ (Murder Case) ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದೀಗ ರಾಜ್ಯದಲ್ಲಿಯೂ ಅಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ತುಮಕೂರಿನ ತಿಪಟೂರಿನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ಕೊಲೆ ಮಾಡಿದ್ದಾಳೆ. ತಿಪಟೂರು ತಾಲೂಕಿನ ಕಾಡುಶೆಟ್ಟಿ ಹಳ್ಳಿಯ 50 ವರ್ಷದ ಶಂಕರಮೂರ್ತಿ ಎಂಬುವವರನ್ನು ಅವರ ಪತ್ನಿ ಸುಮಂಗಳಾ ಮತ್ತು ಆಕೆಯ ಪ್ರಿಯಕರ ನಾಗರಾಜು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಕಾಡುಶೆಟ್ಟಿಹಳ್ಳಿಯಲ್ಲಿ ಜೂನ್ 24 ರಂದು ಈ ಕೊಲೆ ನಡೆದಿದೆ. ಕೊಲೆಯ ನಂತರ ಶವವನ್ನು ಗೋಣಿಚೀಲದಲ್ಲಿ ತುಂಬಿ ಸುಮಾರು 30 ಕಿಮೀ ಸಾಗಿಸಿ, ತುರುವೇಕೆರೆ ತಾಲೂಕಿನ ದಂಡನಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಬಾವಿಯೊಂದಕ್ಕೆ ಎಸೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಾದ ಸುಮಂಗಳಾ ಮತ್ತು ನಾಗರಾಜು ಪೊಲೀಸ್ ವಶದಲ್ಲಿದ್ದಾರೆ.

ಸುಮಂಗಳಾ ತಿಪಟೂರು ನಗರದ ಕಲ್ಪತರು ಕಾಲೇಜಿನ ಗರ್ಲ್ಸ್ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು. ಕರಡಾಳು ಸಂತೆ ಗ್ರಾಮದ ನಾಗರಾಜು ಜೊತೆ ಆಕೆ ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಈ ಸಂಬಂಧಕ್ಕೆ ಶಂಕರಮೂರ್ತಿ ಅಡ್ಡಿಯಾಗಿದ್ದರು. ಈ ಕಾರಣಕ್ಕಾಗಿ, ಸುಮಂಗಳಾ ಮತ್ತು ನಾಗರಾಜು ಶಂಕರಮೂರ್ತಿಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದರು. ಜೂನ್ 24 ರಂದು, ಸುಮಂಗಳಾ ಮತ್ತು ನಾಗರಾಜು ಒಟ್ಟಾಗಿ ಶಂಕರಮೂರ್ತಿಯ ಕಣ್ಣಿಗೆ ಖಾರದ ಪುಡಿ ಎರಚಿ, ದೊಣ್ಣೆಯಿಂದ ಹೊಡೆದು, ಕೊನೆಗೆ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆ ಮಾಡಿದ್ದಾಳೆ.

ಈ ಸುದ್ದಿಯನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ

ಕೊಲೆ ಬಳಿಕ ಶವವನ್ನು ಗೋಣಿಚೀಲದಲ್ಲಿ ತುಂಬಿ, ಸುಮಾರು 30 ಕಿಮೀ ದೂರದ ತುರುವೇಕೆರೆ ತಾಲೂಕಿನ ತೋಟದ ಬಾವಿಗೆ ಸಾಗಿಸಿ ಎಸೆದಿದ್ದಾರೆ. ಕೊಲೆಯಾದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಂಕರಮೂರ್ತಿಯ ಕೊಲೆಗೆ ಸಂಬಂಧಿಸಿದಂತೆ ಸುಮಂಗಳಾ ಮತ್ತು ನಾಗರಾಜುನನ್ನು ಪೊಲೀಸರು ಬಂಧಿಸಿದ್ದಾರೆ. ಶವವನ್ನು ತೋಟದ ಬಾವಿಯಿಂದ ಮೇಲಕ್ಕೆ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ವಿಚಾರಣೆ ವೇಳೆ ಸಿಕ್ಕಿಬಿದ್ಲು

ಶಂಕರಮೂರ್ತಿ ಮಲಗಿದ್ದ‌ ಹಾಸಿಗೆ‌ ಮೇಲೆ ಖಾರದ ಪುಡಿ ಹಾಗೂ ವ್ಯಕ್ತಿಯೊಬ್ಬರನ್ನ‌ು ಎಳೆದಾಡಿದ್ದ ಗುರುತು ಪತ್ತೆಯಾಗಿತ್ತು. ಪೊಲೀಸರಿಗೆ ಅನುಮಾನ ಬಂದು ತನಿಖೆಯನ್ನು ಚುರುಕು ಮಾಡಿದ್ದರು. ಆತನ ಪತ್ನಿ ಸುಮಂಗಲಾಳನ್ನ ವಿಚಾರಣೆ ನಡೆಸಿ,‌ ಸಿಡಿಆರ್ ಪರಿಶೀಲಿಸಿದ್ದರು. ನಂತರ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.