Wedding of the century: ಇದು ಈ ಶತಮಾನದ ಅದ್ದೂರಿ ಮದ್ವೆಯಂತೆ; ಏನಿದದರ ವಿಶೇಷತೆ?
ಶ್ರೀಮಂತರು ಅದ್ದೂರಿ ವಿವಾಹವಾಗುವುದು ಹೊಸದೇನಲ್ಲ. ಆದರೆ ಈ ಅದ್ದೂರಿ ಮದುವೆ ಕಾರ್ಯಕ್ರಮಗಳು ಕೆಲವೊಮ್ಮೆ ಇತಿಹಾಸವನ್ನೇ ಸೃಷ್ಟಿಸಿಬಿಡುತ್ತದೆ. ಅಂತಹ ಒಂದು ಮದುವೆ ಈಗ ಇಟಲಿಯ ವೆನಿಸ್ ನಲ್ಲಿ ನಡೆದಿದೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಟಿವಿ ಮಾಜಿ ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಶುಕ್ರವಾರ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರ ವಿವಾಹ ಕಾರ್ಯಕ್ರಮಗಳು ವೆನಿಸ್ನಲ್ಲಿ ಅದ್ದೂರಿಯಾಗಿ ನಡೆದಿದೆ. ಇದನ್ನು 'ಶತಮಾನದ ವಿವಾಹ' ಎಂದು ಕರೆಯಲಾಗಿದೆ.



ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಟಿವಿ ಮಾಜಿ ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಶುಕ್ರವಾರ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರ ವಿವಾಹ ಕಾರ್ಯಕ್ರಮಗಳು ಇಟಲಿಯ ವೆನಿಸ್ನಲ್ಲಿ ಅದ್ದೂರಿಯಾಗಿ ನಡೆದಿದೆ. ಇದನ್ನು 'ಶತಮಾನದ ವಿವಾಹ' ಎಂದು ಕರೆಯಲಾಗಿದೆ.

ಜೆಫ್ ಬೆಜೋಸ್ ಮತ್ತು ಲಾರೆನ್ ಸ್ಯಾಂಚೆಜ್ ವಿವಾಹವನ್ನು ಅನೇಕರು "ಶತಮಾನದ ವಿವಾಹ" ಎಂದು ಕರೆದಿದ್ದಾರೆ. ಅದ್ದೂರಿಯಾಗಿ ಮೂರು ದಿನಗಳ ಕಾಲ ನಡೆದ ಇವರ ವಿವಾಹದ ವೈಶಿಷ್ಟ್ಯತೆ ಏನು ಗೊತ್ತೇ, ಈ ವಿವಾಹವನ್ನು 'ಶತಮಾನದ ವಿವಾಹ' ಎಂದು ಕರೆಯಲು ಕಾರಣ ಏನು ಗೊತ್ತೇ? ಇಲ್ಲಿದೆ ಅದರ ಸಂಪೂರ್ಣ ಚಿತ್ರಣ.

ಜೆಫ್ ಬೆಜೋಸ್ ಮತ್ತು ಲಾರೆನ್ ಸ್ಯಾಂಚೆಜ್ ವಿವಾಹ ಸಮಾರಂಭಕ್ಕೆ ಸುಮಾರು 46.5 ರಿಂದ 55.6 ಮಿಲಿಯನ್ ಡಾಲರ್ ವೆಚ್ಚಮಾಡಲಾಗಿದೆ. ಇದು ವೆನಿಸ್ನ ಲಗೂನ್ ಪರಿಸರ ಸಂರಕ್ಷಣೆಗೆ ಮೀಸಲಾಗಿರುವ ಶೈಕ್ಷಣಿಕ ಸಂಸ್ಥೆಯಾದ ಕೊರಿಲಾಗೆ ಗಣನೀಯ ಪ್ರಮಾಣದ ದತ್ತಿ ದೇಣಿಗೆಗಳನ್ನು ಒಳಗೊಂಡಿದೆ.

ವೆನಿಸ್ ನಲ್ಲಿರುವ 15 ನೇ ಶತಮಾನದ ಕೋಟೆಯ ನೌಕಾ ಡಾಕ್ಯಾರ್ಡ್ನ ಐತಿಹಾಸಿಕ ಆರ್ಸೆನೆಲ್ನಲ್ಲಿ ಮದುವೆಯ ಮುಖ್ಯ ಪಾರ್ಟಿ ನಡೆಯಿತು. ವಿವಾಹ ವಿಧಿವಿಧಾನಗಳು ಸ್ಯಾನ್ ಜಾರ್ಜಿಯೊ ಮ್ಯಾಗಿಯೋರ್ನ ಬೆಸಿಲಿಕಾ ಅಥವಾ ಸ್ಕೂಲಾ ಗ್ರಾಂಡೆ ಡೆಲ್ಲಾ ಮಿಸೆರಿಕಾರ್ಡಿಯಾದಲ್ಲಿ ನಡೆಸಲಾಗಿದೆ.

ಇವರ ವಿವಾಹ ಸಮಾರಂಭಕ್ಕೆ ವೆನಿಸ್, ಟ್ರೆವಿಸೊ ಮತ್ತು ವೆರೋನಾ ವಿಮಾನ ನಿಲ್ದಾಣಗಳಿಗೆ ಸುಮಾರು 90 ಖಾಸಗಿ ಜೆಟ್ಗಳು ಬಂದಿಳಿದವು. 30 ವಾಟರ್ ಟ್ಯಾಕ್ಸಿಗಳು ಅತಿಥಿಗಳನ್ನು ವಿವಾಹ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳಕ್ಕೆ ಕರೆದುಕೊಂಡು ಬಂದವು. ಬೆಜೋಸ್ ಅಮನ್ ವೆನಿಸ್, ಗ್ರಿಟ್ಟಿ ಪ್ಯಾಲೇಸ್, ಬೆಲ್ಮಂಡ್ ಸಿಪ್ರಿಯಾನಿ, ಸೇಂಟ್ ರೆಗಿಸ್ ಮತ್ತು ಹೋಟೆಲ್ ಡೇನಿಯಲಿ ಸೇರಿದಂತೆ ವೆನಿಸ್ನ ಅತ್ಯಂತ ಶ್ರೀಮಂತ ಹೊಟೇಲ್ ಗಳಲ್ಲಿ ಅತಿಥಿಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು.

ಜೆಫ್ ಬೆಜೋಸ್ ಮತ್ತು ಲಾರೆನ್ ಸ್ಯಾಂಚೆಜ್ ವಿವಾಹ ಸಮಾರಂಭಕ್ಕೆ ಓಪ್ರಾ ವಿನ್ಫ್ರೇ, ಲಿಯೊನಾರ್ಡೊ ಡಿಕಾಪ್ರಿಯೊ, ಕಿಮ್ ಕಾರ್ಡಶಿಯಾನ್, ಕೇಟಿ ಪೆರ್ರಿ, ಇವಾಂಕಾ ಟ್ರಂಪ್ ಹಾಗೂ ಇನ್ನು ಹಲವಾರು ಗಣ್ಯರು ಸಾಕ್ಷಿಯಾದರು. ವಿವಾಹ ಕಾರ್ಯಕ್ರಮವು ಸ್ಕೂಲಾ ಗ್ರಾಂಡೆಯಲ್ಲಿ ವೆನೆಷಿಯನ್ ಶೈಲಿಯ ಸ್ವಾಗತ ಭೋಜನದೊಂದಿಗೆ ಪ್ರಾರಂಭವಾಯಿತು.