Aamir Khan: ಅಲ್ಲು ಜೊತೆ ಆಮೀರ್ ನಟಿಸೋದು ಪಕ್ಕಾನಾ? ವೈರಲ್ ಫೋಟೋ ಬಗ್ಗೆ ಮಿಸ್ಟರ್ ಪರ್ಫೆಕ್ಟ್ ಹೇಳಿದ್ದೇನು?
ತೆಲುಗಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Telugu superstar Allu Arjun) ಜೊತೆಗಿನ ತಮ್ಮ ವೈರಲ್ ಫೋಟೋ ಬಗ್ಗೆ ಆಮೀರ್ ಖಾನ್ (Aamir Khan) ಕೊನೆಗೂ ಮೌನ ಮುರಿದಿದ್ದಾರೆ. ಕಳೆದ ತಿಂಗಳು ಬಾಲಿವುಡ್ ಸೂಪರ್ ಸ್ಟಾರ್ (Bollywood superstar) ಆಮೀರ್ ಖಾನ್ ಜೊತೆ ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಕುರಿತು ಹಲವಾರು ಊಹಾಪೋಹಗಳು ಕೂಡ ಹುಟ್ಟಿಕೊಂಡಿತ್ತು. ಇದೀಗ ಈ ಕುರಿತು ಅಮೀರ್ ಖಾನ್ ಪ್ರತಿಕ್ರಿಯಿಸಿದ್ದಾರೆ.


ಮುಂಬೈ: ತೆಲುಗಿನ ಸೂಪರ್ ಸ್ಟಾರ್ (Telugu superstar) ಅಲ್ಲು ಅರ್ಜುನ್ (Allu Arjun) ಜೊತೆಗಿನ ತಮ್ಮ ವೈರಲ್ ಫೋಟೋ (Viral Photo) ಬಗ್ಗೆ ಆಮೀರ್ ಖಾನ್ (Aamir Khan) ಕೊನೆಗೂ ಮೌನ ಮುರಿದಿದ್ದಾರೆ. ಕಳೆದ ತಿಂಗಳು ಬಾಲಿವುಡ್ ಸೂಪರ್ ಸ್ಟಾರ್ (Bollywood superstar) ಆಮೀರ್ ಖಾನ್ ಜೊತೆ ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಕುರಿತು ಹಲವಾರು ಊಹಾಪೋಹಗಳು ಕೂಡ ಹುಟ್ಟಿಕೊಂಡಿತ್ತು. ಇದೀಗ ಈ ಕುರಿತು ಆಮೀರ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಅರ್ಜುನ್ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಜೊತೆ ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದ ಚಿತ್ರಗಳು ಕಳೆದ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಅಲ್ಲು ಅರ್ಜುನ್ ಮುಂಬೈನಲ್ಲಿರುವ ಆಮೀರ್ ಖಾನ್ ಅವರ ನಿವಾಸದಲ್ಲಿ ಕಾಣಿಸಿಕೊಂಡಿದ್ದು, ಇಬ್ಬರೂ ನಗುತ್ತಿರುವ ಮತ್ತು ಒಟ್ಟಿಗೆ ಪೋಸ್ ನೀಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಇದು ಭಾರಿ ಊಹಾಪೋಹಗಳನ್ನು ಹುಟ್ಟುಹಾಕಿತು.
ಅವರ ಕೆಲವು ಅಭಿಮಾನಿಗಳು ಇಬ್ಬರು ನಟರು ಶೀಘ್ರದಲ್ಲೇ ಹೊಸ ಸಿನಿಮಾ ಮೂಲಕ ಒಂದಾಗಲಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅಮೀರ್ ಅದಕ್ಕೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಚಿತ್ರಗಳು ಬಿಡುಗಡೆಯಾಗಿ ಒಂದು ತಿಂಗಳ ಬಳಿಕ ಈ ಕುರಿತು ಮಾತನಾಡಿದ ಅಮೀರ್ ಖಾನ್, ನಾವು ಒಂದೇ ನಗರದಲ್ಲಿದ್ದಾಗಲೆಲ್ಲ ಭೇಟಿಯಾಗುವುದಾಗಿ ಹೇಳಿದ್ದಾರೆ.
ಪಿಂಕ್ವಿಲ್ಲಾ ಜೊತೆಗಿನ ಚಾಟ್ ನಲ್ಲಿ ಆಮಿರ್ ಖಾನ್ ಅವರಿಗೆ ಈ ಹಳೆಯ ಫೋಟೋಗಳನ್ನು ತೋರಿಸಲಾಯಿತು. ಇದು ಅವರಿಗೆ ಅಲ್ಲು ಅರ್ಜುನ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು. ಇತ್ತೀಚಿನ ಫೋಟೋ ಬಗ್ಗೆ ಮಾತನಾಡಿದ ಅವರು, ಇದನ್ನು ಕಳೆದ ತಿಂಗಳು ತೆಗೆಸಿಕೊಳ್ಳಲಾಗಿದೆ ಎಂದರು.
ಈ ಫೋಟೋ ವದಂತಿಗಳಿಗೆ ಕಾರಣವಾಗಿದೆ ಎಂದು ತಿಳಿದ ಅಮೀರ್, ತಾವು ಒಂದೇ ನಗರದಲ್ಲಿದ್ದಾಗಲೆಲ್ಲ ಭೇಟಿಯಾಗುತ್ತೇವೆ ಎಂದು ತಿಳಿಸಿದರು. ಅಲ್ಲು ಅರ್ಜುನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಾಧ್ಯವಾದಾಗಲೆಲ್ಲ ಅವರು ಭೇಟಿಯಾಗಲು ಪ್ರಯತ್ನಿಸುತ್ತಾರೆ. ಅದು ಮುಂಬೈ ಆಗಿರಲಿ ಅಥವಾ ಹೈದರಾಬಾದ್ನಲ್ಲೇ ಇರಲಿ ಎಂದು ಹೇಳಿದರು.
ಇದನ್ನೂ ಓದಿ: Samantha Ruth Prabhu: ನಾಗಚೈತನ್ಯರಿಂದ 200 ಕೋಟಿ ರೂ. ಜೀವನಾಂಶ ಪಡೆದ್ರಾ ಸಮಂತಾ? ನಟಿ ಹೇಳಿದ್ದೇನು?

ಈ ಸಂದರ್ಭದಲ್ಲಿ ಹಳೆಯ ಫೋಟೋವೊಂದರ ಬಗ್ಗೆ ಮಾತನಾಡಿದ ಅಮೀರ್, ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ನಿರ್ಮಿಸಿದ ಘಜಿನಿ ಚಿತ್ರೀಕರಣದ ಸಮಯದಲ್ಲಿ ಇದು ತೆಗೆದದ್ದು ಎಂದು ನೆನಪಿಸಿಕೊಂಡರು. ಅಮೀರ್ ಖಾನ್ ಇತ್ತೀಚೆಗೆ ಜೆನಿಲಿಯಾ ದೇಶಮುಖ್ ಜೊತೆ ನಟಿಸಿದ ಸೀತಾರೆ ಜಮೀನ್ ಪರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಜೂನ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.