Bengaluru Power Cut: ಜೂ.24, 25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆವಿ ಇಸ್ರೋ ಲೇಔಟ್ ಉಪಕೇಂದ್ರ 220/66/11 ಕೆವಿ ಸುಬ್ರಹ್ಮಣ್ಯಪುರ ಉಪಕೇಂದ್ರ ಮತ್ತು 66/11ಕೆವಿ ಬನಶಂಕರಿ ಉಪಕೇಂದ್ರ ಜಯನಗರ ವಿಭಾಗ ವ್ಯಾಪ್ತಿಯಲ್ಲಿನ ಹಲವೆಡೆ ಜೂ. 24ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ. 24 ಮತ್ತು 25ರಂದು ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ. 66/11 ಕೆವಿ ಇಸ್ರೋ ಲೇಔಟ್ ಉಪಕೇಂದ್ರ, 220/66/11 ಕೆವಿ ಸುಬ್ರಹ್ಮಣ್ಯಪುರ ಉಪಕೇಂದ್ರ ಮತ್ತು 66/11ಕೆವಿ ಬನಶಂಕರಿ ಉಪಕೇಂದ್ರ ಜಯನಗರ ವಿಭಾಗ ವ್ಯಾಪ್ತಿಯಲ್ಲಿನ ಹಲವೆಡೆ ಜೂ. 24ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅದೇ ರೀತಿ 66/11 ಕೆವಿ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಜೂ. 25ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ
ಜೂ. 24ರಂದು ವಿದ್ಯುತ್ ವ್ಯತ್ಯಯ ಉಂಟಾಗುವ ಸ್ಥಳಗಳು:
ಜೂನ್ 24ರಂದು 66/11 ಕೆವಿ ಇಸ್ರೋ ಲೇಔಟ್ ಉಪಕೇಂದ್ರ, 220/66/11 ಕೆವಿ ಸುಬ್ರಹ್ಮಣ್ಯಪುರ ಉಪಕೇಂದ್ರ ಮತ್ತು 66/11ಕೆವಿ ಬನಶಂಕರಿ ಉಪಕೇಂದ್ರ ಜಯನಗರ ವಿಭಾಗ ವ್ಯಾಪ್ತಿಯಲ್ಲಿನ ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಇಳಯಸನಗರ, ವಿವೇಕಾನಂದ ಕಾಲೋನಿ, ಪ್ರಗತಿಪುರ, ಸರಬಂಡೆ ಪಾಳ್ಯ, ಫ್ರತಿಭಾ ಇಂಡಸ್ಟ್ರಿಯಲ್ ಏರಿಯಾ, ಸುಪ್ರೀಂ ಲೆದರ್ ಗಾರ್ಮೆಂಟ್ಸ್, ಚಂದ್ರ ನಗರ, ಕಾಶಿನಗರ, ವಿಕ್ರಮ ನಗರ, ನಂಜಪ್ಪ ಲೇಔಟ್, ಬಿಕಾಸಿಪುರ, ಟೀಚರ್ಸ್ ಕಾಲೋನಿ, JHBCS ಲೇಔಟ್, ಬೇಂದ್ರೆ ನಗರ, ಈಶ್ವರನಗರ, ಮಿನಿಯಾಜ್ ನಗರ, ಕನಕಾ ಲೇಔಟ್, ಕನಕನಗರ, ಗುಬ್ಬಾಲಾಳ, ಉತ್ತರಹಳ್ಳಿ ಭಾಗಶಃ, ಇಸ್ರೋ ಲೇಔಟ್ ಇಂದ್, ಆದರ್ಶ್ ಅಪಾರ್ಟ್ಮೆಂಟ್ 1&2, ಮಂತ್ರಿಟ್ರಾನ್ ಕ್ವಿಲ್ ಅಪಾರ್ಟ್ಮೆಂಟ್, ಮಾರುತಿ ಲೇಔಟ್, ಭರತ ಲೇಔಟ್, ಅಗ್ರಹಾರ, ಕುಮಾರಸ್ವಾಮಿ ಲೇಔಟ್, ವಿಠ್ಠಲ್ ನಗರ, ಯಾದಲಾಂ ನಗರ, ಮಾರುತಿ ನಗರ, ಅರೇಹಳ್ಳಿ, ಇಟ್ಟುಮಾಡು, AGS ಲೇಔಟ್, ಚಿಕ್ಕಲ್ಲಸಂದ್ರ, ಟಿಜಿ ಲೇಔಟ್, ಭುವನೇಶ್ವರಿನಗರ, ಶ್ರೀನಗರ, ಹೋಸಕೆರೆಹಳ್ಳಿ, PES ಎಂಜಿನಿಯರ್ ಕಾಲೇಜು, ವೀರಭದ್ರ ನಗರ, ಬ್ಯಾಂಕ್ ಕಾಲೋನಿ, NTY ಲೇಔಟ್, ತ್ಯಾಗರಾಜಾ ನಗರ, ಬಸವನ ಗುಡಿ, BSK 3ನೇ ಹಂತ, ಕತ್ರಿಗುಪ್ಪೆ, ಗಿರಿನಗರ 4ನೇ ಫೇಸ್, ಐಟಿಐ ಲೇಔಟ್, 100 ಫೀಟ್ ರಿಂಗ್ ರೋಡ್, ಕಾಮಾಕ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಜೂ. 25ರಂದು ಎಲ್ಲಿಲ್ಲಿ ಕರೆಂಟ್ ಇರಲ್ಲ
66/11 ಕೆವಿ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜೂ. 25ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಹಳೆಹಳ್ಳಿ, ಮಾರ್ಗೊಂಡಣ ಹಳ್ಳಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್, ಅಥಮ ವಿದ್ಯಾನಗರ, ಕೆ.ಆರ್.ಸಿ ಬಸ್ ನಿಲ್ದಾಣ, ಬೈರತಿ, ಗುಬ್ಬಿ ಅಡ್ಡ ರಸ್ತೆ, ಬೈರತಿ ಬಂಡೆ, ಕ್ಯಾಲಸನಹಳ್ಳಿ, ಪೂರ್ವಾಂಕರ ಅಪಾರ್ಟ್ಮೆಂಟ್,ಕಲ್ಕೇರೆ ರೋಡ, ಪೂರ್ಣ ಪ್ರಜ್ಞಾ, ಮಾರಗೊಂಡನಹಳ್ಳಿ, ಗವಿಗುಡಿ ಮತ್ತು ಸುತ್ತಮುತ್ತಲಿನ ಪ್ರದೇಶ.
66/11 ಕೆ.ವಿ ಶೋಭಾ ಇಂದ್ರಪ್ರಸ್ಥ ಸ್ಟೇಷನ್ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ. 25ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಬೆಂಗಳೂರು ನಗರದ ಶೋಭಾ ಇಂದ್ರಪ್ರಸ್ಥ ಅಪಾರ್ಟ್ಮೆಂಟ್ ಹಾಗೂ ಗ್ಲೋಬಲ್ ಮಾಲ್ನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Karnataka Rains: ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಅಬ್ಬರಿಸಲಿದೆ ಮಳೆ; ಯೆಲ್ಲೋ ಅಲರ್ಟ್ ಘೋಷಣೆ