ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Suresh: ಬಿಗ್‌ಬಾಸ್‌ ಖ್ಯಾತಿಯ ಗೋಲ್ಡ್‌ ಸುರೇಶ್‌ ವಿರುದ್ಧ ಬರೋಬ್ಬರಿ 14 ಲಕ್ಷ ರೂ. ವಂಚನೆ ಕೇಸ್‌

ರಾಯಚೂರಿನ ಮಾನ್ವಿ ಪಟ್ಟಣದ ಯುವಕ ಮೈನುದ್ದಿನ್ ಎಂಬಾತ ಗೋಲ್ಡ್‌ ಸುರೇಶ್‌ ವಿರುದ್ಧ ದೂರು ದಾಖಲಿಸಿದ್ದು, ಸುರೇಶ್‌ 14 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಗಂಭೀರ ವಂಚನೆ ಆರೋಪ ಮಾಡಿದ್ದಾರೆ. ಸುರೇಶ್ ಅವರು ಕೇಬಲ್ ಚಾನೆಲ್​ನ ಸೆಟ್‌ ಅಪ್ ಮಾಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. ಅಲ್ಲದೆ ಸುರೇಶ್ ನಾಲ್ಕು ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ ಏಳು ಲಕ್ಷ ರೂಪಾಯಿನ ಸುರೇಶ್​​ಗೆ ಮೈನುದ್ದೀನ್ ನೀಡಿದ್ದರು.

ಗೋಲ್ಡ್‌ ಸುರೇಶ್‌ ವಿರುದ್ಧ ಬರೋಬ್ಬರಿ 14 ಲಕ್ಷ ರೂ. ವಂಚನೆ ಕೇಸ್‌

Profile Rakshita Karkera Jun 18, 2025 1:07 PM

ರಾಯಚೂರು: ಬಿಗ್ ಬಾಸ್ ಮೂಲಕ ಖ್ಯಾತಿಯ ಗೋಲ್ಡ್ ಸುರೇಶ್(Gold Suresh) ವಿರುದ್ಧ ಲಕ್ಷಾಂತರ ರೂ. ವಂಚನೆ ಕೇಸ್‌(Cheating Case) ದಾಖಲಾಗಿದೆ. ರಾಯಚೂರಿನ ಮಾನ್ವಿ ಪಟ್ಟಣದ ಯುವಕ ಮೈನುದ್ದಿನ್ ಎಂಬಾತ ಗೋಲ್ಡ್‌ ಸುರೇಶ್‌ ವಿರುದ್ಧ ದೂರು ದಾಖಲಿಸಿದ್ದು, ಸುರೇಶ್‌ 14 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಗಂಭೀರ ವಂಚನೆ ಆರೋಪ ಮಾಡಿದ್ದಾರೆ.

ಸುರೇಶ್ ಅವರು ಕೇಬಲ್ ಚಾನೆಲ್​ನ ಸೆಟ್‌ ಅಪ್ ಮಾಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. ಅಲ್ಲದೆ ಸುರೇಶ್ ನಾಲ್ಕು ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ ಏಳು ಲಕ್ಷ ರೂಪಾಯಿನ ಸುರೇಶ್​​ಗೆ ಮೈನುದ್ದೀನ್ ನೀಡಿದ್ದರು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ, ಆ ಬಳಿಕ ಅರೆಬರೆ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಈಗ ಅವರು ಹಣವನ್ನು ಮರಳಿ ನೀಡುತ್ತಿಲ್ಲ ಎಂದು ಮೈನುದ್ದೀನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?

ಮೈನುದ್ದಿನ್ ಎಂಬ ಯುವಕನಿಗೆ ಕೇಬಲ್‌ ಚಾನೆಲ್‌ ಮಾಡುವ ಯೋಜನೆ ಹೊಂದಿದ್ದ. ಈ ಹಿನ್ನೆಲೆಯಲ್ಲಿ, ಸ್ಟುಡಿಯೋ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ ಸಂಬಂಧಿಸಿ 2017ರಲ್ಲೇ ಗೋಲ್ಡ್ ಸುರೇಶ್ ಜೊತೆ 14 ಲಕ್ಷ ರೂ.ಗೆ ಒಪ್ಪಂದ (ಅಗ್ರಿಮೆಂಟ್) ಮಾಡಲಾಗಿತ್ತಂತೆ. ಇದರ ಭಾಗವಾಗಿ ಪ್ರಾರಂಭದಲ್ಲಿ 4 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು. ನಂತರ ಹಂತ ಹಂತವಾಗಿ 7 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮೈನುದ್ದಿನ್ ಆರೋಪಿಸಿದ್ದಾರೆ. ಆದರೆ, ಕೆಲಸವನ್ನು ಅರ್ಧಕ್ಕೆ ಬಿಟ್ಟು, ಅತಂತ್ರ ಸ್ಥಿತಿಗೆ ಸಿಲುಕಿದಂತಾಗಿದೆ. ಹಣ ಕೊಟ್ಟ ಕೆಲವು ದಿನಗಳು ಮಾತ್ರ ಒಂದಷ್ಟು ಕೆಲಸ ಮಾಡಿ ನಂತರ ಕೆಲಸ ಮಾಡಿಸದೇ ಗೋಲ್ಡ್ ಸುರೇಶ್ ಸುಮ್ಮನಾಗಿದ್ದಾನೆ. ಜೊತೆಗೆ, ಬಾಕಿ ಹಣವನ್ನು ಕೊಟ್ಟರೂ ಕೆಲಸ ಮುಗಿಸಲು ನಿರಾಕರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Hanumantha Marriage: ಹನುಮಂತ ಲಮಾಣಿ ಮದುವೆ ಯಾವಾಗ? ಹುಡುಗಿ ಬಗ್ಗೆ ಗುಟ್ಟು ಬಿಚ್ಚಿಟ್ಟ ಗೋಲ್ಡ್ ಸುರೇಶ್