ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಚಾಕ್ಲೇಟ್‌ ಪ್ರಿಯರೇ, ಎಚ್ಚರ... ಎಚ್ಚರ! ಚಪ್ಪರಿಸಿಕೊಂಡು ತಿನ್ನೋ ಮುನ್ನ ಇದನ್ನೊಮ್ಮೆ ನೋಡಿ

Human Tooth found in Chocolate: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದ ಭಾರತೀ ಎಂಬುವವರು ಅಂಗಡಿಯೊಂದರಲ್ಲಿ ಟೂಟಿ ಫ್ರೂಟಿ ಎಂಬ ಚಾಕ್ಲೇಟ್ ಅನ್ನು ಖರೀದಿಸಿದ್ದರು. ಚಾಕ್ಲೆಟ್ ತಿನ್ನುವಾಗ ಅದರಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದೆ.

ಚಾಕ್ಲೇಟ್‌ನಲ್ಲಿ ಮನುಷ್ಯನ ಹಲ್ಲು ಪತ್ತೆ!

Profile Rakshita Karkera Jun 15, 2025 11:25 AM

ಕೋಲಾರ : ರೆಸ್ಟೋರೆಂಟ್‌, ಹೊಟೇಲ್‌ ಆಹಾರದಲ್ಲಿ ಜಿರಳೆ, ಹಲ್ಲಿ ಪತ್ತೆಯಾಗಿರುವ ಘಟನೆ ಆಗಾಗ ವರದಿಯಾಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ರಾಜ್ಯದಲ್ಲಿ ನಡೆದಿದೆ. ಚಾಕಲೇಟ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾದ(Human Tooth found in Chocolate) ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದ ಭಾರತೀ ಎಂಬುವವರು ಅಂಗಡಿಯೊಂದರಲ್ಲಿ ಟೂಟಿ ಫ್ರೂಟಿ ಎಂಬ ಚಾಕ್ಲೇಟ್ ಅನ್ನು ಖರೀದಿಸಿದ್ದರು. ಚಾಕ್ಲೇಟ್‌ ತಿನ್ನುವಾಗ ಅದರಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.

ಕೆಲವು ದಿನಗಳ ಹಿಂದೆಯಷ್ಟೇ ರಸ್ತೆಬದಿಯ ಡಾಬಾವೊಂದರಲ್ಲಿ ನೀಡಿದ ತಂದೂರಿ ರೊಟ್ಟಿಯಲ್ಲಿ ಸತ್ತ ಹಲ್ಲಿಯೊಂದು ಇರುವುದು ಪತ್ತೆಯಾಗಿತ್ತು.. ವ್ಯಕ್ತಿಯೊಬ್ಬ ಡಾಬಾವೊಂದರಲ್ಲಿ ತಂದೂರಿ ರೊಟ್ಟಿ(Tandoori Roti) ಆರ್ಡರ್ ಮಾಡಿದ್ದಾನೆ. ಇನ್ನೇನು ತಿನ್ನಬೇಕು ಎಂದು ಕೈಹಾಕಿದಾಗ ಸತ್ತ ಹಲ್ಲಿಯೊಂದು ಸಿಕ್ಕಿದೆಯಂತೆ. ಈ ಶಾಕಿಂಗ್‌ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ನೆಟ್ಟಿಗರು ಇದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಇದಾದ ನಂತರ ಗುರುಗ್ರಾಮದ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಐಎಎಸ್ ಅಧಿಕಾರಿ ದಂಪತಿ ಶೆಫ್‌ ಸುವೀರ್ ಸರನ್ (Suvir Saran) ಒಡೆತನದ ದಿ ಹೌಸ್ ಆಫ್ ಸೆಲೆಸ್ಟ್‌ನಲ್ಲಿ ತರಕಾರಿ ಸಲಾಡ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಅದರಲ್ಲಿ ಸತ್ತ ಹುಳ (caterpillar) ಕಂಡುಬಂದಿದೆ. ಅದನ್ನು ಅವರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ.

ಈ ಸುದ್ದಿಯನ್ನೂ ಓದಿ: Viral Video: ಈ ಐಸ್‍ಕ್ರೀಂ ಕೋನ್‍ನಲ್ಲಿ ಹಲ್ಲಿಯ ಬಾಲ ಪತ್ತೆ; ವಿಡಿಯೊ ವೈರಲ್

ವೈರಲ್ ಆದ ವಿಡಿಯೊದಲ್ಲಿ ರೆಸ್ಟೋರೆಂಟ್‍ನ ಸಿಬ್ಬಂದಿ ಸಲಾಡ್‌ನಿಂದ ಹುಳವನ್ನು ಹೊರತೆಗೆಯುವುದು ಸೆರೆಯಾಗಿದೆ. ಈ ರೀತಿಯ ಆಹಾರ ನೀಡಿದ್ದಕ್ಕಾಗಿ ದಂಪತಿ ಆಡಳಿತ ಮಂಡಳಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ, ಆಹಾರ ಅಧಿಕಾರಿಗಳು ಈಗಾಗಲೇ ರೆಸ್ಟೋರೆಂಟ್ ಅನ್ನು ಪರಿಶೀಲಿಸಿದ್ದಾರೆ. ಅವರು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಸರ್ಕಾರ ಅನುಮೋದಿತ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.