Regina Cassandra: ರೆಜಿನಾ ಕ್ಯಾಸಂಡ್ರಾ ಸ್ಟೈಲಿಶ್ ಲುಕ್ಗೆ ಫ್ಯಾನ್ಸ್ ಫಿದಾ; ಇಲ್ಲಿದೆ ಫೋಟೋಸ್
ತೆಲುಗು ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟಿ ರೆಜಿನಾ ಕಸಾಂಡ್ರಾ ಸದ್ಯ ಪೋಟೋ ಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ನಟಿ ಸ್ಟೈಲಿಶ್ ಔಟ್ ಪಿಟ್ ಮೂಲಕ ಫೋಟೋ ಶೂಟ್ ಮಾಡಿಸಿದ್ದಾರೆ. ಅವರು ಧರಿಸಿದ್ದ ಎಂಬ್ರಾಯ್ಡರಿ ಸೆಟ್ ಮತ್ತು ಡೋರಿ ಜಾಕೆಟ್ ಫ್ಯಾಷನ್ ಪ್ರಿಯರ ಗಮನ ಸೆಳೆದಿವೆ..



ಸೂರ್ಯಕಾಂತಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದ ಬೆಡಗಿ ರೆಜಿನಾ ಕಸ್ಸಂದ್ರ ಇದೀಗ ತೆಲುಗು, ತಮಿಳಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸೋಷಿಯಲ್ ಮೀಡಿ ಯಾದಲ್ಲೂ ಸಕ್ರಿಯ ವಾಗಿರುವ ನಟಿ ರೆಜಿನಾ ಆಗಾಗ ಬೋಲ್ಡ್ ಪೋಟೋಶೂಟ್ ಮೂಲಕ ಸುದ್ದಿ ಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ನಟಿ ಸ್ಟೈಲಿಶ್ ಔಟ್ ಪಿಟ್ ಮೂಲಕ ಫೋಟೋ ಶೂಟ್ ಮಾಡಿ ಸಿದ್ದಾರೆ.

ನಟನೆ ಮಾತ್ರವಲ್ಲದೆ ಸ್ಟೈಲ್ ಐಕಾನ್ ನಿಂದಲೂ ಪ್ರಸಿದ್ದವಾಗಿರುವ ನಟಿ ರೆಜಿನಾ ಈ ಭಾರಿ ಫ್ಯಾಷನ್ ಡಿಸೈನರ್ ವೈಶಾಲಿ ಅಗರವಾಲ್ ಅವರು ತಯಾರಿಸಿದ ಔಟ್ ಫಿಟ್ ಧರಿಸಿದ್ದಾರೆ. ರೇಜಿನಾ ಡಾರ್ಕ್ ಆರೆಂಜ್ ಬ್ರಾಲೆಟ್ ಮತ್ತು ಫ್ಲೇರ್ ಪ್ಯಾಂಟ್ಸ್ ಧರಿಸಿದ್ದಾರೆ.

ಈ ಲುಕ್ನ ಹೈಲೈಟ್ ಎಂದರೆ ಡೋರಿ ಜಾಕೆಟ್ ..ಅದರಲ್ಲಿ ಹೂಗಳ ವಿನ್ಯಾಸದ ಡಿಸೈನ್ ಆಕರ್ಷಕ ವಾಗಿ ಹೈಲೆಟ್ ಆಗಿದೆ. ಅದರಂತೆ ಅವರು ಧರಿಸಿರುವ ಬ್ಯಾಂಗಲ್ಸ್ ಈ ಉಡುಪಿಗೆ ಇನ್ನಷ್ಟು ಆಕರ್ಷಣೆ ತಂದವು.

ಈ ಡ್ರೆಸ್ ಗೆ ಹೊಂದಿಕೊಳ್ಳುವಂತ ನ್ಯೂಡ್ ಗ್ಲಾಮ್ ಮೇಕಪ್ ಬ್ರೌನ್ ಲಿಪ್ಸ್ಟಿಕ್, ಬೋಲ್ಡ್ ಕಜಲ್, ಸ್ಮಡ್ಜ್ ಇಫೆಕ್ಟ್ ಐಶ್ಯಾಡೋ ನಟಿಯ ಲುಕ್ ಪೂರ್ಣಗೊಳಿಸಿತ್ತು.

ತಮಿಳು ಸಿನಿಮಾ 'ಕಂದ ನಾಲ್ ಮುದಾಲ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರೆಜಿನಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ನೆಂಜಂ ಮರಪ್ಪಾಥಿಲ್ಲೈ', 'ಪಾರ್ಟಿ' ಚಿತ್ರದಲ್ಲೂ ಅಭಿನಯಿ ಸಿದ್ದಾರೆ. ಚೇತನ್ ಹೀರೋ ಅಭಿನಯದ 'ಸೂರ್ಯಕಾಂತಿ' ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ದರು. ಸದ್ಯ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ರೆಜಿನಾ ಅವರು ಫಿಲ್ಮ್ಫೇರ್ ಓಟಿಟಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.