IND vs ENG: ಅಂತಿಮ ದಿನದಾಟದಲ್ಲಿ ಮಳೆ ಪಾತ್ರ ನಿರ್ಣಾಯಕ
ಮೂರನೇ ದಿನದಾಟದಲ್ಲಿ ಮಳೆ ಭೀತಿ ಎದುರಾದ ಕಾರಣ ಪಂದ್ಯವನ್ನು ನಿಗದಿತ ಸಮಯಕ್ಕಿಂತ ಬೇಗನೆ ಕೊನೆಗೊಳಿಸಲಾಗಿತ್ತು. ಇಲ್ಲಿ ನಷ್ಟವಾದ ಆಟವನ್ನು ನಾಲ್ಕನೇ ದಿನದಾಟದಲ್ಲಿ ಸರಿದೂಗಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಲೀಡ್ಸ್ ಪಿಚ್ ಸಾಕಷ್ಟು ಉತ್ತಮವಾಗಿದೆ. ಚೇಸಿಂಗ್ ನಡೆಸಿದ ತಂಡಗಳು ಇಲ್ಲಿ ಹೆಚ್ಚಾಗಿ ಗೆದ್ದಿದೆ. ಒಂದೊಮ್ಮೆ ಮಳೆ ಬಂದರೆ ಪಿಚ್ ಹೇಗೆ ವರ್ತಿಸಲಿದೆ ಎನ್ನುವುದು ಕಾದು ನೋಡಬೇಕಿದೆ.


ಲೀಡ್ಸ್: ಹೆಡಿಂಗ್ಲಿಯಲ್ಲಿ(Headingley) ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಣ ಮೊದಲ ಟೆಸ್ಟ್ ಪಂದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇಂದು(ಮಂಗಳವಾರ) ಕೊನೆಯ ದಿನವಾಗಿದ್ದು ಉಭಯ ತಂಡಗಳು ಗೆಲುವಿನ ಕಾತರದಲ್ಲಿದೆ. ಗೆಲ್ಲಲು 350 ರನ್ಗಳ ಅವಶ್ಯಕತೆಯಿರುವ ಇಂಗ್ಲೆಂಡ್, 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದಂತೆ ಈ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಭಾರತವು ಜಸ್ಪ್ರೀತ್ ಬುಮ್ರಾ ಅವರ ಪ್ರದರ್ಶನವನ್ನು ಆಧರಿಸಿ ಗೆಲುವಿನ ಭರವಸೆಯಲ್ಲಿದೆ. ಆದರೆ ಮಳೆಯ(Leeds weather report) ಪಾತ್ರವೂ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಉಭಯ ತಂಡಗಳಿಗೂ ಪಂದ್ಯವನ್ನು ಗೆಲ್ಲುವ ಅವಕಾಶವಿದೆ. ಆದರೆ ಲೀಡ್ಸ್ನಲ್ಲಿ ಮಂಗಳವಾರ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮಳೆಯಾಗುವ ಸಾಧ್ಯತೆ ಶೇ. 84 ರಷ್ಟು ಇದೆ. ಹೀಗಾಗಿ ಅಂತಿಮ ದಿನ ಮಳೆ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಹವಾಮಾನವು ತಿಳಿಯಾಗುವ ನಿರೀಕ್ಷೆಯಿದೆ. ಆದರೆ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮತ್ತೆ ಮಳೆಯಾಗುವ ನಿರೀಕ್ಷೆಯಿದೆ.
ಮೂರನೇ ದಿನದಾಟದಲ್ಲಿ ಮಳೆ ಭೀತಿ ಎದುರಾದ ಕಾರಣ ಪಂದ್ಯವನ್ನು ನಿಗದಿತ ಸಮಯಕ್ಕಿಂತ ಬೇಗನೆ ಕೊನೆಗೊಳಿಸಲಾಗಿತ್ತು. ಇಲ್ಲಿ ನಷ್ಟವಾದ ಆಟವನ್ನು ನಾಲ್ಕನೇ ದಿನದಾಟದಲ್ಲಿ ಸರಿದೂಗಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಲೀಡ್ಸ್ ಪಿಚ್ ಸಾಕಷ್ಟು ಉತ್ತಮವಾಗಿದೆ. ಚೇಸಿಂಗ್ ನಡೆಸಿದ ತಂಡಗಳು ಇಲ್ಲಿ ಹೆಚ್ಚಾಗಿ ಗೆದ್ದಿದೆ. ಒಂದೊಮ್ಮೆ ಮಳೆ ಬಂದರೆ ಪಿಚ್ ಹೇಗೆ ವರ್ತಿಸಲಿದೆ ಎನ್ನುವುದು ಕಾದು ನೋಡಬೇಕಿದೆ.
ಇದನ್ನೂ ಓದಿ IND vs ENG: ರಾಹುಲ್ ದ್ರಾವಿಡ್ ವಿಶ್ವ ದಾಖಲೆ ಸರಿಗಟ್ಟಿದ ಜೋ ರೂಟ್
ಇಂಗ್ಲೆಂಡ್ ತಂಡವು 90 ಓವರ್ಗಳಲ್ಲಿ 371 ರನ್ಗಳ ಗುರಿಯನ್ನು ಹೊಂದಿದ್ದು. ಐದು ದಿನಗಳ ಟೆಸ್ಟ್ ಪಂದ್ಯದ ಇತಿಹಾಸದಲ್ಲಿ ಈ ದೊಡ್ಡ ಗುರಿಯನ್ನು ಇದುವರೆಗೆ ಬೆನ್ನಟ್ಟಿಲ್ಲ. ಹೆಡಿಂಗ್ಲಿಯಲ್ಲಿ ನಡೆದ 404 ರನ್ಗಳ ಅತಿ ದೊಡ್ಡ ಚೇಸಿಂಗ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ 6 ದಿನಗಳ ಟೆಸ್ಟ್ ಪಂದ್ಯದಲ್ಲಿ ಬಂದಿತ್ತು. ಅಲ್ಲಿ ಡಾನ್ ಬ್ರಾಡ್ಮನ್ ತಂಡವು ಪಂದ್ಯದ ಕೊನೆಯ ದಿನದಂದು 404 ರನ್ಗಳ ಗುರಿಯನ್ನು ಬೆನ್ನಟ್ಟಿ ಜಯಗಳಿಸಿತ್ತು. ಐದು ದಿನಗಳ ಟೆಸ್ಟ್ ಪಂದ್ಯದಲ್ಲಿ ಇದುವರೆಗಿನ ಅತ್ಯಧಿಕ ಚೇಸಿಂಗ್ ದಾಖಲೆ 359 ರನ್ಗಳಾಗಿದೆ. 2019 ರಲ್ಲಿ ಇಂಗ್ಲೆಂಡ್ ತಂಡ ಆಸೀಸ್ ವಿರುದ್ಧ ಈ ಸಾಧನೆಗೈದಿತ್ತು.