Paris Diamond League: ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
ದೋಹಾ ಡೈಮಂಡ್ ಲೀಗ್‍ನಲ್ಲಿ 90 ಮೀ. ಗುರಿ ದಾಟಿದ್ದರು. ಹೀಗಾಗಿ ಪ್ಯಾರಿಸ್ ಲೀಗ್‌ನಲ್ಲಿ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ ತೀವ್ರ ಚಳಿ ಮಧ್ಯೆಯೂ ಅವರು ಮೊದಲ ಸ್ಥಾನ ಪಡೆದದ್ದು ನಿಜಕ್ಕೂ ದೊಡ್ಡ ಸಾಧನೆ ಎನ್ನಬಹುದು.


ಪ್ಯಾರಿಸ್: ಶುಕ್ರವಾರ ತಡರಾತ್ರಿ ನಡೆದಿದ್ದ ಪ್ಯಾರಿಸ್ ಡೈಮಂಡ್ ಲೀಗ್(Paris Diamond League)ನಲ್ಲಿ ಭಾರತ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಪ್ರತಿಕೂಲ ಹವಾಮಾನದ ನಡುವೆಯೂ ಉತ್ತಮ ಪ್ರದರ್ಶನ ತೋರುವ ಮೂಲಕ ಚಿನ್ನದ ಪದಕ ಗೆದ್ದರು. ಈ ಮೂಲಕ ಚೋಪ್ರಾ ಅವರು 2025 ರ ಋತುವಿನ ಮೊದಲ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ನೀರಜ್ ತಮ್ಮ ಮೊದಲ ಪ್ರಯತ್ನದಲ್ಲಿ 88.16 ಮೀಟರ್ ದೂರ ಎಸೆದು ಗೆಲುವು ಸಾಧಿಸಿದರು. ಚೋಪ್ರಾ ಅವರ ಸಾಂಪ್ರದಾಯಿಕ ಎದುರಾಳಿ ಹಾಗೂ ದೋಹಾ ಡೈಮಂಡ್ ಲೀಗ್‍ನ ವಿಜೇತ ಜರ್ಮನಿಯ ಜೂಲಿಯನ್ ವೆಬೆರ್ ದ್ವಿತೀಯ ಸ್ಥಾನ ಪಡೆದರು.
ದೋಹಾ ಡೈಮಂಡ್ ಲೀಗ್‍ನಲ್ಲಿ 90 ಮೀ. ಗುರಿ ದಾಟಿದ್ದರು. ಹೀಗಾಗಿ ಪ್ಯಾರಿಸ್ ಲೀಗ್‌ನಲ್ಲಿ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ ತೀವ್ರ ಚಳಿ ಮಧ್ಯೆಯೂ ಅವರು ಮೊದಲ ಸ್ಥಾನ ಪಡೆದದ್ದು ನಿಜಕ್ಕೂ ದೊಡ್ಡ ಸಾಧನೆ ಎನ್ನಬಹುದು.
ಎಂಟು ವರ್ಷಗಳ ನಂತರ ಮೊದಲ ಬಾರಿಗೆ ಡೈಮಂಡ್ ಲೀಗ್‌ಗಾಗಿ ಪ್ಯಾರಿಸ್‌ಗೆ ಮರಳಿದ್ದ ನೀರಜ್ ಮೊದಲ ಸ್ಥಾನ ಪಡೆಯುವ ಮೂಲಕ ಟೂರ್ನಿಯನ್ನು ಸ್ಮರಣೀಯವಾಗಿಸಿದರು.
BOOM 💥 Neeraj Chopra with a 88.16m throw in his first attempt!
— Inspire Institute of Sport (@IIS_Vijayanagar) June 20, 2025
Big statement here at the Paris Diamond League from the champion himself in just his first throw.🔥
📺VC: Wanda DL#ParisDL #NeerajChopra #CraftingVictories 🇮🇳 pic.twitter.com/NrbLmq6729
ನೀರಜ್ ಅವರ ಡೈಮಂಡ್ ಲೀಗ್ ಗೆಲುವುಗಳು
ಲೌಸೇನ್ 2022
ಡೈಮಂಡ್ ಲೀಗ್ ಫೈನಲ್ 2022
ದೋಹಾ 2023
ಲೌಸೇನ್ 2023
ಪ್ಯಾರಿಸ್ 2025
ನೀರಜ್ ಜೂನ್ 24 ರಂದು ಜೆಕ್ ಗಣರಾಜ್ಯದ ಒಸ್ಟ್ರಾವಾದಲ್ಲಿ ನಡೆಯಲಿರುವ ಗೋಲ್ಡನ್ ಸ್ಪೈಕ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇದರ ನಂತರ, ಜುಲೈ 4 ರಂದು ನಡೆಯಲಿರುವ ಉದ್ಘಾಟನಾ ಆವೃತ್ತಿಯ ನೀರಜ್ ಚೋಪ್ರಾ ಕ್ಲಾಸಿಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕೂಟ ಬೆಂಗಳೂರಿನಲ್ಲಿ ನಡೆಯಲಿದೆ.
ಇದನ್ನೂ ಓದಿ IND vs ENG: ಧೋನಿಯ ದಾಖಲೆ ಮುರಿದ ರಿಷಭ್ ಪಂತ್