ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KL Rahul: ಪಂತ್‌ಗೆ ಕೈ ಮುಗಿದು ನಮಿಸಿದ ಕೆ.ಎಲ್‌ ರಾಹುಲ್‌

3ನೇ ಅವಧಿಯಲ್ಲಿ ಬ್ಯಾಟಿಂಗ್‌ ನಡೆಸಲು ಬಂದ ಪಂತ್‌ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ವೇಗವಾಗಿಯೇ ಬ್ಯಾಟ್‌ ಬೀಸಿದ ಪಂತ್‌ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದರು. ಇದೇ ವೇಳೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿಷಭ್‌ ಪಂತ್‌ 3000 ರನ್‌ ಮೈಲುಗಲ್ಲು ಸಾಧಿಸಿದರು. 43.04ರ ಸರಾಸರಿಯಲ್ಲಿ 3013 ರನ್‌ ಗಳಿಸಿದ್ದಾರೆ. ರಿಷಭ್‌ ಪಂತ್‌ ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮನಸೋತ ರಾಹುಲ್‌ ಎರಡೂ ಕೈ ಮುಗಿದು ನಮಿಸುವ ಮೂಲಕ ಅವರಿಗೆ ಗೌರವ ಸೂಚಿಸಿದರು.

ಪಂತ್‌ಗೆ ಕೈ ಮುಗಿದು ನಮಿಸಿದ ಕೆ.ಎಲ್‌ ರಾಹುಲ್‌

Profile Abhilash BC Jun 21, 2025 2:36 PM

ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ(IND vs ENG 1st Test) ದಿನದಾಟದಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿ ಮಿಂಚಿದ ರಿಷಭ್‌ ಪಂತ್‌ ಅವರು ದಿನದಾಟ ಮುಕ್ತಾಯಗೊಳಿಸಿ ಡ್ರೆಸ್ಸಿಂಗ್‌ ರೂಮ್‌ಗೆ ಮರಳಿದ ವೇಳೆ, ಕೆ.ಎಲ್‌ ರಾಹುಲ್‌(KL Rahul) ಅವರು ಕೈ ಮುಗಿದು ಪಂತ್‌ಗೆ ನಮಿಸಿದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

3ನೇ ಅವಧಿಯಲ್ಲಿ ಬ್ಯಾಟಿಂಗ್‌ ನಡೆಸಲು ಬಂದ ಪಂತ್‌ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ವೇಗವಾಗಿಯೇ ಬ್ಯಾಟ್‌ ಬೀಸಿದ ಪಂತ್‌ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದರು. ಇದೇ ವೇಳೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿಷಭ್‌ ಪಂತ್‌ 3000 ರನ್‌ ಮೈಲುಗಲ್ಲು ಸಾಧಿಸಿದರು. 43.04ರ ಸರಾಸರಿಯಲ್ಲಿ 3013 ರನ್‌ ಗಳಿಸಿದ್ದಾರೆ. ರಿಷಭ್‌ ಪಂತ್‌ ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮನಸೋತ ರಾಹುಲ್‌ ಎರಡೂ ಕೈ ಮುಗಿದು ನಮಿಸುವ ಮೂಲಕ ಅವರಿಗೆ ಗೌರವ ಸೂಚಿಸಿದರು.

ರಾಹುಲ್‌-ಜೈಸ್ವಾಲ್‌ ದಾಖಲೆ

ರಾಹುಲ್‌-ಜೈಸ್ವಾಲ್‌ ಜೋಡಿ ಮೊದಲ ವಿಕೆಟ್‌ಗೆ 24.5 ಓವರ್‌ಗಳಲ್ಲಿ 91 ರನ್‌ ಜೊತೆಯಾಟವಾಡುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದರು. ಇದು ಭಾರತೀಯ ಜೋಡಿ ಲೀಡ್ಸ್‌ನಲ್ಲಿ ಮೊದಲ ವಿಕೆಟ್‌ಗೆ ಗಳಿಸಿದ ಗರಿಷ್ಠ ರನ್‌. ಈ ಹಿಂದೆ 1986ರಲ್ಲಿ ಸುನಿಲ್ ಗವಾಸ್ಕರ್‌ ಹಾಗೂ ಕೆ.ಶ್ರೀಕಾಂತ್‌ ಮೊದಲ ವಿಕೆಟ್‌ಗೆ 64 ರನ್‌ ಸೇರಿಸಿದ್ದರು. ಇನ್ನು, 2012ರ ಬಳಿಕ ಲೀಡ್ಸ್‌ನಲ್ಲಿ ಮೊದಲ ದಿನದಾಟದ ಮೊದಲ 20 ಓವರ್‌ ವಿಕೆಟ್‌ ನಷ್ಟವಿಲ್ಲದೆ ಆಡಿದ ಮೊದಲ ಪ್ರವಾಸಿ ತಂಡ ಎಂಬ ಖ್ಯಾತಿಗೂ ಪಾತ್ರವಾಯಿತು. ಈ ಮೊದಲು ದ.ಆಫ್ರಿಕಾದ ಗ್ರೇಮ್‌ ಸ್ಮಿತ್‌-ಆಲ್ವಿರೊ ಪೀಟರ್ಸನ್‌ ಈ ಸಾಧನೆ ಮಾಡಿದ್ದರು.



ಸದ್ಯ 65 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿರುವ ಪಂತ್‌, ದ್ವಿತೀಯ ದಿನದಾಟದಲ್ಲಿ ಶತಕ ಪೂರ್ತಿಗೊಳಿಸಿದರೆ ಧೋನಿಯ ಮತ್ತೊಂದು ದಾಖಲೆ ಕೂಡ ಪತನಗೊಳ್ಳಲಿದೆ. ಸದ್ಯ ಪಂತ್‌ ಮತ್ತು ಧೋನಿ ತಲಾ 6 ಶತಕ ಬಾರಿಸಿದಾರೆ. ಪಂತ್‌ ಇಂದು ಶತಕ ಬಾರಿಸಿದರೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಕೀಪರ್ ಆಗಬಹುದು.