ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WI vs AUS Test: ವಿಂಡೀಸ್‌ ಮೊದಲ ಟೆಸ್ಟ್‌ನಿಂದ ಲ್ಯಾಬುಶೇನ್‌ಗೆ ಕೊಕ್‌

ಮೂರನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್‌ ಸೋಲಿನ ಬಳಿಕ 4ನೇ ಆವೃತ್ತಿಯಲ್ಲಿ ಆಸೀಸ್‌ ಆಡುತ್ತಿರುವ ಮೊದಲ ಟೆಸ್ಟ್‌ ಸರಣಿ ಇದಾಗಿದೆ. ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಆಸ್ಟ್ರೇಲಿಯಾ ಮೂರು ಟೆಸ್ಟ್‌ ಮತ್ತು 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ವಿಂಡೀಸ್‌ ಮೊದಲ ಟೆಸ್ಟ್‌ನಿಂದ ಲ್ಯಾಬುಶೇನ್‌ಗೆ ಕೊಕ್‌

Profile Abhilash BC Jun 20, 2025 12:23 PM

ಸಿಡ್ನಿ: ಇತ್ತೀಚೆಗೆ ಲಾರ್ಡ್ಸ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಮಾರ್ನಸ್ ಲ್ಯಾಬುಶೇನ್ ಅವರನ್ನು ಜೂನ್ 25 ರಿಂದ ಬಾರ್ಬಡೋಸ್‌ನಲ್ಲಿ ಪ್ರಾರಂಭವಾಗುವ ವೆಸ್ಟ್ ಇಂಡೀಸ್(WI vs AUS Test ) ವಿರುದ್ಧದ ಮೊದಲ ಪಂದ್ಯದಿಂದ ಕೈಬಿಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ (ಜೂನ್ 20) ದೃಢಪಡಿಸಿದೆ. ಫೀಲ್ಡಿಂಗ್‌ ವೇಳೆ ಗಾಯಗೊಂಡ ಸ್ಟೀವನ್‌ ಸ್ಮಿತ್ ಅವರನ್ನು ಕೂಡ ಕೈಬಿಡಲಾಗಿದೆ. ಉಭಯ ಆಟಗಾರರ ಬದಲು ಸ್ಯಾಮ್ ಕಾನ್ಸ್ಟಾಸ್ ಮತ್ತು ಜೋಶ್ ಇಂಗ್ಲಿಸ್ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.

ಮೂರನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್‌ ಸೋಲಿನ ಬಳಿಕ 4ನೇ ಆವೃತ್ತಿಯಲ್ಲಿ ಆಸೀಸ್‌ ಆಡುತ್ತಿರುವ ಮೊದಲ ಟೆಸ್ಟ್‌ ಸರಣಿ ಇದಾಗಿದೆ. ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಆಸ್ಟ್ರೇಲಿಯಾ ಮೂರು ಟೆಸ್ಟ್‌ ಮತ್ತು 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಕಳೆದೊಂದು ವರ್ಷದಿಂದ ಲ್ಯಾಬುಶೇನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. 2023 ರಲ್ಲಿ ಅವರ ಸರಾಸರಿ ಕೇವಲ 34.91 ಮತ್ತು 2024 ರಲ್ಲಿ ಅದು 30.93 ಕ್ಕೆ ಇಳಿದಿದೆ. ಈ ವರ್ಷ ಇಲ್ಲಿಯವರೆಗೆ ಆಡಿದ ನಾಲ್ಕು ಟೆಸ್ಟ್‌ಗಳಲ್ಲಿ ಘೋರ ವೈಫಲ್ಯ ಕಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಆರಂಭಿಕ ಆಟಗಾರನಾಗಿ 17 ಮತ್ತು 22 ರನ್ ಗಳಿಸಿ ವೈಫಲ್ಯ ಕಂಡಿದ್ದರು.

"ಸ್ಟೀವನ್‌ ಸ್ಮಿತ್‌ ಗಾಯ ವಾಸಿಯಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ, ಆದ್ದರಿಂದ ನಾವು ಅವರಿಗೆ ಇನ್ನೊಂದು ವಾರ ವಿಶ್ರಾಂತಿ ನೀಡಿ ನಂತರ ಅವರ ಕಾರ್ಯಕ್ಷಮತೆಯನ್ನು ನಿರ್ಣಯಿಸುತ್ತೇವೆ. ಸ್ಟೀವ್ ಮತ್ತು ಮಾರ್ನಸ್ ಬದಲಿಗೆ ಜೋಶ್ ಮತ್ತು ಸ್ಯಾಮ್ ಅವರಿಗೆ ಅವಕಾಶ ನೀಡುವ ನಿರ್ಧಾರವನ್ನು ನಾವು ಮಾಡಿದ್ದೇವೆ. ಅವರು ತಮ್ಮ ಹೊಸ ಟೆಸ್ಟ್ ವೃತ್ತಿಜೀವನವನ್ನು ಮುಂದುವರಿಸಲು ಅವಕಾಶ ಪಡೆಯುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ" ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್‌ ಬೈಲಿ ಹೇಳಿದರು.

ಇದನ್ನೂ ಓದಿ IND vs ENG: ಟೆಸ್ಟ್‌ನಲ್ಲಿ ಆಂಗ್ಲರ ಬಾಝ್​ಬಾಲ್​ ಆಟ ಎಂದರೇನು?

ಜೂನ್ 25- 29: ಮೊದಲ ಟೆಸ್ಟ್‌

ಜುಲೈ 3-7: ದ್ವಿತೀಯ ಟೆಸ್ಟ್‌

ಜುಲೈ 12-16: ಮೂರನೇ ಟೆಸ್ಟ್‌