Viral News: ಪೋಷಕರಿಗೆ ದುಡ್ಡಲ್ಲ, ಮಕ್ಕಳ ಸಾನಿಧ್ಯ ಅಗತ್ಯ; ಅನಿವಾಸಿ ಭಾರತೀಯರಿಗೆ ಲೇಖಕ ನೀಡಿದ ಸಲಹೆ ಇದು
ಸಿಂಗಾಪುರದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಅನಿವಾಸಿ ಭಾರತೀಯರ ಪೋಷಕರ ಬಗ್ಗೆ ಮಾತನಾಡಿದ್ದಾರೆ. ಅವರು NRIಗಳು ಒಂಟಿಯಾಗಿ ವಾಸಿಸುವ ತಮ್ಮ ಪೋಷಕರನ್ನು ನೋಡಿಕೊಳ್ಳಲು ಸಹಾಯಕರನ್ನು ನೇಮಿಸಿಕೊಳ್ಳುವಂತೆ ಹೇಳಿದ್ದಾರೆ. ಅವರ ಪೋಸ್ಟ್ ಎಲ್ಲರ ಮನಗೆದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ.

ಸಿಂಗಾಪುರ: ಅನೇಕ ಅನಿವಾಸಿ ಭಾರತೀಯರು (NRI) ವಿದೇಶಗಳಲ್ಲಿ ಆರಾಮವಾಗಿ ವಾಸಿಸುತ್ತಿದ್ದರೆ, ಅವರ ಪೋಷಕರು ಮಾತ್ರ ಭಾರತದಲ್ಲಿ ಒಂಟಿಯಾಗಿ ಕಷ್ಟಪಡುತ್ತಿರುತ್ತಾರೆ. ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ದುಡಿದ ಜೀವಗಳು ಒಂಟಿಯಾಗಿವೆ ಎಂದು ಸಿಂಗಾಪುರದಲ್ಲಿ ವಾಸಿಸುವ ಲೇಖಕರೊಬ್ಬರು ಹೇಳಿದ್ದಾರೆ. NRIಗಳು ಒಂಟಿಯಾಗಿ ವಾಸಿಸುವ ತಮ್ಮ ಪೋಷಕರನ್ನು ನೋಡಿಕೊಳ್ಳಲು ಯಾರನ್ನಾದರೂ ಸಹಾಯಕರನ್ನು ನೇಮಿಸಿಕೊಳ್ಳುವಂತೆ ಅವರು ಹೇಳಿದ್ದಾರೆ. ಹಾಗೆ ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರೂ ನಿಮ್ಮ ಪೋಷಕರನ್ನು ಭೇಟಿಯಾಗಿ ಎಂದು ಹೇಳಿದ್ದಾರೆ. ಈ ಪೋಸ್ಟ್ ಎಲ್ಲರ ಮನಗೆದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಲೇಖಕರ ಪ್ರಕಾರ, 75 ವರ್ಷಕ್ಕಿಂತ ಮೇಲ್ಪಟ್ಟ ಪೋಷಕರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇನ್ನು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲು ಸಹಾಯಕರು ಬೇಕಾಗುತ್ತದೆ. ಹಾಗಾಗಿ ಮಕ್ಕಳು ವಿದೇಶದಲ್ಲಿನ ಕೆಲಸ ಬಿಟ್ಟು ಭಾರತಕ್ಕೆ ಹಿಂತಿರುಗಿ ಅವರ ಜತೆ ಇರಿ, ಇಲ್ಲದಿದ್ದರೆ, ಭಾರತದಲ್ಲಿ ಒಂಟಿಯಾಗಿ ವಾಸಿಸುವ ನಿಮ್ಮ ಪೋಷಕರಿಗೆ ಕೇರ್ ಟೇಕರ್ ಅನ್ನು ವ್ಯವಸ್ಥೆ ಮಾಡಿ. ಇನ್ನು ಅವರು ಒಪ್ಪದಿದ್ದರೆ, ಅವರನ್ನು ಹಿರಿಯರ ಆರೈಕೆ ಕೇಂದ್ರದಲ್ಲಿ ಇರಿಸಿ. ಕನಿಷ್ಠ ಎರಡು ವರ್ಷಗಳಿಗೊಮ್ಮೆ ಅವರನ್ನು ಭೇಟಿ ಮಾಡಿ ಎಂದು ಹೇಳಿದ್ದಾರೆ.
A note to NRIs, esp Tambrahms.
— Amaruvi Devanathan (@amaruvi) June 8, 2025
Stop at some logical point and get back here to India.
If not, arrange a caretaker for your parents who live alone in India. In case they don't agree, accommodate them in an elder care facility. Visit them atleast once in two years. When your…
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬರು, "ನಾವು ನಮ್ಮ ಯಶಸ್ಸಿನ ಬಗ್ಗೆ ಮಾತ್ರ ಯೋಚಿಸಿದರೆ, ಪೋಷಕರು ತಮ್ಮ ಮಕ್ಕಳ ಯಶಸ್ಸನ್ನು ಬಯಸುತ್ತಾರೆ ಮತ್ತು ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ಉದ್ಯೋಗಾವಕಾಶಗಳಿಗಾಗಿ ವಿದೇಶಕ್ಕೆ ಹೋದಾಗ, ಈ ಯಶಸ್ಸು ಶಾಪವಾಗುತ್ತದೆ. ಇದು ಕುಟುಂಬಗಳನ್ನು ದೂರ ಮಾಡುತ್ತದೆ ಮತ್ತು ಪೋಷಕರನ್ನು ಮಕ್ಕಳಿಂದ ಬೇರ್ಪಡಿಸುತ್ತದೆ. ಇದರಲ್ಲಿ, ಯಾರೂ ತಪ್ಪಿತಸ್ಥರಲ್ಲ ಆದರೆ ಸಂದರ್ಭಗಳು ಇದಕ್ಕೆಲ್ಲ ಕಾರಣ" ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರೆಸ್ಟೋರೆಂಟ್‌ಗೆ ನುಗ್ಗಿ ದುಷ್ಕರ್ಮಿಗಳ ಅಟ್ಟಹಾಸ; ಊಟ ಬಿಟ್ಟು ಓಡಿದ ಜನ!
"70 ಅಥವಾ 80 ರ ದಶಕದಲ್ಲಿ ವಿದೇಶಕ್ಕೆ ತೆರಳಿ ತಮ್ಮ ಮಕ್ಕಳನ್ನು ಬೆಳೆಸಿದ ಕೆಲವು ಅನಿವಾಸಿ ಭಾರತೀಯರು ನನಗೆ ಗೊತ್ತಿದೆ. ಈಗ ಅವರ ಮಕ್ಕಳು ಸಹ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಾಗಾಗಿ ಅವರು ತಮ್ಮ ಜತೆ ಇರಲು ಬಯಸುವ ಸಂಬಂಧಿಕರನ್ನು ಹುಡುಕುತ್ತಿದ್ದಾರೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.