Viral News: ಕಳ್ಳರಿಗೇ ಚಮಕ್ ಕೊಟ್ಟು ತಮ್ಮ ಕಾರನ್ನು ವಾಪಸ್ ಪಡೆದ ಕಿಲಾಡಿ ಕಪಲ್! ಏನಿದು ಪ್ರಕರಣ?
ಬ್ರಿಟನ್ನ ದಂಪತಿಯ ಜಾಗ್ವಾರ್ ಇ-ಪೇಸ್ ಕಾರನ್ನು ಕಳ್ಳರು ಕಳ್ಳತನ ಮಾಡಿದ್ದು, ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಪೊಲೀಸರಿಂದ ಸಹಾಯ ಸಿಗದಿದ್ದಾಗ ಕಳ್ಳರಿಂದ ತಮ್ಮ ಕಾರನ್ನು ಕಳ್ಳತನ ಮಾಡಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಂಡನ್: ಇತ್ತೀಚೆಗೆ ಪಶ್ಚಿಮ ಲಂಡನ್ನ ಬ್ರೂಕ್ ಗ್ರೀನ್ನಲ್ಲಿ ದಂಪತಿಯ ಕಾರನ್ನು ಕಳ್ಳರು ಕಳ್ಳತನ ಮಾಡಿದ್ದಾರಂತೆ ಕಳೆದುಹೋದ ಕಾರನ್ನು ಹುಡುಕಿಕೊಡಿ ಎಂದು ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಪೊಲೀಸರು ಸರಿಯಾಗಿ ಸಹಾಯ ಮಾಡದಿದ್ದಕ್ಕೆ ದಂಪತಿ ತಮ್ಮ ಕಾರನ್ನು ತಾವೇ ಹುಡುಕಿಕೊಂಡಿದ್ದಾರೆ. ಏನಿದು ಘಟನೆ ಎಂದು ಆಶ್ಚರ್ಯಪಡುತ್ತಿದ್ದೀರಾ...? ಹೌದು ಕಳ್ಳರು ಕದ್ದ ಕಾರನ್ನು ಪೊಲೀಸರು ಹುಡುಕಿಕೊಡುವುದಕ್ಕೆ ಸಾಧ್ಯವಾಗದಿದ್ದಕ್ಕೆ ದಂಪತಿ ಕಳ್ಳರ ಬಳಿಯಿದ್ದ ಕಾರನ್ನು ತಾವೇ ಕಳ್ಳತನ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಮಿಯಾ ಫೋರ್ಬ್ಸ್ ಪಿರಿ ಮತ್ತು ಮಾರ್ಕ್ ಸಿಂಪ್ಸನ್ ಅವರ ಜಾಗ್ವಾರ್ ಇ-ಪೇಸ್ ಕಾರು ಇತ್ತೀಚೆಗೆ ಕಳುವಾಗಿತ್ತಂತೆ. ಈ ಕುರಿತು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರಂತೆ. ಆದರೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳದ ಹಿನ್ನೆಲೆ ಇದಕ್ಕೆ ಪರಿಹಾರವನ್ನು ತಾವೇ ಕಂಡುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬಸ್ನಲ್ಲಿ ಕಳ್ಳನ ಕರಾಮತ್ತು; ಕಂಡಕ್ಟರ್ಗೆ ಫುಲ್ ಶಾಕ್- ವಿಡಿಯೊ ವೈರಲ್
ಕಾರಿನಲ್ಲಿ ಅಳವಡಿಸಲಾದ ಏರ್ಟ್ಯಾಗ್ ಮೂಲಕ ಕಾರು ಇರುವ ಸ್ಥಳವನ್ನು ಗುರುತಿಸಿದ್ದಾರೆ.ಕೊನೆಗೆ ಅಲ್ಲಿದ್ದ ತಮ್ಮ ಕಾರನ್ನು ಕಳ್ಳರಿಗೆ ಗೊತ್ತಾಗದ ಹಾಗೇ ಕದ್ದು ವಾಪಸ್ ಮನೆಗೆ ತೆಗೆದುಕೊಂಡು ಬಂದಿದ್ದಾರಂತೆ. ಇದರ ಕುರಿತು ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಈ ದಂಪತಿಯ ಧೈರ್ಯವನ್ನು ಮೆಚ್ಚಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಾಕಷ್ಟು ಕಾಮೆಂಟ್ಗಳನ್ನು ಮಾಡಿದ್ದಾರೆ.