ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಇನ್‌ಸ್ಟಾದಲ್ಲಿ ಫಾಲೋವರ್ಸ್‍ ಕಡಿಮೆಯಾಯಿತೆಂದು ಪತಿಯನ್ನ ಬಿಟ್ಟು ಹೋದ ಪತ್ನಿ! ಏನಿದು ವಿಚಿತ್ರ ಘಟನೆ?

ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರು ಫಾಲೋವರ್ಸ್‍ಗಳನ್ನು ಕಳೆದುಕೊಂಡಿದ್ದಕ್ಕೆ ಪತ್ನಿ ನಿಶಾ ಎಂಬಾಕೆ ತನ್ನ ಪತಿ ವಿಜೇಂದ್ರನನ್ನು ಬಿಟ್ಟು ದೂರಹೋಗಿದ್ದಾಳೆ. ಪತಿಯ ಮಾತು ಕೇಳಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದು ಕಡಿಮೆ ಮಾಡಿದ್ದಕ್ಕೆ ಫಾಲೋವರ್ಸ್‍ ಸಂಖ್ಯೆ ಕಡಿಮೆಯಾಗಿದ್ದು ಎಂದು ನಿಶಾ ಹೀಗೆ ಮಾಡಿದ್ದಾಳಂತೆ. ಈ ಸುದ್ದಿ ಈಗ ವೈರಲ್‌(Viral News)ಆಗಿದೆ.

ಫಾಲೋವರ್ಸ್‍ ಕಡಿಮೆಯಾಯಿತೆಂದು ಪತಿಯನ್ನ ಬಿಟ್ಟು ಹೋದ ಪತ್ನಿ!

Profile pavithra Jun 12, 2025 5:57 PM

ಲಖನೌ: ಸೋಶಿಯಲ್ ಮೀಡಿಯಾಗಳಿಂದ ಜನರಿಗೆ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲ ಕೂಡ ಇದೆ. ಅದು ಅಲ್ಲದೇ ಈಗ ಲೈಕ್ಸ್‌ಗೋಸ್ಕರ ಯಾವುದ್ಯಾವುದೋ ರೀತಿಯ ರೀಲ್ಸ್‌ ಮಾಡಿ ಅಪ್‌ಲೋಡ್‌ ಮಾಡುತ್ತಾರೆ. ಇದೀಗ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ದಂಪತಿಯ ನಡುವೆ ಸೋಶಿಯಲ್ ಮೀಡಿಯಾದ ವಿಚಾರಕ್ಕೆ ಉಂಟಾದ ಕೌಟುಂಬಿಕ ಕಲಹವು ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಕಾರಣವಾಗಿದೆ. ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರು ಫಾಲೋವರ್ಸ್‍ಗಳನ್ನು ಕಳೆದುಕೊಂಡಿದ್ದಕ್ಕೆ ಪತ್ನಿಯೊಬ್ಬಳು ಪತಿಯನ್ನು ಬಿಟ್ಟು ದೂರಹೋಗಿದ್ದಾಳೆ.ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ರೀಲ್ಸ್ ಮಾಡುವ ನಿಶಾ, ತನ್ನ ಫಾಲೋವರ್ಸ್‍ ಕಡಿಮೆಯಾಗಿದ್ದನ್ನು ನೋಡಿ ಶಾಕ್‌ ಆಗಿದ್ದಾಳಂತೆ. ಪತಿಯ ಮಾತು ಕೇಳಿ ತಾನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವುದು ಕಡಿಮೆ ಮಾಡಿದೆ. ಇದರಿಂದ ಫಾಲೋವರ್ಸ್‍ ಸಂಖ್ಯೆ ಕಡಿಮೆಯಾಗಿದೆ ಎಂದು ಆಕೆ ಪತಿಯ ಜೊತೆ ಜಗಳವಾಡಿದ್ದಾಳೆ. ಮೂಲಗಳ ಪ್ರಕಾರ, ನಿಶಾ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುವುದರಿಂದ ದಂಪತಿಯ ನಡುವೆ ಈ ವಿಚಾರಕ್ಕೆ ಜಗಳ ನಡೆಯುತ್ತಿಂತೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದನ್ನು ಕಡಿಮೆ ಮಾಡಿ ಮನೆಯ ಜವಾಬ್ದಾರಿಗಳಿಗೆ ಹೆಚ್ಚಿನ ಗಮನ ನೀಡಬೇಕೆಂದು ಗಂಡ ಹೇಳಿದ್ದನಂತೆ. ಇದೇ ಅವನ ಪಾಲಿಗೆ ಮುಳುವಾಗಿದೆ.

ಹೌದು ನಿಶಾ ಗಂಡನ ಮಾತು ಕೇಳಿ ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್ ಮಾಡುವುದನ್ನು ಕಡಿಮೆ ಮಾಡಿದ್ದಳು. ಇದರಿಂದ ಫಾಲೋವರ್ಸ್‍ ಸಂಖ್ಯೆ ಕಡಿಮೆಯಾಗಿತ್ತಂತೆ. ಈ ಕಾರಣಕ್ಕೆ ಅವರ ನಡುವೆ ಜಗಳ ಉಂಟಾಯಿತು. ಹಾಗಾಗಿ ನಿಶಾ ತನ್ನ ಬ್ಯಾಗ್‍ ಪ್ಯಾಕ್ ಮಾಡಿ ಪತಿಯನ್ನು ಬಿಟ್ಟು ಪಿಲ್ಖುವಾದಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿದ್ದಾಳೆ. ಅಲ್ಲಿ, ಅವಳು ಹಾಪುರದ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ.ಈ ವಿವಾದದ ನಂತರ ವಿಜೇಂದ್ರ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನಂತೆ.