ಜೆನ್ ಜೀ ಪೀಳಿಗೆಯ ಪ್ರಯಾಣ ಮಾಹಿತಿಯನ್ನು ಬಹಿರಂಗಪಡಿಸಿದ ಕ್ಲಿಯರ್ಟ್ರಿಪ್
ಫ್ಲಿಪ್ಕಾರ್ಟ್ ಅಧೀನದ ಕಂಪನಿಯಾದ ಕ್ಲಿಯರ್ಟ್ರಿಪ್ ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ಆನ್ಲೈನ್ ಪ್ರಯಾಣ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಸಂಸ್ಥೆಯು ಇದೀಗ ಜೆನ್ ಜೀ ಪೀಳಿಗೆಯು ಭಾರತದ ಪ್ರವಾಸ ಕ್ಷೇತ್ರವನ್ನು ಹೇಗೆ ಬದಲಿಸುತ್ತಿದೆ ಎಂಬ ಮಾಹಿತಿ ಯುಳ್ಳ ವರದಿಯನ್ನು ಬಿಡುಗಡೆ ಮಾಡಿದೆ.


ಬೆಂಗಳೂರು: ಫ್ಲಿಪ್ಕಾರ್ಟ್ ಅಧೀನದ ಕಂಪನಿಯಾದ ಕ್ಲಿಯರ್ಟ್ರಿಪ್ ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ಆನ್ಲೈನ್ ಪ್ರಯಾಣ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಸಂಸ್ಥೆಯು ಇದೀಗ ಜೆನ್ ಜೀ ಪೀಳಿಗೆಯು ಭಾರತದ ಪ್ರವಾಸ ಕ್ಷೇತ್ರವನ್ನು ಹೇಗೆ ಬದಲಿಸುತ್ತಿದೆ ಎಂಬ ಮಾಹಿತಿ ಯುಳ್ಳ ವರದಿಯನ್ನು ಬಿಡುಗಡೆ ಮಾಡಿದೆ. ಡಿಜಿಟಲ್ ಆಸಕ್ತಿ ಮತ್ತು ಪ್ರಯಾಣದ ಆಸೆ ಹೊಂದಿ ರುವ ಈ ಪೀಳಿಗೆಯು ತನ್ನ ಅನುಕೂಲಕ್ಕಾಗಿ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಹೊಸ ರೀತಿಯ ಪ್ರಯಾಣವನ್ನು ಇಷ್ಟ ಪಡುತ್ತಿದ್ದಾರೆ ಮತ್ತು ತಮ್ಮಿಚ್ಛೆಯಂತೆ ವಿಭಿನ್ನವಾಗಿ ಖರ್ಚು ಮಾಡು ತ್ತಿದ್ದಾರೆ ಎಂದು ಈ ವರದಿ ತಿಳಿಸಿದೆ.
ಈ ಕುರಿತು ಮಾತನಾಡಿರುವ ಕ್ಲಿಯರ್ಟ್ರಿಪ್ ವಕ್ತಾರರು, “ಜೆನ್ ಜೀ ಪೀಳಿಗೆಯ ಪ್ರಯಾಣಿಕರು ಪ್ರಯಾಣದ ನಿಯಮಗಳನ್ನು ಬದಲಿಸುತ್ತಿದ್ದಾರೆ. ಅವರಿಗೆ, ಪ್ರಯಾಣವು ಕೇವಲ ವಿರಾಮ ಮಾತ್ರವೇ ಅಲ್ಲ, ಬದಲಿಗೆ ಅದು ಜೀವನಶೈಲಿಯೇ ಆಗಿದೆ. ವಿಶೇಷವಾಗಿ ಸ್ವಯಂ ಅಭಿವ್ಯಕ್ತಿಯ ಒಂದು ರೂಪವಾಗಿದೆ. ಅವರು ಸ್ವತಂತ್ರರಾಗಿದ್ದಾರೆ, ಡಿಜಿಟಲ್ ಪರಿಣತರಾಗಿದ್ದಾರೆ ಮತ್ತು ವೈಯಕ್ತಿಕ, ಆರಾಮದಾಯಕ ಅನುಭವಗಳಿಗಾಗಿ ಖರ್ಚು ಮಾಡಲು ಹೆಚ್ಚು ಬಯಸುತ್ತಾರೆ. ಸಾಮಾನ್ಯವಾಗಿ ಸಾಂಪ್ರದಾಯಿಕ ಗುಂಪು ಪ್ರವಾಸಗಳಿಗಿಂತ ಒಂಟಿಯಾಗಿ ಅಥವಾ ವಿಶಿಷ್ಟವಾಗಿ ಪ್ರಯಾಣ ಮಾಡಲು ಆದ್ಯತೆ ನೀಡುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: IPL 2025: ʻಫೈನಲ್ನಲ್ಲಿ ಅಪರಾಧವೆಸಗಿದ ಶ್ರೇಯಸ್ ಅಯ್ಯರ್ʼ-ಯೋಗರಾಜ್ ಸಿಂಗ್ ಆರೋಪ!
ಕ್ಲಿಯರ್ಟ್ರಿಪ್ ಜೆನ್ ಜೀ ಪ್ರಯಾಣ ವರದಿಯ ಪ್ರಮುಖ ಅಂಶಗಳು:
ಜೆನ್ ಜೀ ಸೋಲೋ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದೆ ಕ್ಲಿಯರ್ಟ್ರಿಪ್ ನ ಮಾಹಿತಿ ಪ್ರಕಾರ, ಜೆನ್ ಜೀ ಸೋಲೋ ಪ್ರಯಾಣವನ್ನು ಹೆಚ್ಚಾಗಿ ಬಯಸುತ್ತಿದೆ. ಇತರ ವಯಸ್ಸಿನ ಗುಂಪುಗಳಿಗೆ ಹೋಲಿಸಿದರೆ ಶೇ.7ರಷ್ಟು ಹೆಚ್ಚು ಸೋಲೋ ಪ್ರಯಾಣಗಳನ್ನು ಈ ಪೀಳಿಗೆ ಮಾಡುತ್ತದೆ. ಇದು ಸಾಂಪ್ರದಾಯಿಕ ಕುಟುಂಬ ಪ್ರವಾಸಗಳಲ್ಲಿ ಆಗಿರುವ ಗಮನಾರ್ಹ ಬದಲಾವಣೆಯನ್ನು ತೋರಿಸುತ್ತದೆ. ಅಲ್ಲಿ ಬಜೆಟ್ ಮತ್ತು ಆಯ್ಕೆಗಳು ಸೀಮಿತವಾಗಿರುತ್ತವೆ ಮತ್ತು ಅವೆಲ್ಲವನ್ನೂ ಹಿರಿಯ ಸದಸ್ಯರು ನಿರ್ಧರಿಸುತ್ತಾರೆ. ಇಂದಿನ ಜೆನ್ ಜೀ ಪ್ರಯಾಣಿಕರು ಸಾಹಸ, ಪ್ರಕೃತಿ ಪ್ರಿಯತೆ ಮತ್ತು ಶಾಂತಿಯನ್ನು ಬಯಸುವುದರಿಂದ ಸಾಂಪ್ರದಾಯಿಕ ಪ್ರವಾಸಗಳಿಗಿಂತ ಆಫ್ಬೀಟ್, ವಿಶೇಷ ಅನುಭವ ಒದಗಿಸುವ ತಾಣಗಳನ್ನು ಅನ್ವೇಷಿಸಲು ಬಯಸುತ್ತಾರೆ.
ಜೆನ್ ಜೀಯ ಪೇಮೆಂಟ್ ವಿಧಾನ ಅವರ ಆಯ್ಕೆಯನ್ನು ಸ್ಪಷ್ಟಪಡಿಸುತ್ತದೆ
ಈ ಸ್ವತಂತ್ರವಾಗಿ ಪ್ರಯಾಣ ಮಾಡುವ ಜೆನ್ ಜೀ ಪೀಳಿಗೆಯ ಮನೋಭಾವವನ್ನು ಅವರು ತಮ್ಮ ಪ್ರಯಾಣದಲ್ಲಿ ಹೇಗೆ ಪಾವತಿ ಮಾಡುತ್ತಾರೆ ಎಂಬುದರಲ್ಲಿಯೂ ತಿಳಿದುಕೊಳ್ಳಬಹುದು. ಜೆನ್ ಜೀ ಕ್ರೆಡಿಟ್ ಕಾರ್ಡ್ ಗಳಿಗಿಂತ ಯುಪಿಐ ಮತ್ತು ಡೆಬಿಟ್ ಕಾರ್ಡ್ ಬಳಕೆಗೆ ಹೆಚ್ಚು ಒಲವು ತೋರುತ್ತಿದೆ. ಇತರ ವಯಸ್ಸಿನ ಗುಂಪುಗಳಿಗೆ ಹೋಲಿಸಿದರೆ ಶೇ.10ರಷ್ಟು ಹೆಚ್ಚು ಯುಪಿಐ ವಹಿವಾಟುಗಳನ್ನು ಮಾಡುತ್ತಿದೆ. ಇಎಂಐ- ಆಧಾರಿತ ಪ್ರಯಾಣ ಪಾವತಿಗಳು ಕೂಡ ಈಗ ಆದ್ಯತೆಯ ಆಯ್ಕೆಯಾಗಿದ್ದು, ಶೇ.10 ಕ್ಕಿಂತ ಹೆಚ್ಚು ಜೆನ್ ಜೀ ಬಳಕೆದಾರರು ಈ ವಿಧಾನವನ್ನು ಆಯ್ಕೆ ಮಾಡುತ್ತಾರೆ. ಬಜೆಟ್ ಮಿತಿಗಳಿಗೆ ಒಳಗಾಗದೆ ಐಷಾರಾಮಿ ಪ್ರಯಾಣ ಬಯಸುವ ಜೆನ್ ಜೀ ಆಸೆಯನ್ನು ಈ ಮಾಹಿತಿ ಸ್ಪಷ್ಟಪಡಿಸುತ್ತದೆ.
ಜೆನ್ ಜೀ ಸೌಕರ್ಯಕ್ಕೆ ಆದ್ಯತೆ ನೀಡುತ್ತದೆ
ಇನ್ನೊಂದು ಹೊಸ ಟ್ರೆಂಡ್ ಏನೆಂದರೆ, ಹಿರಿಯ ವಯಸ್ಸಿನ ಗುಂಪುಗಳಿಗೆ ಹೋಲಿಸಿದರೆ ಜೆನ್ ಜೀ ಊಟ ಒಳಗೊಂಡಿರುವ ಟಿಕೆಟ್ ಬುಕಿಂಗ್ ಅನ್ನು ಬಯಸುತ್ತದೆ. ಈ ಮೂಲಕ ಜೆನ್ ಜೀ ಹೆಚ್ಚಿನ ಅನುಕೂಲಕ್ಕೆ ಮತ್ತು ಸಂಪೂರ್ಣ ಸೇವೆ ಪಡೆಯುವ ವಿಚಾರಕ್ಕೆ ಆದ್ಯತೆ ನೀಡುತ್ತಿರುವುದನ್ನು ತಿಳಿಯಬಹುದಾಗಿದೆ.
ಫ್ಲೆಕ್ಸಿಬಿಲಿಟಿ ಮತ್ತು ಮೌಲ್ಯಕ್ಕೆ ಹೆಚ್ಚು ಗಮನ
ಜೆನ್ ಜೀ ಪ್ರಯಾಣಿಕರು ಕ್ಲಿಯರ್ಟ್ರಿಪ್ನ ಕ್ಲಿಯರ್ಚಾಯ್ಸ್ ನಂತಹ ಫ್ಲೆಕ್ಸಿಬಲ್ ಪ್ರಯಾಣ ಆಯ್ಕೆ ಗಳನ್ನು ಆಯ್ಕೆ ಮಾಡುವ ಸಾಧ್ಯತೆ ಜಾಸ್ತಿ ಇದೆ. ಇದು ಅವರಿಚ್ಛೆಯಂತೆ ಮತ್ತು ತಕ್ಷಣವೇ ಪ್ರಯಾಣ ಹೋಗುವ ಆಯ್ಕೆಯ ಮೇಲೆ ಅವರ ಆದ್ಯತೆಯನ್ನು ತಿಳಿಸುತ್ತದೆ. ಅವರು ಇತರ ವಯಸ್ಸಿನ ಗುಂಪು ಗಳಿಗಿಂತ 1.5 ಪಟ್ಟು ಹೆಚ್ಚು ಸೂಪರ್ಕಾಯಿನ್ಸ್ ನಂತಹ ರಿವಾರ್ಡ್ ಪಾಯಿಂಟ್ ಗಳನ್ನು ಮತ್ತು ಪ್ರಯಾಣ ಕೂಪನ್ ಗಳನ್ನು ಬಳಸಿಕೊಳ್ಳುತ್ತಾರೆ. 10 ರಲ್ಲಿ ಒಬ್ಬರಾದರೂ ಬಳಸುತ್ತಾರೆ. ಹೆಚ್ಚು ಪ್ರಯೋಜನ ಪಡೆಯುವ ಮತ್ತು ಫ್ಲೆಕ್ಸಿಬಲ್ ಆದ ಪ್ರಯಾಣದ ಕಡೆಗಿನ ಅವರ ಗಮನವನ್ನು ಈ ಮಾಹಿತಿ ತಿಳಿಸುತ್ತದೆ.