Viral Video: ಫುಡ್ ಡೆಲಿವರಿ ಮಾಡೋಕೆ ಬಂದಿದ್ದ ಡೆಲಿವರಿ ಬಾಯ್ಗೆ ಕಾದಿತ್ತು ಸರ್ಪ್ರೈಸ್; ಈ ವಿಡಿಯೊ ನೋಡಿ
ಡೆಲಿವರಿ ಮಾಡಲು ಬಂದ ಜೊಮಾಟೊ ಡೆಲಿವರಿ ಏಜೆಂಟ್ ಒಬ್ಬನಿಗೆ ಜನರ ಗುಂಪೊಂದು ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಬರ್ತ್ಡೇ ವಿಶ್ ಮಾಡಿ ಆತನಿಗೆ ಸಿಹಿ ತಿನ್ನಿಸಿದ್ದಾರೆ. ಇದನ್ನೆಲ್ಲಾ ನೋಡಿ ಅವನ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಈ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.


ಜೀವನದಲ್ಲಿ ಕೆಲವೊಮ್ಮೆ ಸಿಗುವ ಸಣ್ಣಪುಟ್ಟ ಸರ್ಪ್ರೈಸ್(Surprise)ಗಳು ಸಾಕಷ್ಟು ಖುಷಿ ನೀಡುತ್ತವೆ. ಬರ್ತ್ಡೇ ದಿನ ನಮಗೆ ತಿಳಿಯದಂತೆ ಪ್ರೀತಿಪಾತ್ರರು ನೀಡುವ ಸಣ್ಣ ಗಿಫ್ಟ್ ಕೂಡ ಕಣ್ಣಂಚಿನಲ್ಲಿ ಖುಷಿಯ ಕಣ್ಣೀರು ತರಿಸುತ್ತದೆ. ಹೌದು ಇಂತಹ ಖುಷಿಯ ಕ್ಷಣಕ್ಕೆ ಜೊಮಾಟೊ ಫುಡ್ ಡೆಲಿವರಿ ಏಜೆಂಟ್ ಒಬ್ಬ ಸಾಕ್ಷಿಯಾಗಿದ್ದಾನೆ. ಜನರ ಗುಂಪೊಂದು ಜೊಮಾಟೊ(Zomato) ಡೆಲಿವರಿ ಏಜೆಂಟ್ ಒಬ್ಬನಿಗೆ ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಆರ್ಡರ್ ತಲುಪಿಸಲು ಹೋದಾಗ ಜನರಿಂದ ಸಿಕ್ಕ ಸಪ್ರೈಸ್ ನೋಡಿ ಆತನ ಕಣ್ಣಲ್ಲಿ ಆನಂದಭಾಷ್ಪವೇ ಹರಿದಿದೆ. ಈ ಅಪರೂಪದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಡೆಲಿವರಿ ಏಜೆಂಟ್ ಆರ್ಡರ್ ತಲುಪಿಸಲು ಬಂದಾಗ ಜನರ ಗುಂಪಿನಲ್ಲಿದ್ದ ಯಾರೋ ಒಬ್ಬರು ಬಂದು ಅವನ ಕಣ್ಣುಗಳನ್ನು ಮುಚ್ಚಿಕೊಂಡು ಅವನನ್ನು ಕೋಣೆಯೊಂದರ ಒಳಗೆ ಕರೆದೊಯ್ಯುದಿದ್ದಾರೆ. ಒಳಗೆ ಹೋದ ನಂತರ ಎಲ್ಲರೂ ಜೋರಾಗಿ ಅವನಿಗೆ "ಹುಟ್ಟುಹಬ್ಬದ ಶುಭಾಶಯಗಳು" ಎಂದು ಚಪ್ಪಾಳೆ ತಟ್ಟಿ ಹೇಳಿದ್ದಾರೆ. ಹಾಗೇ ಸಿಹಿ ತಿನ್ನಿಸಿ ಶುಭಾಶಯ ಕೋರಿದ್ದಾರೆ. ಅಂದು ಆ ಏಜೆಂಟ್ನ 40ನೇ ವರ್ಷದ ಹುಟ್ಟುಹಬ್ಬವಾಗಿತ್ತು. ಈ ಸಪ್ರೈಸ್ ಆತನ ಕಣ್ಣಂಚಿನಲ್ಲಿ ನೀರು ತರಿಸಿತ್ತಂತೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಸಾಕಷ್ಟು ಜನರು ಇದನ್ನು ನೋಡಿ ಕಾಮೆಂಟ್ ಮಾಡಿದ್ದಾರೆ."ಇದು ತುಂಬಾ ಅದ್ಭುತವಾಗಿದೆ. ಇನ್ನೊಬ್ಬರ ಮುಖದಲ್ಲಿ ನಗು ಮೂಡಿಸುವುದು ಒಳ್ಳೆಯ ಕೆಲಸವೆಂದು ಕಾಮೆಂಟ್ ಮಾಡಿದ್ದಾರೆ. ಜೊಮಾಟೊ ಕಂಪನಿ ಕೂಡ ತನ್ನ ಅಧಿಕೃತ ಖಾತೆಯಲ್ಲಿ ಆತನಿಗೆ ವಿಶ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪೊಲೀಸಪ್ಪನ ಹೆಂಡ್ತಿ ಶೋಕಿಗೆ ಸರ್ಕಾರ ವಾಹನವೇ ಬೇಕು! ಈ ವಿಡಿಯೊ ನೋಡಿ
2023 ರಲ್ಲಿ, ಇದೇ ರೀತಿಯ ಹೃದಯಸ್ಪರ್ಶಿ ಕ್ಷಣವು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತು. ಸ್ನೇಹಿತರ ಗುಂಪೊಂದು ಹೊಸ ವರ್ಷವನ್ನು ಸ್ವಾಗತಿಸುತ್ತಾ, ತಮಗಾಗಿ ಮಾತ್ರವಲ್ಲದೆ ಮಧ್ಯರಾತ್ರಿಯಲ್ಲಿ ತಮ್ಮ ಆರ್ಡರ್ ಅನ್ನು ಡೆಲಿವರಿ ಮಾಡಲು ಬಂದ ಜೊಮಾಟೊ ಡೆಲಿವರಿ ಏಜೆಂಟ್ ಅನ್ನು ಸಹ ಈ ಸಂಭ್ರಮದಲ್ಲಿ ಸೇರಿಸಿಕೊಂಡಿತ್ತು.ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ಸ್ನೇಹಿತರು ಡೆಲಿವರಿ ಏಜೆಂಟ್ಗೆ ಆತ ಆಗಷ್ಟೇ ಡೆಲಿವರಿ ನೀಡಿದ ಹೊಸ ವರ್ಷದ ಕೇಕ್ ಕತ್ತರಿಸಲು ತಮ್ಮೊಂದಿಗೆ ಸೇರಿಸಿಕೊಂಡಿದ್ದಾರೆ.