`ವಿಶ್ವ ಪರಿಸರ ದಿನ’ದಂದು ಬೆಂಗಳೂರಿನಲ್ಲಿ ತನ್ನ ಮೊದಲ ಕಂಪನಿ ಮಾಲೀಕತ್ವದ ಶೋರೂಂ ಪ್ರಾರಂಭಿಸಿದ `ನ್ಯೂಮರೋಸ್ ಮೋಟಾರ್ಸ್’
ವಿವಿಧ ಉದ್ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಮುಂದಿನ ತಲೆಮಾರಿನ `ಒಇಎಂ’(ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್) ಸಂಸ್ಥೆಯಾದ `ನ್ಯೂಮರೋಸ್ ಮೋಟಾರ್ಸ್’ ಇಂದು ಬೆಂಗಳೂರಿನ ರಾಜಾಜಿನಗರದಲ್ಲಿ ತನ್ನ ಮೊದಲ ಕಂಪನಿ ಮಾಲೀಕತ್ವದ, ಕಂಪನಿ-ಚಾಲಿತ (ಕೊಕೊ) ಶೋರೂಂ ಅನ್ನು ಉದ್ಘಾಟಿಸಿದೆ


ಬೆಂಗಳೂರು: ದೇಶೀಯ, ವಿವಿಧ ಉದ್ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಮುಂದಿನ ತಲೆಮಾರಿನ `ಒಇಎಂ’(ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್) ಸಂಸ್ಥೆಯಾದ `ನ್ಯೂಮರೋಸ್ ಮೋಟಾರ್ಸ್’ ಬೆಂಗಳೂರಿನ ರಾಜಾಜಿನಗರದಲ್ಲಿ ತನ್ನ ಮೊದಲ ಕಂಪನಿ ಮಾಲೀಕತ್ವದ, ಕಂಪನಿ-ಚಾಲಿತ (ಕೊಕೊ) ಶೋರೂಂ ಅನ್ನು ಉದ್ಘಾಟಿಸಿದೆ. ಈ ಉದ್ಘಾಟನೆಯು ವಿಶ್ವ ಪರಿಸರ ದಿನಾಚರಣೆಯೊಂದಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಇದು ಭಾರತದ ಬೆಳೆಯುತ್ತಿರುವ ನಗರ ಮತ್ತು ಸ್ವಯಂ ಉದ್ಯೋಗಿ ಜನಸಂಖ್ಯೆಗೆ ಸುಸ್ಥಿರ ವಾಹನ ವ್ಯವಸ್ಥೆಯನ್ನು ವೇಗವರ್ಧನೆಗೊಳಿಸುವ ನಿಟ್ಟಿನಲ್ಲಿ ಸಾಂಕೇತಿಕ ಹೆಜ್ಜೆಯಾಗಿದೆ.
ಈ ಶೋರೂಂ ಸಂಪೂರ್ಣ `ಡಿಪ್ಲೋಸ್’ ಶ್ರೇಣಿಯನ್ನು ಹೊಂದಿದ್ದು ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಬಾಳಿಕೆ ಎಂಬ ಮೂರು ವಿನ್ಯಾಸ ಸ್ತಂಭಗಳ ಮೇಲೆ ಗಮನಹರಿಸಿದೆ. `ಡಿಪ್ಲೋಸ್ ಮ್ಯಾಕ್ಸ್’ ಹೊಸದಾಗಿ ಬಿಡುಗಡೆಯಾದ ಮಲ್ಟಿ-ಯುಟಿಲಿಟಿ ಇ-ಸ್ಕೂಟರ್ ಆಗಿದ್ದು, ಇದು 140 ಕಿ.ಮೀ ಐಡಿಸಿ ಶ್ರೇಣಿ ಮತ್ತು 3-4 ಗಂಟೆಗಳ ಪೂರ್ಣ ಚಾರ್ಜ್ ಸಮಯವನ್ನು ಹೊಂದಿದೆ. ಇದು `ಸೋನಿಕ್ ಸಿಲ್ವರ್’, `ಕಾಸ್ಮೋಸ್ ಬ್ಲೂ’ ಮತ್ತು`ಕ್ರಿಮ್ಸನ್ ರೆಡ್’ ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: Bangalore Stampede: ‘ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಕಾಲ್ತುಳಿತ- ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ದೂರು
ಹೊಸ ಶೋರೂಂ, ಸುಸ್ಥಿರ ನಾವೀನ್ಯತೆಗೆ `ನ್ಯೂಮರೋಸ್ ಮೋಟಾರ್ಸ್’ನ ಬದ್ಧತೆಯನ್ನು ತನ್ನ ಗ್ರಾಹಕರಿಗೆ ಮತ್ತಷ್ಟು ಸನಿಹವಾಗಿಸುತ್ತದೆ. ಲಭ್ಯತೆ, ನೈಜ-ಪ್ರಪಂಚದ ಕಾರ್ಯಕ್ಷಮತೆ ಮತ್ತು ನಿರ್ದಿಷ್ಟ ಉದ್ದೇಶ-ಆಧರಿತ ವಿನ್ಯಾಸದಲ್ಲಿ ಬೇರೂರಿರುವ ಅತ್ಯುತ್ತಮ ದರ್ಜೆಯ ಅನುಭವವನ್ನು ಇದು ನೀಡುತ್ತದೆ.
1000 ಚದರ ಅಡಿಯಲ್ಲಿ ವ್ಯಾಪಿಸಿರುವ ರಾಜಾಜಿನಗರದ ಶೋರೂಂಅನ್ನು ಪ್ರತಿಯೊಬ್ಬರಿಗಾಗಿ ನಿರ್ಮಿಸಲಾಗಿದೆ, ನಿರ್ದಿಷ್ಟ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ವೈಯಕ್ತಿಕ ವಾಹನ ವ್ಯವಸ್ಥೆ ಗಾಗಿ ಹುಡುಕುವ ಕುಟುಂಬಗಳಿಂದ ಹಿಡಿದು ವಿಶ್ವಾಸಾರ್ಹ ಕೆಲಸಗಾರರನ್ನು ಹುಡುಕುವ ಉದ್ಯಮಿ ಗಳು ಮತ್ತು ಗಿಗ್ ಕಾರ್ಮಿಕರವರೆಗೆ ವ್ಯಾಪಕ ಶ್ರೇಣಿಯ ಬಳಕೆದಾರರಿಗೆ ಇದನ್ನು ಒಂದೇ ಸೂರಿನಡಿ ವಿದ್ಯುತ್ ಚಾಲಿತ ವಾಹನ (ಇವಿ) ತಾಣವಾಗಿ ಕ್ರಿಯಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.

ಈ ವೈವಿಧ್ಯತೆಯನ್ನು ಪ್ರತಿಬಿಂಬಿಸಲು, ಹೊಸ ಶೋರೂಂಅನ್ನು ಎರಡು ಅನುಭವ ವಲಯಗಳಾಗಿ ವಿಂಗಡಿಸಲಾಗಿದೆ:
ಕುಟುಂಬ ವಲಯ : ದೈನಂದಿನ ವೈಯಕ್ತಿಕ ಬಳಕೆಗಾಗಿ ನಿರ್ಮಿಸಲಾದ ಮಾದರಿಗಳನ್ನು ಪ್ರದರ್ಶಿಸುವ ಈ ವಲಯವು ಆಧುನಿಕ ಭಾರತೀಯ ಕುಟುಂಬಗಳಿಗೆ ಆರಾಮ-ಕೇಂದ್ರಿತ ವಿನ್ಯಾಸ, ರೋಮಾಂಚಕ ಬಣ್ಣಗಳು ಮತ್ತು ಸ್ಮಾರ್ಟ್ ವಾಹನ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುತ್ತದೆ.
ವ್ಯಾಪಾರ ವಲಯ : ವೇಗವಾಗಿ ಬೆಳೆಯುತ್ತಿರುವ ಭಾರತದ ಸ್ವಯಂ ಉದ್ಯೋಗಿ ವಲಯಕ್ಕಾಗಿ ವಿನ್ಯಾಸಗೊಳಿಸಲಾದ ಈ ಪ್ರದೇಶವು ಟಾಪ್ ಬಾಕ್ಸ್ ಗಳು, ಕ್ಯಾರಿಯರ್ ಫಿಟ್ಟಿಂಗ್ಸ್ ಮತ್ತು ವೈಯಕ್ತೀಕರಣಗೊಳಿಸಬಹುದಾದ ಆಡ್-ಆನ್ ಗಳಂತಹ ಲೋಡ್ ಸಾಗಿಸುವ ಪರಿಕರಗಳನ್ನು ಹೊಂದಿರುವ ಯುಟಿಲಿಟಿ-ಮೊದಲ ವಾಹನಗಳನ್ನು ಹೊಂದಿದೆ. ಹೈಪರ್ ಲೋಕಲ್ ಡೆಲಿವರಿಗಳಿಂದ ಹಿಡಿದು ಹೆಚ್ಚಿನ ಬೇಡಿಕೆಯ ಫ್ಲೀಟ್ ಕಾರ್ಯಾಚರಣೆಗಳವರೆಗೆ, ಈ ವಲಯವು ಉದ್ಯಮಿಗಳಿಗೆ ಪ್ಲಗ್-ಅಂಡ್-ಪ್ಲೇ ವಾಹನಗಳನ್ನು ಒಳಗೊಂಡಿದೆ.
`ನ್ಯೂಮರೋಸ್ ಮೋಟಾರ್ಸ್’ ಟೆಸ್ಟ್ ರೈಡ್ ಅನ್ನು ಮರು ವ್ಯಾಖ್ಯಾನಿಸುತ್ತಿದೆ. ಪ್ರತಿಯೊಬ್ಬ ಗ್ರಾಹಕರು ನೈಜ-ಪ್ರಪಂಚದ ಸಂಚಾರ ಮತ್ತು ಭೂಪ್ರದೇಶದ ಪರಿಸ್ಥಿತಿಗಳನ್ನು ಅನುಕರಿಸಲು ವಿನ್ಯಾಸಗೊಳಿಸಲಾದ ಕ್ಯುರೇಟೆಡ್ ಪರೀಕ್ಷಾ ಮಾರ್ಗವನ್ನು ಪ್ರವೇಶಿಸಿ, ನೈಜ ರೀತಿಯ ಅನುಭವ ಪಡೆಯಬಹುದು. ಈ ಪರೀಕ್ಷಾ ಅನುಭವಗಳನ್ನು ಇನ್-ಸ್ಟೋರ್ ವಿವರಿಸುವ ವೀಡಿಯೊಗಳು ಬೆಂಬಲಿಸುತ್ತವೆ. ಅವು ಮೊದಲ ಬಾರಿಗೆ ಇವಿ ಸವಾರರಿಗೆ ಮಾರ್ಗದರ್ಶನ ನೀಡಲು ಮತ್ತು ಆತ್ಮವಿಶ್ವಾಸದ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಶಕ್ತಗೊಳಿಸಲು ನೆರವಾಗುತ್ತವೆ.
ಇದಲ್ಲದೆ, ವಾಕ್-ಇನ್ ಗ್ರಾಹಕರನ್ನು ಪ್ರತಿ ಉತ್ಪನ್ನ ಮತ್ತು ಪರಿಕರಗಳಾದ್ಯಂತ ಸ್ಪಷ್ಟವಾಗಿ ಪ್ರದರ್ಶಿಸಲಾದ `ಯು.ಎಸ್.ಪಿ.’ಗಳೊಂದಿಗೆ ಸ್ವಾಗತಿಸಲಾಗುತ್ತದೆ, ಇದು ತಾಂತ್ರಿಕ ಸಹಾಯದ ಅಗತ್ಯವಿಲ್ಲದೆ ಅನ್ವೇಷಿಸಲು, ಹೋಲಿಸಲು ಮತ್ತು ಆಯ್ಕೆ ಮಾಡಲು ನೆರವಾಗುತ್ತದೆ.
ನ್ಯೂಮರೋಸ್ ಒಂದು ದಿನದಲ್ಲಿ ಸೇವೆ ಮತ್ತು ಡೆಲಿವರಿಯ ಭರವಸೆ ನೀಡುತ್ತದೆ,ಆದ್ದರಿಂದ ನೀವು ಒಂದೇ ದಿನದಲ್ಲಿ ವಾಹನದೊಂದಿಗೆ ರಸ್ತೆಗೆ ಇಳಿಯಬಹುದು.
ಸ್ವಚ್ಛ ಮತ್ತು ಪರಿಸರ ಸ್ನೇಹಿ ವಾಹನ ವಲಯಕ್ಕೆ ತನ್ನ ಬದ್ಧತೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ `ನ್ಯೂಮೆರೋಸ್’ ತನ್ನ ಶೋರೂಂ ಹೊರಗೆ ಉಚಿತ ಸಾರ್ವಜನಿಕ ಇವಿ ಚಾರ್ಜಿಂಗ್ ಸಾಕೆಟ್ ಗಳನ್ನು ಸ್ಥಾಪಿಸಿದೆ. ಬ್ರಾಂಡ್ ಅನ್ನು ಲೆಕ್ಕಿಸದೆ ಇವು ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಲಭ್ಯವಿದೆ. ಏಕೆಂದರೆ ರಸ್ತೆಗಳನ್ನು ಸ್ವಚ್ಛ ಮತ್ತು ಮಾಲಿನ್ಯಮುಕ್ತವಾಗಿರಿಸಲು ಸಾಮೂಹಿಕ ಉಪಕ್ರಮಗಳ ಅಗತ್ಯವಿದೆ.
"ಈ ಶೋರೂಂ ಕೇವಲ ಚಿಲ್ಲರೆ ಮಾರಾಟ ಮಳಿಗೆಗಿಂತಲೂ ಮಿಗಿಲಾದುದು - ಇದು ನಮ್ಮ ಪ್ರಯಾಣ ಮತ್ತು ನಮ್ಮ ಭವಿಷ್ಯದ ಪ್ರತಿಬಿಂಬವಾಗಿದೆ,” ಎಂದು ನ್ಯೂಮರೋಸ್ ಮೋಟಾರ್ಸ್ ಸಂಸ್ಥಾಪಕ ಮತ್ತು ಸಿಇಒ ಶ್ರೇಯಸ್ ಶಿಬುಲಾಲ್ ಹೇಳಿದರು. "ವಿಶ್ವ ಪರಿಸರ ದಿನದಂದು, ಭಾರತದಲ್ಲಿ ತಯಾರಿಸಿದ ಪ್ರಾಯೋಗಿಕ, ಸ್ವಚ್ಛ ಮತ್ತು ನವೀನ ಸಾರಿಗೆ ಪರಿಹಾರಗಳನ್ನು ತಲುಪಿಸುವ ನಮ್ಮ ಭರವಸೆಯನ್ನು ನಾವು ದ್ವಿಗುಣಗೊಳಿಸುತ್ತಿದ್ದೇವೆ. ನಮ್ಮ ವಾಹನಗಳು, ವಿಶೇಷವಾಗಿ ಡಿಪ್ಲೋಸ್ ವೇದಿಕೆಯಲ್ಲಿ ನಿರ್ಮಿಸಿರುವ ವಾಹನಗಳನ್ನು ‘ಮಾಡಿ ಮುಗಿಸು' ತತ್ವಕ್ಕಾಗಿ ವಿನ್ಯಾಸಗೊಳಿಸಲಾಗಿದೆ - ಕುಟುಂಬದ ಕೆಲಸಗಳಿಂದ ಹಿಡಿದು ಹೆಚ್ಚಿನ-ಅವಧಿಯ ಬಳಕೆ ಅಗತ್ಯಗಳವರೆಗೆ ಇವುಗಳನ್ನು ಉಪಯೋಗಿಸಬಹುದಾಗಿದೆ,’’ ಎಂದು ಹೇಳಿದರು.
13.9 ದಶಲಕ್ಷ ಕಿಲೋಮೀಟರ್ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದ್ದು, ಇದು ಭಾರತೀಯ `ಒಇಎಂ’ವೊಂದರ ಅತಿದೊಡ್ಡ ಪರೀಕ್ಷೆಯಾಗಿದೆ. ಆ ಮೂಲಕ ನ್ಯೂಮೆರೋಸ್ ಮೋಟಾರ್ಸ್ ನಗರಗಳು, ಹವಾಮಾನ ಮತ್ತು ಬಳಕೆಯ ಪ್ರಕರಣಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಮೌಲ್ಯೀ ಕರಿಸಿದೆ. ಕಂಪನಿಯು ಪ್ರಸ್ತುತ 14 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು 2026-27ರ ಹಣಕಾಸು ವರ್ಷದ ವೇಳೆಗೆ 50 ನಗರಗಳಲ್ಲಿ 100 ವಿತರಕರನ್ನು ತಲುಪುವ ಗುರಿಯನ್ನು ಹೊಂದಿದೆ.