ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Parle-G: 5 ರೂ. ಬೆಲೆಯ ಭಾರತೀಯ ಬಿಸ್ಕೆಟ್‌ ಗಾಜಾದಲ್ಲಿ 2,400 ರೂ.ಗೆ ಮಾರಾಟ

ಭಾರತೀಯ ಮೂಲದ ಪಾರ್ಲೆ-ಜಿ ಬಿಸ್ಕೆಟ್‌ಗಳು ಕಡಿಮೆ ಬೆಲೆಯಿಂದ ಬಡವರ, ಮಧ್ಯಮ ವರ್ಗದ ಹಾಟ್‌ ಫೆವರೇಟ್‌ ಎನಿಸಿಕೊಂಡಿದೆ. ಆದರೆ ಯುದ್ಧದಿಂದ ಕಂಗಾಲಾದ ಗಾಜಾದಲ್ಲಿಆಹಾರ ಕೊರತೆ ತೀವ್ರವಾಗಿದ್ದು, ಈ ಬಿಸ್ಕೆಟ್‌ಗಳು ತಮ್ಮ ಮೂಲ ಬೆಲೆಗಿಂತ ಸುಮಾರು 500 ಪಟ್ಟು ದುಬಾರಿಯಾಗಿ ಮಾರಾಟವಾಗುತ್ತಿವೆ.

ಗಾಜಾದಲ್ಲಿ 5 ರೂ. ಬೆಲೆಯ ಭಾರತೀಯ ಬಿಸ್ಕೆಟ್‌  2,400 ರೂ.ಗೆ ಮಾರಾಟ

Profile Sushmitha Jain Jun 6, 2025 5:57 PM

ನವದೆಹಲಿ: ಭಾರತದ ಪ್ರತಿ ಮನೆಯಲ್ಲಿ ಚಹಾದೊಂದಿಗೆ (TEA), ಬಾಲ್ಯದ ನೆನಪುಗಳೊಂದಿಗೆ ಸೇರಿಕೊಂಡಿರುವ ಪಾರ್ಲೆ-ಜಿ ಬಿಸ್ಕೆಟ್‌ಗಳು (Parle-G Biscuits) ಯಾವತ್ತೂ ಐಷಾರಾಮಿ ಉತ್ಪನ್ನವಾಗಿರಲಿಲ್ಲ. ಆದರೆ ಯುದ್ಧದಿಂದ ಕಂಗಾಲಾದ ಗಾಜಾದಲ್ಲಿ (Gaza) ಆಹಾರ ಕೊರತೆ ತೀವ್ರವಾಗಿದ್ದು, ಈ ಬಿಸ್ಕೆಟ್‌ಗಳು ತಮ್ಮ ಮೂಲ ಬೆಲೆಗಿಂತ ಸುಮಾರು 500 ಪಟ್ಟು ದುಬಾರಿಯಾಗಿ ಮಾರಾಟವಾಗುತ್ತಿವೆ.

ಗಾಜಾದಿಂದ ಪರಿಸ್ಥಿತಿಯನ್ನು ವಿವರಿಸುವ ಇತ್ತೀಚಿನ ವೈರಲ್ ಪೋಸ್ಟ್‌ನಲ್ಲಿ, ಮುಂಬೈ ಮೂಲದ ಪಾರ್ಲೆ ಪ್ರಾಡಕ್ಟ್ಸ್ ತಯಾರಿಸುವ ಪಾರ್ಲೆ-ಜಿ ಬಿಸ್ಕೆಟ್‌ಗಳು 24 ಯೂರೋಗಿಂತಲೂ (ಸುಮಾರು 2,342 ರೂ.) ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ ಎಂದು ಒಬ್ಬ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಭಾರತದಲ್ಲಿ ಅತಿ ಕಡಿಮೆ ಬೆಲೆಯ ಆಹಾರ ಉತ್ಪನ್ನಗಳಲ್ಲಿ ಒಂದಾದ ಈ ಬಿಸ್ಕೆಟ್‌ನ ಈ ದರವು ಸಾಮಾಜಿಕ ಜಾಲತಾಣದಲ್ಲಿ ಆಶ್ಚರ್ಯ ಮೂಡಿಸಿದೆ. “ತೀರಾ ಕಾದ ನಂತರ ಇಂದು ನನ್ನ ಮಗಳು ರಾಫಿಫ್‌ಗೆ ಆಕೆಯ ಮೆಚ್ಚಿನ ಬಿಸ್ಕೆಟ್ ತಂದುಕೊಟ್ಟೆ. ಬೆಲೆ 24 ಯೂರೋಗಿಂತ ಹೆಚ್ಚಾಗಿದ್ದರೂ, ಆಕೆಗೆ ಈ ಖುಷಿಯನ್ನು ನಿರಾಕರಿಸಲಾಗಲಿಲ್ಲ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.



2023ರ ಅಕ್ಟೋಬರ್‌ನಲ್ಲಿ ತೀವ್ರಗೊಂಡ ಸಂಘರ್ಷ ಮತ್ತು ಇಸ್ರೇಲ್‌ನ ಸೇನಾ ಕಾರ್ಯಾಚರಣೆಯಿಂದ ಗಾಜಾಕ್ಕೆ ಆಹಾರ ಪೂರೈಕೆ ತೀವ್ರವಾಗಿ ಕಡಿಮೆಯಾಗಿದೆ. ಮಾರ್ಚ್ 2ರಿಂದ ಮೇ 19ರವರೆಗೆ ಈ ಪ್ಯಾಲೆಸ್ತೀನ್‌ ಪ್ರದೇಶವು ಸಂಪೂರ್ಣ ಮುತ್ತಿಗೆಯಲ್ಲಿತ್ತು. ಅಂತಾರಾಷ್ಟ್ರೀಯ ಒತ್ತಡದ ನಂತರ ಕೆಲವೇ ಮಾನವೀಯ ಟ್ರಕ್‌ಗಳಿಗೆ ಮಾತ್ರ ಅವಕಾಶ ನೀಡಲಾಯಿತು. ಗಾಜಾದ ರಾಜಕೀಯ ಮತ್ತು ಶಸ್ತ್ರಸಜ್ಜಿತ ಗುಂಪು ಹಮಾಸ್ ನೆರವನ್ನು ದುರುಪಯೋಗಪಡಿಸುತ್ತಿದೆ ಎಂದು ಆರೋಪಿಸಿರುವ ಇಸ್ರೇಲ್, ಸಾಂಪ್ರದಾಯಿಕ ಯುಎನ್ ಆಹಾರ ವಿತರಣೆಯನ್ನು ಸ್ಥಗಿತಗೊಳಿಸಿತು.

ಗಾಜಾದಲ್ಲಿ ದುಬಾರಿ ಬೆಲೆಗೆ ಸೀಮಿತವಾಗಿರುವುದು ಪಾರ್ಲೆ-ಜಿಗೆ ಮಾತ್ರವಲ್ಲ. “ಮೂಲ ಪೂರೈಕೆದಾರರಿಂದ ತೆರಿಗೆಯಿಂದ ತೊಂದರೆಯಿಲ್ಲ. ಈ ಸರಕುಗಳು ಮಾನವೀಯ ನೆರವಾಗಿ ಉಚಿತವಾಗಿ ಗಾಜಾಕ್ಕೆ ಬರುತ್ತವೆ. ಆದರೆ ಕೆಲವರಿಗೆ ಮಾತ್ರ ತಲುಪುತ್ತವೆ. ಕೊರತೆಯಿಂದ ಇವು ಬ್ಲ್ಯಾಕ್ ಮಾರುಕಟ್ಟೆಯಲ್ಲಿ ದುಬಾರಿಯಾಗಿವೆ” ಎಂದು ಗಾಜಾ ನಗರದ 31 ವರ್ಷದ ಸರ್ಜನ್ ಡಾ. ಖಾಲೆದ್ ಅಲ್ಶವ್ವಾ ತಿಳಿಸಿದ್ದಾರೆ. ಅವರಿಗೆ ಸಿಕ್ಕ ಪಾರ್ಲೆ-ಜಿ ಪ್ಯಾಕೆಟ್‌ಗೆ 240 ರೂ. ವೆಚ್ಚವಾಯಿತು. ಕೆಲವೆಡೆ 2,000 ರೂ.ಗಿಂತಲೂ ಹೆಚ್ಚಿನ ಬೆಲೆಯಿಲ್ಲ. ‘ಎಕ್ಸ್‌ಪೋರ್ಟ್ ಪ್ಯಾಕ್’ ಲೇಬಲ್‌ನ ಈ ಪ್ಯಾಕೆಟ್‌ಗಳಲ್ಲಿ ಬೆಲೆಯ ಉಲ್ಲೇಖವಿಲ್ಲ. “ಮೂರು ತಿಂಗಳಿಂದ ಬಾರ್ಡರ್ ಮುಚ್ಚಿದ್ದರಿಂ 20 ಲಕ್ಷ ಜನರಿಗೆ ಆಹಾರವಿಲ್ಲ. ಕೆಲವರು ಲೂಟಿ ಮಾಡಿ, ಈ ಆಹಾರವನ್ನು ದುಬಾರಿಯಾಗಿ ಮಾರಾಟ ಮಾಡುತ್ತಾರೆ” ಎಂದು ಡಾ. ಖಾಲೆದ್ ಹೇಳಿದ್ದಾರೆ.

ಗಾಜಾದ ಮಾರುಕಟ್ಟೆ ಬೆಲೆ

  • 1 ಕೆಜಿ ಸಕ್ಕರೆ: 4,914 ರೂ.
  • 1 ಲೀಟರ್ ಅಡುಗೆ ಎಣ್ಣೆ: 4,177 ರೂ.
  • 1 ಕೆಜಿ ಆಲೂಗಡ್ಡೆ: 1,965 ರೂ.
  • 1 ಕೆಜಿ ಈರುಳ್ಳಿ: 4,423 ರೂ.
  • 1 ಕಾಫಿ ಕಪ್: 1,800 ರೂ.

ಪಾರ್ಲೆ-ಜಿ ಮಹತ್ವ

ಪಾರ್ಲೆ-ಜಿ ಕೇವಲ ಆಹಾರವಲ್ಲ, ಭಾರತದ ಸ್ವದೇಶಿ ಚಳವಳಿಯ ಸಂಕೇತ. 1938ರಲ್ಲಿ ಆರಂಭವಾದ ಈ ಬಿಸ್ಕೆಟ್, ಬ್ರಿಟಿಷ್ ಐಷಾರಾಮಿ ತಿಂಡಿಗಳಿಗೆ ಸ್ಥಳೀಯ ಪರ್ಯಾಯವಾಗಿ ಜನಪ್ರಿಯವಾಯಿತು. ‘ಶ್ರಿಂಕ್‌ಫ್ಲೇಷನ್’ ತಂತ್ರದಿಂದ (ತೂಕ ಕಡಿಮೆ ಮಾಡಿ ಬೆಲೆ ಕಾಯ್ದುಕೊಳ್ಳುವುದು) ಇದು ಕಡಿಮೆ ಬೆಲೆಯಲ್ಲಿಯೇ ಉಳಿದಿದೆ. ಒಮ್ಮೆ 100 ಗ್ರಾಂ ಇದ್ದ 5 ರೂ. ಪ್ಯಾಕೆಟ್ ಈಗ 55 ಗ್ರಾಂಗೆ ಸೀಮಿತವಾಗಿದೆ. 2013ರಲ್ಲಿ 5,000 ಕೋಟಿ ರೂ. ಮಾರಾಟದೊಂದಿಗೆ ಮೊದಲ ಭಾರತೀಯ FMCG ಬ್ರಾಂಡ್ ಆಗಿ, 2011ರಲ್ಲಿ ನೀಲ್ಸನ್ ಪ್ರಕಾರ ವಿಶ್ವದ ಅತಿ ಹೆಚ್ಚು ಮಾರಾಟವಾದ ಬಿಸ್ಕೆಟ್ ಎನಿಸಿತ್ತು.